ಮೊಬೈಲ್ ಗೀಳಿನಿಂದ ವಿದ್ಯಾರ್ಥಿ ಸಮೂಹದಲ್ಲಿ ಕನ್ನಡ ಭಾಷಾ ಸಂಪತ್ತು ಕ್ಷೀಣಿಸುತ್ತಿದೆ: ಕ್ಷೇತ್ರ ಶಿಕ್ಷಣ ಇಲಾಖೆ ಬಿ ಆರ್ ಸಿ  ಡಿಡಿ ಹಾಲಪ್ಪ ಕಳವಳ ವ್ಯಕ್ತಪಡಿಸಿದರು

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೧೬

.

ಪಟ್ಟಣದ ಡಾ ಬಿ ಆರ್  ಅಂಬೇಡ್ಕರ್ ಪ್ರೌಡ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದೆ‌ ಭಾಷೆಯ ಬರವಣಿಗೆ ಕೌಶಲ್ಯ,ಸಾಹಿತ್ಯಾಸಕ್ತಿ ಕುಂಠಿತವಾಗುತ್ತಿದೆ.ನಾನು ಕೂಡ ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದರು ಸಹ ಕನ್ನಡ ಮಾಧ್ಯಮದಲ್ಲಿ ಕೆ ಇ ಎಸ್ ಪರೀಕ್ಷೆ ಪಾಸು ಮಾಡಿದ್ದೆನೆ . ಆದ್ದರಿಂದ ಶಾಲಾಕಾಲೇಜು ಅಂಗಳದಲ್ಲಿ ನಡೆಯುವ  ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಕಾರ್ಯಕ್ರಮಗಳು ಸಾಹಿತ್ಯಾಸಕ್ತಿ ಹೆಚ್ಚಿಸುವಲ್ಲಿ ಪೂರಕವಾಗಲಿವೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಕೆ. ವಿ ರಾಘವೇಂದ್ರ ಸ್ವಾಮಿ ವಿಶೇಷ ಉಪನ್ಯಾಸ ಮಂಡಿಸಿದರು ಭಾರತ ದೇಶದಲ್ಲಿ ಧರ್ಮ ಸಂಸ್ಕೃತಿಯ ಸಾರ ಹೊಂದಿರುವ ವಿಶಿಷ್ಟ ದೇಶವಾಗಿದ್ದು  ಕುಮಾವ್ಯಾಸನ   ಸಾಹಿತ್ಯ ಸ್ವತಂತ್ರ ಗ್ರಂಥ ಧಾರ್ಮಿಕ ಸ್ವರೂಪವಿರುವ ಗದಗಿನ ಭಾರತ  ಎಂದು ಕರೆಯಲ್ಪಡುವ ಕರ್ನಾಟಕ ಭಾರತ ಕಥಾಮಂಜರಿ ಕಾವ್ಯ ಇಂದಿಗೂ ಶ್ರಾವಣ ಮಾಸದಲ್ಲಿ ಪುರಾಣವಾಗಿ ಜನಸಾಮಾನ್ಯರ ಮಾನಸದಲ್ಲಿ ಉಳಿದಿದೆ..

  ಮಹಾಭಾರತ  ಮತ್ತು  ಮಹರ್ಷಿ ವಾಲ್ಮಿಕಿಯಂತ ರಾಮಾಯಣ   ಅನೇಕ ಮಹಾನ್ ಕವಿಗಳ ಗ್ರಂಥಗಳು ಎಲ್ಲಾ ಸಾಹಿತ್ಯಕ್ಕೆ ಮೂಲ ನೆಲೆಯಾಗಿವೆ .  

,ವ್ಯಾಸ ಮತ್ತು ವಾಲ್ಮೀಕಿ ಮಹರ್ಷಿಗಳು ಜೀವಂತವಾಗಿದ್ದ ಸಂದರ್ಭದಲ್ಲಿ ರಚಿಸಿದ  ರಾಮಾಯಣ ಹಾಗೂ ಮಹಾಭಾರತ ಮಹಾನ್ ಕಾವ್ಯಗಳು ಯಾವುದೇ ದಂತಕಥೆಗಳ. ನೈಜಘಟನೆಗಳ  ಇತಿಹಾಸಗಳಾಗಿವೆ‌.ಎಂದು ಸ್ಮರಿಸಿದರು.ನಿವೃತ್ತ ಶಿಕ್ಷಕರ ರಾಘವೇಂದ್ರ ಸ್ವಾಮಿ

ಕ.ಸಾ.ಪ ತಾಲೂಕು ಅಧ್ಯಕ್ಷೆ ಸುಜಾತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು,ಶಾಲಾ‌ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ   22 ಶಾಲಾಕಾಲೇಜುಗಳಲ್ಲಿ ವಿವಿಧ ವಿಷಯವಸ್ತುಗಳೊಂದಿಗೆ ಉಪನ್ಯಾಸಕ ಮಾಲೀಕೆಗಳ ಅಭಿಯಾನ‌ ನಡೆಯಲಿದ್ದು .ವಿದ್ಯಾರ್ಥಿ ಸಮೂಹದ ಉಜ್ವಲ ಭವಿಷ್ಯಕ್ಕೆ   ಸಹಕಾರಿಯಾಗಲಿದೆ.

ಸಾಹಿತಿ ಎನ್.ಟಿ.ಎರ್ರಿಸ್ವಾಮಿ ಮಾತನಾಡಿ,

ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣದ ಪರಿಕಲ್ಪನೆ ಇಂದಿಗೂ ಆದರ್ಶ.ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಬೇಕಿದೆ.ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ.ಸಾಹಿತ್ಯ ಲೋಕ ಶಿಕ್ಷಣದ ಒಂದು ಭಾಗವಾಗಿದ್ದು. ಸಾಹಿತ್ಯದ ಪ್ರಕಾರಗಳು ಬದುಕಿನ ಶೈಲಿಯ ಪ್ರತಿಬಿಂಬಗಳು ಎಂದು ತಿಳಿಸಿದರು.

ಜ್ಞಾನ ತರಂಗಿಣಿ ವಿದ್ಯಾಸಂಸ್ಥೆ ಕಾರ್ಯಧರ್ಶಿ ಹಾಗೂ ಸಾಹಿತ್ಯಪ್ರೇಮಿ ಪಿ ಎಸ್ ಅರವಿಂದನ್ ಮಾತನಾಡಿ ವಿಧ್ಯಾರ್ಥಿಗಳು ಮೊಬೈಲ್ ಗೀಳಿನ ದಾಸರಾಗದೆ  ತಮ್ಮ ಪಠ್ಯಪುಸ್ತಕ ಓದಿನ ಜೊತೆಗೆ  ಕನ್ನಡ ಭಾಷ ಕೌಶಲ್ಯವನ್ನು ಬೆಳೆಸಿಕೊಂಡು ನಾಡು ನುಡಿ ಸಂಸ್ಕೃತಿ ಇತಿಹಾದ ಪರಿಚಯ ಅತ್ಯವಶ್ಯವಾಗಿದ್ದು ತಾವುಗಳು ವಿದ್ಯಾರ್ಥಿ ದಿಸೆಯಿಂದಲೆ ಪದ್ಯ. ಪ್ರಬಂಧ .ಕವನ  ರಚಿಸುವ ಮೂಲಕ ಸಾಮಾನ್ಯ ಜ್ಞಾನ ಸಂಪತ್ತು ಬೆಳೆಸಿಕೊಂಡು ಉತ್ತಮ ಸಾಧನೆಗೈಯ್ಯುವಂತೆ    ಸಲಹೇ ನೀಡಿದರು  

ಡಾ. ಬಿ ಆರ್ ಅಂಬೇಡ್ಕರ್ ಶಾಲಾ ಮುಖ್ಯ ಶಿಕ್ಷಕರಾದ ಕೆ ಬಸವರಾಜರವರು ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು ಗ್ರಾಮೀಣ ಬಾಗದಲ್ಲಿ ಕನ್ನಡ ಭಾಷೆ ಹೆಚ್ಚು ಪ್ರಚಲಿತದಲ್ಲಿದ್ದು ನಗರ ಪಟ್ಟಣ ಪ್ರದೇಶಗಳಲ್ಲಿ ಕ್ರಮೇಣವಾಗಿ ಕ್ಷೀಣಿಸುತ್ತಿದೆ.ಕನ್ನಡ ನೆಲ ಜಲ.ಭಾಷೆ   ನಾವು ಉಸಿರಾಡುವ ಗಾಳಿ ಕನ್ನಡದ ಕಂಪು ಕನ್ನಡಕ್ಕೆ ೨೦೦೦ ಸಾವಿರ ವರ್ಷಗಳ ಇತಿಹಾಸವಿದೆ.  ವಿದ್ಯಾರ್ಥಿಗಳು ಭಾಷಕೌಶಲ್ಯದ ಜ್ಞಾನ ಜೊತೆಗೆ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಶಾಲೆಗೆ ಮತ್ತು ತಮ್ಮ ಪೋಷಕರಿಗೆ ಕೀರ್ತಿ ತರುವಂತಾಗಬೇಕೆಂದರು. 

 ಪ್ರಾಂಶುಪಾಲ ಎಡಿ ನಾಗಲಿಂಗಪ್ಪ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್  ಶಾಲಾ ಅಂಗಳದಲ್ಲಿ  ಕಸಾಪ ಬಳಗದಿಂದ ಕಾರ್ಯಕ್ರಮ ಪ್ರಾರಂಭ ಮಾಡುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆ. ಪೋಷಕರು ಆಧುನಿಕತೆಯಲ್ಲಿ  ಇಂಗ್ಲಿಷ್ ಶಾಲೆಗೆ ಮಾರುಹೋಗುವ ಪ್ರಸ್ತುತದಲ್ಲಿ.ಕನ್ನಡ ಮಾದ್ಯಮ ಶಾಲಾ  ಮಕ್ಕಳು ಕನ್ನಡ ಪಠ್ಯ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.ಆದರೆ ಬಹುತೇಕ ಕೆಲ ಕನ್ನಡ ಶಾಲಾ  ಕಡಟ್ಟಗಳು ದುಸ್ಥಿತಿಯಲ್ಲಿವೆ‌ ಎಂದು ಬೇಸರ ವ್ಯಕ್ತಪಡಿಸಿದರು..ಸಾಹಿತ್ಯ ಪರಿಷತ್ತು ಏರ್ಪಡಿಸಿರುವ ಕಾರ್ಯಕ್ರಮ ಅತ್ಯಂತ  ಉಪಯುಕ್ತವಾಗಲಿದ್ದು.ಭವಿಷ್ಯದಲ್ಲಿ ಭಾಷಣಕಾರರು,ಕವಿಗಳಾಗಿ  ಹೊರಹೊಮ್ಮಲು ಸಹಕಾರಿಯಾಗಲಿವೆ.ಆದ್ದರಿಂದ ತಾವುಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಳಿಚೋಡು ಹೋಬಳಿ‌‌ ಘಟಕದ ಕ.ಸಾ.ಪ ಅಧ್ಯಕ್ಷ  ಹಾಗೂ ಪತ್ರಕರ್ತ ಎಂ .ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ವಿದ್ಯಾರ್ಥಿಗಳು ನಾಡು ನುಡಿ ನೆಲ ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಅಭಿಮಾನ ಮೈಗೂಡಿಸಿಕೊಳ್ಳಬೇಕು.ವಿದ್ಯಾರ್ಥಿಗಳು ಕೆ.ಪಿ.ಎಸ್. ಸಿ   ಯುಪಿಎಸ್ ಸಿ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಆಯ್ಕೆಮಾಡಿಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದರು.

ಸಂದರ್ಭದಲ್ಲಿ    ಸಾಹಿತಿ ಡಿಸಿ ಮಲ್ಲಿಕಾರ್ಜುನ್ .ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಗೀತಾಮಂಜು, ,ತಾಲೂಕು ದೈಹಿಕ‌ ಪರಿವೀಕ್ಷಕ  ಸುರೇಶ್ ರೆಡ್ಡಿ, ಅಂಬೇಡ್ಕರ್ ಶಾಲೆಯ ಶಿಕ್ಷಕರಾದ .ಸೈನಾಥ. ನಾಗಲಿಂಗಪ್ಪ,ಸಾಹಿತಿ ಎನ್.ಟಿ.ಎರ್ರಿಸ್ವಾಮಿ,ಮುಖ್ಯಶಿಕ್ಷಕ ಬಸವರಾಜ್,ಕಸಾಪ ತಾಲೂಕು ಕಾರ್ಯದರ್ಶಿ ಮಾರಪ್ಪ,,ವಿವಿಧ ಹೋಬಳಿ ಕಸಾಪ ಪದಾಧಿಕಾರಿಗಳಾದ,ಧನ್ಯಕುಮಾರ್ ಎಚ್.ಎಂ.ಹೊಳೆ,ರೇವತಿ,ಮಾದಿಹಳ್ಳಿ ಮಂಜುನಾಥ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!