₹1ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ.ಬಿ.ದೇವೇಂದ್ರಪ್ಪ ಚಾಲನೆ
ಜಗಳೂರು ಸುದ್ದಿ:ಪಟ್ಟಣದ ಬಿಲಾಲ್ ಮಸೀದಿಯಿಂದ ಸರ್ಕಾರಿ ಪ್ರೌಢಶಾಲೆ ಹಾಗೂ ಇಂಡಿಯನ್ ಪೆಟ್ರೋಲ್ ಬಂಕ್ ವರೆಗೆ ₹ 1ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಬಿ.ದೇವೇಂದ್ರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು,ನನ್ನ ಆಡಳಿತಾವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕ್ಷೇತ್ರದ ಅಭಿವೃದ್ದಿಗಾಗಿ ₹5 ಕೋಟಿ ಅನುದಾನ ತರಲಾಗಿದ್ದು.ಪಟ್ಟಣದಲ್ಲಿ ಕಾಮಗಾರಿ ಸಂದರ್ಭದಲ್ಲಿ ಚರಂಡಿ ನಿರ್ಮಾಣ ಅಗಲೀಕರಣಕ್ಕೆ ಸಾರ್ವಜನಿಕರು ಸಹಕರಿಸಬೇಕು.ಕಾಮಗಾರಿ ಗುತ್ತಿಗೆದಾರರು ಕಳಪೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಪ.ಪಂ ಅಧ್ಯಕ್ಷ ನವೀನ್ ಕುಮಾರ್,ಸದಸ್ಯರಾದ ಶಕೀಲ್ ಅಹಮ್ಮದ್,ಮಹಮ್ಮದ್ ಅಲಿ,ಮುಖಂಡರಾದ ಶಿವಣ್ಣ,ಇಕ್ಬಾಲ್ ಅಹಮ್ಮದ್,ಕಲೀಲ್,ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್ ಸೇರಿದಂತೆಇದ್ದರು