ಜಗಳೂರು ತಾಲ್ಲೂಕಿನ ಕಾಮಗೇತನಹಳ್ಳಿ ಅಂಬೇಡ್ಕರ್ ವಸತಿ ಮೂರರ್ಜಿ ಶಾಲೆಯಲ್ಲಿ ಸ್ವಚತೆ ಮರಿಚಿಕೆಯಾಗಿದೆ ಜಿಪಂ ಸಿಇಓ ಮಾತಿಗೆ ಕಿಮ್ಮತ್ತು ನೀಡದ ಪ್ರಾಂಶುಪಾಲ ಅಂಬರೀಶನ ಅವಂತಾರ ಯಾಕೆ ಈತ ಈ ತರ ಎಲ್ಲಿದೆ ನಿನ್ನ ಪ್ರಮಾಣಿಕತೆ ಕಾರ್ಯವೈಕರಿಯ ಕರ್ತವ್ಯ.

ಸುದ್ದಿ ಜಗಳೂರು
ಶಾಲಾ ಆವರಣದಲ್ಲಿ ಹುಲ್ಲುಗಾವಲು ಬೆಳೆದು ವಿಷ ಜಂತುಗಳ ತಾಣವಾಗುತ್ತಿದೆ.ಈ ಶಾಲೆಗೆ ಕಳೆದ ದಿನಗಳ ಹಿಂದೆ ಜಿಪಂ ಸಿ.ಇ.ಓ ಸುರೇಶ್ ಇಟ್ನಾಳ್ ರವರು ಶಾಲೆಗೆ ಭೇಟಿ ನೀಡಿ ಸ್ವಚತೆ ಮಾಡಿ ಮಕ್ಕಳಿಗೆ ಆಟವಾಡಲು ಉತ್ತಮ ಮೈದಾನ ಕಲ್ಪಿಸಿ ಶೈಕ್ಷಣಿಕ ಕ್ರೀಡಾ ಸಾಂಸ್ಕ್ರತಿಕವಾಗಿ ಒತ್ತು ನೀಡಿ ಉತ್ತಮ ಆಟದ ಕ್ರೀಡಾಂಗಣ ನಿರ್ಮಿಸುವಂತೆ ತಿಳಿಸಿದ್ದರು ಸಹ ಇಲ್ಲಿ ಯಾವುದೇ ರೀತಿಯ ಬದಲಾವಣೆಯಾಗದೆ ಶಾಲಾ ಆವರಣದಲ್ಲಿ ಸ್ವಚತೆ ಮರಿಚೀಕೆಯಾಗಿದೆ. ಸರ್ಕಾರ ಕೋಟಿ ಕೋಟಿ ಅನುದಾನ ಕಲ್ಪಿಸಿ ಉತ್ತಮ ಸುಸರ್ಜಿತವಾದ ವಸತಿ ಶಾಲೆ ನಿರ್ಮಿಸಿ ಬಡ ಎಸ್ ಸಿ .ಎಸ್ ಟಿ ವಿಧ್ಯಾರ್ಥಿಗಳ ಶೈಕ್ಷಣಿಕ ಸಬಲಿಕರಣಕ್ಕಾಗಿ ಶ್ರಮಿಸುತಾ ಬಂದಿದ್ದರು ಸಹ ಇಂತ ನಿರ್ಲಕ್ಷ್ಯ ಅಂಬರೀಶ್ ಎಂಬ ಸೋಮಾರಿತನದ ಪ್ರಾಂಶುಪಾಲರಿಂದ ಆಡಳಿತ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ.ಮಕ್ಕಳ ದೈಹಿಕ ಮತ್ತು ಮನೋಬಲ ಮಾನಸಿಕ ಬೆಳವಣಿಗೆಗೆ ಪೂರಕ ವಾತವರಣ ಕಲ್ಪಿಸಿ ಹಾಸ್ಟೆಲ್ ನಲ್ಲಿ ಉತ್ತಮ ರುಚಿಕರವಾದ ಊಟ. ‌ಪಾಠ. ಪುಸ್ತಕ .ಮಕ್ಕಳ ಬೌದ್ದಿಕ ಬೆಳವಣಿಗೆಗೆ ಸಹಕಾರ ನೀಡಿ ಸ್ವಚತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅಶುಚಿತ್ವದಿಂದ ಅನಾರೋಗ್ಯ ಕಾಡುವುದಕ್ಕಿಂತ ಮುನ್ನ ಎಚ್ಚರ ವಹಿಸಿ ಇಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ ಒಟ್ಟಾರೆ ಮೇಲಾಧಿಕಾರಿಗಳಿಗೆ‌ ಕಿಮ್ಮತ್ತು ನೀಡದ ಪ್ರಾಂಶುಪಾಲರ ಉದ್ದಟತನ ಎದ್ದು ಕಾಣುತ್ತಿದೆ .
ಈ ಹಿಂದೆ ವಸತಿ ಶಾಲೆಯು ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ಕಿಸ್ಕೆಂದೆಯಂತ ಜಾಗದಲ್ಲಿ ಪ್ರಾರಂಭವಾದ ಶಾಲೆಯು ಇದೀಗ ಉನ್ನತ ವಿಧ್ಯಾಭ್ಯಾಸ ಮಾಡುವ ಮೆಡಿಕಲ್ ಇಂಜಿನೀರಿಂಗ್ ಕಾಲೇಜಿನಂತೆ ಕಂಗೋಳಿಸುತ್ತಿದೆ .ಇಂತ ವಿಶಿಷ್ಟ ಶಾಲಾಂಗಳ ಸ್ವಚತೆ ಬಹುಮುಖ್ಯವಾಗಿದೆ.ಇನ್ನು ವಸತಿ ಶಾಲಾ ಭೋದಕರು ಹಾಗೂ ಪ್ರಾಂಶುಪಾಲರು ಸಿಬ್ಬಂದಿಗಳು ಸ್ಥಳದಲ್ಲಿಯೇ ವಾಸಿಸಬೇಕು ಎಂಬ ನೀಯಮವಿದೆ ಆದರೆ ಇಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳು ನಿನ್ನೆ ಮೊನ್ನೆಯದಲ್ಲ ಇದು ಸರ್ವೇಸಾಮಾನ್ಯವಾಗಿದೆ ‌.ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ನೀಡಲು ಉತ್ತಮವಾದ ತಾಜಾ ಸೋಪ್ಪು ತರಕಾರಿ ದಿನಸಿ ಬ್ಯಾಳೆ ಇನ್ನಿತರೆ ಆಹಾರ ಸಾಮಾಗ್ರಿಗಳು ಸಮಯಕ್ಕೆ ಸರಿಯಾಗಿ ತಲುಪಿಸಿ ಪೌಷ್ಟಿಕ ಆಹಾರ ನೀಡಬೇಕು ಎಂಬ ನೀಯಮವಿದೆ ಆದರೆ‌ ಮೇನೋ ಪಾಲನೆಯಾಗುತ್ತಿಲ್ಲ ಪ್ರಾಂಶುಪಾಲರನ್ನ ಪ್ರಶ್ನೇಸಿದರೆ ಬೇರೆಡೆಗೆ ವರ್ಗಾವಣೆ ಮಾಡಿಸಿ ಎಂದು ಹೇಳುವ ಈತನ ದೌರ್ಬಲ್ಯ ಎದ್ದು ಕಾಣುತ್ತಿದೆ.
ವಸತಿ ಶಾಲೆ ಪ್ರಾಂಶುಪಾಲರೆ ಕೈಬಿಡಿ ನಿಮ್ಮ ಸೋಗಲಾಡಿತನವನ್ನ ನಿಗಾವಹಿಸಿ ಕೆಲಸ ಮಾಡಿ ಸರ್ಕಾರ ನಿಮಗೆ ಸಂಬಳ ಊಟ ವಸತಿ ಭತ್ಯ ನೀಡುತ್ತಿದೆ .ಹೊರಗಿನಿಂದ ಬಂದಂತ ಮಕ್ಕಳ ಪೋಷಕರಿಗೆ ಗೌರವ ಕೋಡಿ ನಾನೇ ಸುಪ್ರೀಮ್ ಎಂದು ಬೀಗುವುದು ನಿನ್ನ ದುರಭ್ಯಾಸ ಬಿಟ್ಟುಬಿಡಿ ಜನಸಾಮಾನ್ಯರಿಗೂ ಒಂದು ಗೌರವವಿದೆ ಎಂಬುದನ್ನ ಇಲ್ಲಿನ ಪ್ರಾಂಶುಪಾಲ ತಿಳಿಯಬೇಕಿದೆ.

Leave a Reply

Your email address will not be published. Required fields are marked *

You missed

error: Content is protected !!