ಜಗಳೂರು:ಸುದ್ದಿ
ನನ್ನ ಆಡಳಿತಾವಧಿಯಲ್ಲಿ ತಾಲೂಕಿನ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬದ್ದ :ಶಾಸಕ.ಬಿ.ದೇವೇಂದ್ರಪ್ಪ ಭರವಸೆ
ಜಗಳೂರು ಸುದ್ದಿ:ನನ್ನ ಆಡಳಿತಾವಧಿಯಲ್ಲಿ ತಾಲೂಕಿನ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬದ್ದ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಸೋಮವಾರ ತಾಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ರೈತರ ಸಹಯೋಗದಲ್ಲಿ 2024-25 ನೇ ಸಾಲಿನ ಆತ್ಮಯೋಜನೆ ಹಾಗೂ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಆಯೋಜಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ತಿಕಮಾಸದಲ್ಲಿ ರೈತರು ಬೆಳೆದ ಫಸಲುಗಳನ್ನು ಹಸನುಗೊಳಿಸಿ ರಾಶಿಪೂಜೆ, ದವಸ ಧಾನ್ಯಗಳನ್ನು ಕಣಜದಲ್ಲಿ ಸಂಗ್ರಹಿಸಿ ವಾಣಿಜ್ಯ ಬೆಳೆಗಳನ್ನು ಮಾರಾಟಮಾಡುವುದು ಪೂರ್ವಜರಕಾಲದಿಂದ ವಾಡಿಕೆಯಾಗಿದೆ.ಪ್ರಸಕ್ತಸಾಲಿನಲ್ಲಿ ಅತಿವೃಷ್ಠಿ ಹಾಗೂ ಸಿರಿಗೆರೆ ಶ್ರೀಗಳ ದೂರದೃಷ್ಠಿಯ ಶಾಶ್ವತಯೋಜನೆ 57 ಕೆರೆ ತುಂಬಿಸುವ ಯೋಜನೆಯಿಂದ ಕೆರೆಗಳು ಕೋಡಿ ಬಿದ್ದಿವೆ.ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿದ್ದು ಭವಿಷ್ಯದಲ್ಲಿ ರೈತರ ಬದುಕು ಹಸನಾಗಲಿದೆ.ರೈತರು ಪಡುವ ಶ್ರಮದಿಂದ ಬೆವರಿನಹನಿ ಭೂ ಒಡಲಿಗೆ ಬಿದ್ದಾಗ ಭೂ ತಾಯಿ ಸಂತೃಪ್ತಿಯಾಗುತ್ತಾಳೆ ಎಂಬ ಪ್ರತೀತಿಯಿದೆ ಎಂದು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ಸರಕಾರ ಜನಪರವಾಗಿದೆ.ಗ್ಯಾರಯೋಜನೆಗಳನ್ನು ಅನುಷ್ಠಾನಕ್ಕೆ ನುಡಿನಡೆದಂತೆ ನಡೆಯುತ್ತಿದ್ದಾರೆ.ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗೆ ಅವಲಂಬಿತರಾಗದೆ ಪೂರಕವಾಗಿ ಹೈನುಗಾರಿಕೆ,ಕುರಿಸಾಕಾಣಿಕೆಯೊಂದಿಗೆ ಆರ್ಥಿಕ ಸ್ವಾವಲಂಬಿಗಳಾಗಬೇಕು.ಸರ್ಕಾರದ ಕೃಷಿ ಇಲಾಖೆ ಯೋಜನೆ ಮತ್ತು ಸೌಲಭ್ಯಗಳನ್ನು ಸಮರ್ಪಕ ಬಳಕೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ,ದೇಶದಲ್ಲಿ ರೈತಪರವಾದ ಕಾಯ್ದೆಕಾನೂನು,ನೀತಿ ನಿಯಮಗಳನ್ನು,ರೂಪಿಸಿದ ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಅವರ ಜನ್ಮದಿನವನ್ನು ರೈತ ದಿನವನ್ನಾಗಿ ಆಚರಿಸುವ ಮೂಲಕ ರೈತರ ಭಾವನೆಗಳಿಗೆ ಸ್ಪಂದಿಸಲಾಗುತ್ತಿದೆ.ರಾಗಿ ಬೆಳೆ ಕೃಷಿ ಚಟುವಟಿಕೆಗಳಿಂದ ಬೇಸತ್ತ ರೈತರು ಕೆಲ ವರ್ಷಗಳಿಂದ ರಾಗಿ ಬೆಳೆ ಬಿತ್ತನೆ ಇಳಿಮುಖವಾಗಿತ್ತು.ಪ್ರಸಕ್ತಸಾಲಿನಲ್ಲಿ ರಾಗಿ ಬಿತ್ತನೆ ಹಾಗೂ ಕಟಾವಿಗೆ ಯಾಂತ್ರೀಕರಣದ ಸಹಾಯದಿಂದ ರಾಗಿ ಬೆಳೆದು ಅಧಿಕ ಸಂಖ್ಯೆಯಲ್ಲಿ ರೈತರು
ರಾಗಿ ಬಿತ್ತನೆಗೆ ಮುಂದಾಗಿರುವುದು ಶ್ಲಾಘನೀಯ.ರಾಗಿಯನ್ನು ಹಿಟ್ಟಾಗಿ ಮೌಲ್ಯವರ್ಧನೆಗೊಳಿಸಿದರೆ ಅಧಿಕ ಲಾಭಗಳಿಸಬಹುದು.ಗುರುಸಿದ್ದಾಪುರ ಗ್ರಾಮದ
ಸುಸ್ಥಿರ ಅಭಿವೃದ್ಧಿಗಾಗಿ 55 ಹಸುಗಳನ್ನು ನೀಡಲಾಗಿತ್ತು.ಇದರಿಂದ ಪ್ರತಿ ವರ್ಷ ಗ್ರಾಮಕ್ಕೆ ₹30,00000 ಆದಾಯ ಗಳಿಕೆಯಾಗುತ್ತಿದೆ.ವಿವಿಧ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ₹15,00000 ವರೆಗೆ ಸಹಾಯಧನಕ್ಕೆ ಇಲಾಖೆ ನೆರವಾಗಲಿದೆ ರೈತರು ಸದುಪಯೋಗಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
‘ಆಡಳಿತ ಸರಕಾರಗಳು ದೇಶದ ಬೆನ್ನೆಲುಬಾಗಿರುವ ರೈತನ ಬೆನ್ನು ಮುರಿಯದೆ ರೈತಪರ ಕಾಯ್ದೆ ಮತ್ತು ಯೋಜನೆಗಳನ್ನು ರೂಪಿಸಬೇಕು.ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗಳು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಆರ್ಥಿಕ ನೋವು ಅನುಭವಿಸುತ್ತಿದ್ದಾರೆ.ಮಾರುಕಟ್ಟೆ ದಲ್ಲಾಳಿಗಳ ಪಾಲಾಗುತ್ತಿವೆ.ಕನಿಷ್ಠ ಬೆಂಬಲಬೆಲೆ ನಿಗದಿಯಾಗಬೇಕು’.
——- ರಾಜನಹಟ್ಟಿ ರಾಜು,
ಪ್ರಧಾನಕಾರ್ಯದರ್ಶಿ,ರೈತ ಸಂಘ
ಇದೇ ವೇಳೆ ಗ್ರಾಮದ ₹1.28 ಕೋಟಿ ವೆಚ್ಚದ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವನೀರಿನ ನಳಗಳಿಗೆ ಚಾಲನೆನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಎತ್ತಿನಬಂಡಿಯಲ್ಲಿ ಶಾಸಕರ ಮೆರವಣಿಗೆ,ಪೂರ್ಣ ಕುಂಭಮೇಳ,ವಾದ್ಯವೃಂದ,ನೃತ್ಯ,ಕೋಲಾಟ,ಸಿರಿಧಾನ್ಯ ಪ್ರಾತ್ಯಕ್ಷಿಕೆ ಸಂಭ್ರಮ ದಿನಾಚರಣೆಗೆ ಮೆರಗು ತಂದವು.ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಸಾಧಕ ರೈತರಿಗೆ ಕೃಷಿ ಮಿತ್ರ ಪ್ರಶಸ್ತಿ ಪ್ರಧಾನಮಾಡಲಾಯಿತು.
ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ರಮೇಶ್,ಸದಸ್ಯರಾದ ಮಂಜಮ್ಮಮೂಗಪ್ಪ,ಹಳ್ಳಿಚೌಡಪ್ಪ,ಪ.ಪಂ ಸದಸ್ಯ ರಮೇಶ್ ರೆಡ್ಡಿ,ಮುಖಂಡರಾದ ಸಣ್ಣಸೂರಜ್ಜ,ಮಂಜಣ್ಣ,ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಗುರುಸಿದ್ದಾಪುರ ಗ್ರಾಮದ ಗಿರೀಶ್,ರಮೇಶ್,ರಮೇಶ್,ಚೌಡೇಶ್,ಮೂಗಪ್ಪ,ಮಲ್ಲೇಶ್,ರೇವಣ್ಣ,ಬಸವರಾಜ್,ಆನಂದಪ್ಪ,ಅಂಜಿನಪ್ಪ,ಓಬಳೇಶ್,ಮಹಾಂತೇಶ್,ದಳಪತಿ ಬಸೆಟೆಪ್ಪ,ರೈತ ಸಂಘಟನೆ ಮುಖಂಡರಾದ ಜಮ್ಮಾಪುರ ರೈತ ರಂಗಣ್ಣ,ಸತೀಶ್,ರವಿಕುಮಾರ್,ಕೃಷಿ ಇಲಾಖೆ ಎಡಿಸಿ ಶ್ವೇತಾ,ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಾದ ಅಧಿಕಾರಿಗಳು ಸೇರಿದಂತೆ ಇದ್ದರು.