ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯ ಅಗತ್ಯವಿದೆ. ಅದು ಬೇಕೋ ಬೇಡವೋ ಎಂಬ ಚರ್ಚೆ ಅನಗತ್ಯ. ಸುಪ್ರೀಂ ಕೋರ್ಟ್ ಅದರ ಅಗತ್ಯವನ್ನು ಹೇಳಿದ್ದು, ಸಾಮಾಜಿಕ, ರಾಜಕೀಯ, ಔದ್ಯೋಗಿಕವಾಗಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಿ ನ್ಯಾ. ನಾಗಮೋಹನ್ ದಾಸ.
ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಗುರುವಾರ ಹಮ್ಮಿಕೊಂಡಿದ್ದ, ‘ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರಿಗೆ ಮನವಿ ಸಲ್ಲಿಸುವ ಮಾದಿಗ ಸಂಬಂಧಿತ ಜಾತಿಗಳ ಸಮನ್ವಯ ಸಭೆ’ಯಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ದಿನಾಂಕ 13_2_2025 ರಂದು ಬೆಂಗಳೂರು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ…