ಜೈ ಭಾರತ ಟ್ರಸ್ಟ್ ವತಿಯಿಂದ ಜಗಳೂರು ತಾಲೂಕಿನಲ್ಲಿ ಉಚಿತ ಅಂಬುಲೇನ್ಸ್ ಸೇವೆ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ 15
ನೂತನ ಅಂಬುಲೇನ್ಸ್ ಬಿಡುಗಡೆ ಕಾರ್ಯಕ್ರಮಕ್ಕೆ ಕನ್ನಡ ಚಲಚಿತ್ರ ಖ್ಯಾತ ನಟ ಆಕ್ಷನ್ ಪ್ರಿನ್ಸ್ ದೃವ ಸರ್ಜಾರವರಿಂದ ಉದ್ಗಾಟನೆ ಮಾಡಿ ಶ್ಲಾಘನೆ ವ್ಯಕ್ತಪಡಿಸಿದರು ಸಂಘ ಸಂಸ್ಥೆಗಳು.ಹಾಗೂ ಟ್ರಸ್ಟ್ ಗಳು ಇಂತ ಸಮಾಜ ಮುಖಿ ಚಿಂತನೆಯಿಂದ ಸಮಾಜಕ್ಕೆ ಅತ್ಯಂತ ಗಣನೀಯ ಸೇವಾ ಕಾರ್ಯಗಳು ಸಾರ್ಥವಾಗಲಿವೆ ಎಂದು ಅಭಿಪ್ರಾಯಪಟ್ಟರು.
ನೂತನ ಅಂಬುಲೇನ್ಸ್ ಅತಿ ಶೀಘ್ರದಲ್ಲಿಯೆ ಜಗಳೂರು ಕ್ಷೇತ್ರದ ಜನರ ಸೇವೆಗೆ ಅರ್ಪಿಸಲಾಗುವುದು ಎಂದು ಜೈ ಬಾರತ ಟ್ರಸ್ಟ್ ಸಂಸ್ಥಾಪಕ ಬರಕತ್ ಆಲಿ ತಿಳಿಸಿದ್ದಾರೆ.
ಬೆಂಗಳೂರಿನ ಅಂಬುಲೇನ್ಸ್ ಶೂ ರೊಂ ನಲ್ಲಿ ನಟ ದೃವಸರ್ಜಾರವರಿಂದ ಸುಮಾರು 7 ಲಕ್ಷ 25 ಸಾವಿರ ರೂಗಳ ಬೆಲೆಬಾಳುವ ಅಂಬುಲೇನ್ಸ್ ಬುಧವಾರ ಬಿಡುಗಡೆ ಮಾಡಲಾಯಿತು .ಜಗಳೂರು ತಾಲ್ಲೂಕಿನ ಹನುಮಂತಪುರ ಗ್ರಾಮದ ಬರಕತ್ ಆಲಿ ಸ್ಥಾಪನೆಯ ಟ್ರಸ್ಟ್ ಜೈ ಭಾರತ ವತಿಯಿಂದ ಜಗಳೂರು ಕ್ಷೇತ್ರದ ಸಾರ್ವಜನಿಕರಿಗೆ ಈ ಅಂಬುಲೇನ್ಸ್ ಕೊಡುಗೆಯಾಗಿ ನೀಡುವ ಮೂಲಕ ಜನಸೇವೆಗೆ ಬಳಕೆಯಾಗಲಿದೆ
ಈ ವೇಳೆ ಜೈ ಭಾರತ ಟ್ರಸ್ಟ್ ಅದ್ಯಕ್ಷರಾದ ಬರಕತ್ ಆಲಿ ಮಾತನಾಡಿ ಕಳೆದ 5 ವರ್ಷಗಳಿಂದ ನಮ್ಮ ಟ್ರಸ್ಟ್ ವತಿಯಿಂದ ಸಾಮಾಜಿಕ ಸೇವಾ ಕಾರ್ಯಗಳು ಮಾಡುವ ಮೂಲಕ ಇದೀಗ ಕ್ಷೇತ್ರದ ಜನತೆಗೆ ನೂತನವಾಗಿ ಅಂಬುಲೇನ್ಸ್ ಸೇವೆ ನೀಡಲು ಸಹಕಾರಿಯಾಗುವುದು . ಗ್ರಾಮೀಣ ಬಾಗದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುವಂತವರಿಗೆ. ಹಾಗೂ ಅವಘಡಗಳಾದ ಹಾವು ಕಚ್ಚಿದಾಗ. ಗರ್ಭೀಣಿ ಮಹಿಳೆಯರು ಹೆರಿಗೆಯಂತ ಸಂದರ್ಭಗಳಲ್ಲಿ ಎಷ್ಟು ಬಾರಿ ಸಮಯಕ್ಕೆ ಸರಿಯಾಗಿ ಅಂಬುಲೇನ್ಸ್ ತೆರಳದೆ ಸಾವು ನೋವುಗಳು ಆಗಿರುವ ಉದಾಹರಣೆಗಳಿವೆ. ಈ ಘಟನೆಯನ್ನ ಮನಗಂಡ ನಾವು ಸಾಮಾಜಿಕ ಜನ ಸೇವೆ ಜೊತೆ ಜೊತೆಗೆ ನೂತನವಾಗಿ ಅಂಬುಲೇನ್ಸ್ ಸೇವೆ ನೀಡಲು ಬಯಸಿದಂತೆ ಇದೀಗ ನಮ್ಮ ಟ್ರಸ್ಟ್ ವತಿಯಿಂದ ಬಿಡಲಾಗುತ್ತಿರುವ ಅಂಬುಲೇನ್ಸ್ ಬಡಜನರ ಸೇವೆ ನೀಡುವ ಮೂಲಕ ಅನಾರೋಗ್ಯ ದಿಂದ ಬಳಲುವಂತ ಜನರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆ ತರಲು ಅತ್ಯಂತ ಸಹಕಾರಿಯಾಗಿದೆ.ಅತಿ ಶೀಘ್ರವೆ ನೂತನ ಅಂಬುಲೇನ್ಸ್ ನ್ನು ಜಗಳೂರು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಯುವಜನ ಸೇವಾ ಕ್ರೀಡಾ ಸಚಿವ ನಾಗೇಂದ್ರಣ್ಣರವರು ಉದ್ಗಾಟಿಸಲಿದ್ದಾರೆ. ಸಾರ್ವಜನಿಕರು ನಮಗೆ ಸಹಕರಿಸಿ ಈ ಸೌಲಭ್ಯವನ್ನ ಸದುಪಯೋಗಪಡೆದುಕೊಳ್ಳುವಂತೆ ಟ್ರಸ್ಟಿ ಅಧ್ಯಕ್ಷರು ತಿಳಿಸಿದ್ದಾರೆ.