By editor m.rajappa vyasagondanahalli shukradeshe news Kannada 20_12_2024
ಜನಸಾಮಾನ್ಯರ ಚಳುವಳಿಗೆ ಸಹಕಾರ ನೀಡುವ ಜನನಾಯಕ ಬಿ ಮಹೇಶ್ವರಪ್ಪ ಜಿಪಂ ಕ್ಯಾಂಡೇಟ್ ಆಗುವುದು ಖಚಿತ
ಜಗಳೂರು ತಾಲ್ಲೂಕಿನಲ್ಲಿ ಪ್ರತಿಯೊಬ್ಬರಿಗೂ ಚಿರ ಪರಿಚಿತರಾಗಿರುವ ಮಹೇಶ್ವರಪ್ಪ ಎಂದರೆ ಅಜಾತಶತ್ರು ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸವೆ ಇವರ ಸಂಪತ್ತು ಎನ್ನುವ ರೀತಿ ಸದಾ ಜನರ ಮದ್ಯಯಿರುವ ಅಸನ್ಮಖಿಯಾಗಿರುತ್ತಾರೆ . .ಇವರು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೊಟ್ಟಮೊದಲಿಗೆ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರುವ ಮೂಲಕ ಕರ್ತವ್ಯವೆ ದೇವರೆಂದು ಪ್ರಮಾಣಿಕ ಸೇವಾ ಕಾರ್ಯ ಇವರನ್ನ ಉನ್ನತ ಮಟ್ಟಕ್ಕೆ ಕೊಂಡುಯ್ಯುವಂತಾಗಿದೆ .ನಿತ್ಯ ಸೇವೆಯನ್ನ ಕಂಡಂತ ಇಲಾಖೆ ಮೇಲಾಧಿಕಾರಿಗಳು ಬಡ್ತಿ ನೀಡಿದರ ಪ್ರತಿಫಲವಾಗಿ ಪ್ರಥಮ ದರ್ಜೆ ಸಹಾಯಕರಾಗಿ ತದ ನಂತರ ಸಹಾಯಕ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ ಕಳೆದ 38 ವರ್ಷಗಳ ಕಾಲ ಸುಧೀರ್ಘ ಸೇವಾಕಾರ್ಯದಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಮಹೇಶ್ವರಪ್ಪ ಎಂದರೆ ಕೇವಲ ವ್ಯಕ್ತಿಯಲ್ಲ ದೊಡ್ಡ ಶಕ್ತಿ ಅವರು ಕರ್ತವ್ಯದಲ್ಲಿದ್ದಾಗ ಇಲಾಖೆಯಿಂದ ಬರುವಂತ ಅನುದಾನಗಳನ್ನು ಸಮರ್ಪಕವಾಗಿ ಬಡಜನರಿಗೆ .ವಿಧ್ಯಾರ್ಥಿಗಳಿಗೆ .ಮತ್ತು ಎಸ್ ಸಿ. ಎಸ್ ಟಿ ಸಮುದಾಯದ ಜನರ ಕಲ್ಯಾಣಕ್ಕಾಗಿ ಪ್ರಮಾಣಿಕವಾಗಿ ತಲುಪಿಸುವ ಮೂಲಕ ತಾಲ್ಲೂಕಿನ ಜನತೆಯ ಪ್ರೀತಿ ವಿಶ್ವಾಸ ಗಳಿಸಿದ್ದಾರೆ .
ಶ್ರೀಯುತರು ಇದೀಗ ನಿವತ್ತಿ ಹೊಂದಿದ ನಂತರವು ಸಹ ಮತ್ತೋಷ್ಟು ಜನಸೇವೆ ಜನಾರ್ಧನ ಸೇವೆಯೆಂದು ನಿರಂತರವಾಗಿ ಕ್ಷೇತ್ರದಲ್ಲಿ ವಿವಿಧ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಜನರ ಕಷ್ಠ ಸುಖಗಳಿಗೆ ಸಹಾಯಸ್ತ ಚಾಚುವ ಮೂಲಕ ತನ್ನದೆಯಾದ ಸೇವಾ ಕಾರ್ಯಕ್ಕೆ ಕೈಗನ್ನಡಿಯಾಗಿದೆ ಇನ್ನು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪರವರ ವೈಚಾರಿಕತೆ ಅವರ ಶಿಸ್ತು ಬದ್ದತೆ ಆಡಳಿತ ನಡೆಸುತ್ತಿರುವ ಜನಪ್ರಿಯ ಶಾಸಕರ ಒಡನಾಡಿಯಾಗಿ ಕಾಂಗ್ರೇಸ್ ಪಾಳಯದಲ್ಲಿ ಗುರುತಿಸಿಕೊಂಡು ಪಕ್ಷದಲ್ಲಿ ಕಾಂಗ್ರೇಸ್ ಎಸ್ ಸಿ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ನಿರಂತರ ಕಾಂಗ್ರೇಸ್ ಪಕ್ಷದ ಕಟ್ಟಾಳು ನಿಷ್ಠವಂತ ಕಾರ್ಯಕರ್ತನಾಗಿ ಇದೀಗ ಮುಂಬರುವ ಜಿಪಂ ಚುನಾವಣೆಗೆ ಸ್ವರ್ಧಿಸಲಿದ್ದಾರೆ ಎಂಬ ಕೂಗು ಈಗಾಗಲೇ ಕ್ಷೇತ್ರದಲ್ಲಿ ಕೇಳಿಬಂದಿದ್ದು ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದರು ಎಸ್ ಸಿ ಮೀಸಲು ಕ್ಷೇತ್ರ ಬಂದರೆ ಕ್ಯಾಂಡೇಟ್ ಆಗುವುದು ಖಚಿತ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ .
ಕ್ಷೇತ್ರದಲ್ಲಿ ಒಂದಲ್ಲ ಒಂದು ಸೇವಾ ಕಾರ್ಯದಲ್ಲಿ ತೊಡಗಿರುವ ಮಹೇಶ್ವರಪ್ಪರವರು ಎಲ್ಲಾ ವರ್ಗದ ಜನರ ಏಳ್ಗಿಗೆ ಶ್ರಮಿಸುವಂತ ಜನನಾಯಕ ಇವರನ್ನ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಿಸಿಕೊಂಡರೆ ಉತ್ತಮ ಸೇವೆ ಮಾಡುವ ಲೀಡರ್ ಎಂಬ ಆಶಾಭಾವನೆಯೊಂದಿಗೆ ಮತದಾರರು ನಿರೀಕ್ಷೆಯಲ್ಲಿದ್ದಾರೆ .ಈ ಹಿಂದಿನ ರಾಜಕೀಯ ಏಳು ಬೀಳು ನೋಡಿದರೆ ಅಣಬೂರು ಜಿಪಂ ಬಾಗಕ್ಕೆ ಈ ಬಾರಿ ಎಸ್ ಸಿ ಮೀಸಲು ಕ್ಷೇತ್ರವಾಗಲಿದೆ ಎಂಬುವ ನಂಬಿಕೆಯಿದ್ದು ಈ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದಲ್ಲಿ ಮುಂಚೂಣಿಯಾಗಿ ಸ್ವರ್ಧಿಸುವ ನೀರಿಕ್ಷೆಯಿದೆ .ಒಟ್ಟಾರೆ ಮಹೇಶ್ವರಪ್ಪರವರು ಅಧಿಕಾರಿಯಾಗಿ ಸುಧೀರ್ಘ ಸೇವೆ ನೀಡಿ ಇದೀಗ ಕಾಂಗ್ರೇಸ್ ಪಕ್ಷದಲ್ಲಿ ನಿತ್ಯ ವಿವಿಧ ರಾಜಕೀಯ ಸಭೆಗಳಲ್ಲಿ ಕಾಣಿಸಿಕೊಳ್ಳುವ ಜನನಾಯಕ ಮಹೇಶ್ವರಪ್ಪರವರಿಗೆ ಜಿಪಂ ಟಿಕೀಟ್ ನೀಡಿದರೆ ಸುಲಭವಾಗಿ ಗೆಲುವು ಖಚಿತವಾಗಲಿದ್ದು ಅವರ ಹಿಂದೆ ಬಲವಾದ ಯುವ ಶಕ್ತಿಯಿದೆ ತಾಲ್ಲೂಕಿನಲ್ಲಿ ಎಲ್ಲಾ ವರ್ಗದ ಜನರ ಬೆಂಬಲವಿದೆ ಅವರ ಗೆಲುವಿಗೆ ಕಾಂಗ್ರೇಸ್ ನಾಯಕರು ಸಹಕಾರ ನೀಡಿ ಟಿಕೇಟ್ ಸಿಗುವ ಭರವಸೆಯಲ್ಲಿದ್ದಾರೆ.ಶ್ರೀಯುತರು ಮುಮದಿನ ಜಿಪಂ ಸದಸ್ಯರಾಗಿ ರಾಜಕೀಯ ಭವಷ್ಯದಲ್ಲಿ ಮತ್ತೋಷ್ಟು ಅಮೋಘವಾದ ಸೇವೆ ನೀಡಲಿ ಎಂದು ಶುಕ್ರದೆಸೆ ಪತ್ರಿಕೆ ಆಶಿಸುತ್ತಿದೆ.