ವಿಶೇಷ ವರದಿ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಸಂಪಾದಕರು ಶುಕ್ರದೆಸೆ ನ್ಯೂಸ್ : ದಾವಣಗೆರೆ ಜಿಲ್ಲೆಯ ಜಗಲೂರು ತಾಲೂಕು ಕಸಬಾ ಹೋಬಳಿಯ ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಾಲಯದ .ಕಲ್ಲೇದೇವರಪುರ ಒಂದು ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜರು, ಚಾಲುಕ್ಯರು ಆಳಿದರು. ಸಂಕೇತವಾಗಿ ಅವರು ಶ್ರೀ ಕಲ್ಲೇಶ್ವರ ದೇವರ ಹಿಂದೂ ದೇವಾಲಯವನ್ನು ನಿರ್ಮಿಸಿದರು. ಇದೀಗ. ಏಪ್ರಿಲ್ 11ರಂದು ಸಂಜೆ 4 ಗಂಟೆಗೆ ಜಗಳೂರು ತಾಲೂಕಿನ ಶ್ರೀ ಕ್ಷೇತ್ರ ಕಲ್ಲೇದೇವರಪುರ – ಕಲ್ಲೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ ಜರುಗಲಿದೆ .ದೇವಸ್ಥಾನ ಸಮಿತಿ ವತಿಯಿಂದ ಗ್ರಾಮಸ್ಥರಿಂದ ಸಕಲ ಸಿದ್ಧತೆಯೊಂದಿಗೆ ಗ್ರಾಮದಲ್ಲಿ‌ ದೇವಾಸ್ಥಾನ ಸೇರಿದಂತೆ ಮುಖ್ಯ ಬೀದಿಗಳು ಶೃಂಗಾರಗೊಂಡು ಜಾತ್ರೆಗೆ ಸಕಾಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಎಂದು ಕಲ್ಲೇಶ್ವರ‌ಸ್ವಾಮಿ ಸಮಿತಿ ಅಧ್ಯಕ್ಷ ಶರಣಪ್ಪ‌ ತಿಳಿಸಿದ್ದಾರೆ.
ಜಾತ್ರೆ ವೈಶಿಷ್ಟ್ಯತೆ ಜಾತ್ರೆ :
ಕಲ್ಲೇಶ್ವರ ಜಾತ್ರೆ ಹಾಗೂ ನಂತರ ನಡೆಯುವ ದನಗಳ ಜಾತ್ರೆ ಪ್ರತಿವರ್ಷ ವೈಶಾಖ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.ಐದನೇ ದಿನ ಮಹಾರಥೋತ್ಸವ ನಡೆಯುತ್ತದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದ ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಪರೇವು ಆಚರಣೆ:
ಗ್ರಾಮದ ಸಮೀಪದಲ್ಲಿ ಇರುವ ಬಸಪ್ಪನ ಹಟ್ಟಿಯ ಬಸವಣ್ಣನ ಗುಡಿಯ ಅಂಗಳದಲ್ಲಿ ಕಲ್ಲೇಶ್ವರ ಸ್ವಾಮಿಯ ಪರೇವು ಆಚರಣೆ ನಡೆಸಲಾಗುತ್ತದೆ.
ಕಲ್ಲೇಶ್ವರ ಜಾತ್ರೆ ಪ್ರತಿವರ್ಷ ವೈಶಾಖ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.ಐದನೇ ದಿನ ಮಹಾರಥೋತ್ಸವ ನಡೆಯುತ್ತದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದ ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ತಾಲೂಕಿನ ಶ್ರೀ ಕಲ್ಲೇದೇವರ ಪುರ ಶ್ರೀ ಕಲ್ಲೇಶ್ವರ ಸ್ವಾಮಿಯ ಜಾತ್ರೆಯು ದಿನಾಂಕ 7-4-2023 ರಂದು ಸ್ವಾಮಿಗೆ -ಕಂಕಣ ಧಾರಣೆ ಮಾಡುವ ಮೂಲಕ ಜಾತ್ರೆ ಪ್ರಾರಂಭವಾಗಿ 8-4-2023 ರಂದು -ಮದಲಿಂಗ ಶಾಸ್ತ್ರ ಮತ್ತು ಗಜೋತ್ಸವ 9-4-2023 ರಂದು -ಅಶ್ವ ವಾಹನೋತ್ಸ ವ 10-4-2023 ರಂದು-ವೃಷಭೋತ್ಸವ 11-4-2023 ರಂದು ಸಂಜೆ 4 ಗಂಟೆ ಮಂಗಳವಾರ ಶ್ರೀ ಕಲ್ಲೇಶ್ವರ ಸ್ವಾಮಿಯ -ದೊಡ್ಡ ರಥೋತ್ಸವ ಜರಗಲಿದೆ ನಂತರ 12-4-2023 ರಂದು – ಅಡ್ಡ ಪಲ್ಲಕ್ಕಿ ಉತ್ಸವ ಮತ್ತು ಕೋಲಾಟ 13-4-2023 ರಂದು ಗುರುವಾರ ಓಕಳಿ ಮಾಡುವ ಮುಖಾಂತರ ಜಾತ್ರೆ ಮುಕ್ತಾಯವಾಗುತ್ತದೆ 8 ರಂದು ಶ್ರೀ ಕಲ್ಲೇದೇವಪುರ ಕಲ್ಲೇಶ್ವರನ ಜಾತ್ರೆ – ದೊಡ್ಡ ರಥೋತ್ಸವ ಜರುಗಲಿದೆ. ನಂತರ ದನಗಳ ಜಾತ್ರೆ ಒಂದು ವೈಶಿಷ್ಟ್ಯತೆಯಿದೆ. ಗ್ರಾಮದಲ್ಲಿ‌ ನೆಲೆಸಿದ ಶಕ್ತಿ ದೇವರಗಳಲ್ಲೊಂದಾದ ಕಲ್ಲೇಶ್ವರ
ಹೊಯ್ಸಳ ಕಾಲದಲ್ಲಿ ನಿರ್ಮಿಸಿದ ವಿಶಿಷ್ಟ ವಾಸ್ತು ಶಿಲ್ಪ ದೇಗುಲ. ಪವಾಡ ಪುರುಷ. .ಹೊಯ್ಸಳರ ಕಾಲದಲ್ಲಿ ಸುಮಾರು 11 – 12ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.ಮೊದಲು ಇಲ್ಲಿ ಊರು ಇರಲಿಲ್ಲ ಇದೊಂದು ಅರಣ್ಯ ಪ್ರದೇಶವಾಗಿದ್ದು ಈ ಮಾರ್ಗವಾಗಿ ವ್ಯಾಪಾರಿ ಒಬ್ಬ ಮಾರ್ಗ ಮದ್ಯದಲ್ಲಿ ಸಂಚರಿಸುತ್ತಿರುವಾಗ ಸ್ವಲ್ಪ ವಿಶ್ರಾಂತಿಗಾಗಿ ಈ ಸ್ಥಳದಲ್ಲಿ ವಿಶ್ರಮಿಸಿ ಇಲ್ಲಿಯೆ ಅಡುಗೆ ಮಾಡಲು ಮುಂದಾಗುತ್ತಾನೆ. ಮೊದಲೇ ಇದ್ದಂತಹ ಒಂದು ಕಲ್ಲಿನ ಜೊತೆಗೆ,ಮತ್ತೆರಡು ಕಲ್ಲನ್ನು ಜೋಡಿಸಿ ಅಡುಗೆಯನ್ನು ಅಡುಗೆ ಮಾಡುತ್ತಿರುವಾಗ ಒಲೆಗೆ ಇಟ್ಟಂತಹ ಒಂದು ಕಲ್ಲಿನ ಸ್ವಲ್ಪ ಭಾಗ ಸಿಡಿಯಿತು ಮತ್ತು ಅನ್ನ ಕೆಂಪಾಯಿತು.ಇದರಿಂದ ಗಾಬರಿಗೊಂಡ ವ್ಯಾಪಾರಿಗೆ ದೈವವಾಣಿಯೊಂದು ಕೇಳಿತು. “ನಾನು ಕಲ್ಲಿನ ರೂಪದಲ್ಲಿರುವ ಕಲ್ಲೇಶ್ವರ, ಸಿಡಿದ ಈ ಕಲ್ಲಿನ ಭಾಗವನ್ನು ನಿನ್ನ ವ್ಯಾಪಾರದಲ್ಲಿ ತೂಕಕ್ಕೆ ಬಳಸಿಕೋ, ಇದೊಂದೇ ಕಲ್ಲು ನೀನೆಷ್ಟು ತೂಕ ಹೇಳಿದರು ಅಷ್ಟು ತೂಕಕ್ಕೆ ತೂಗುತ್ತದೆ, ನಿನಗೆ ಒಳ್ಳೆಯದಾಗುತ್ತದೆ ನನ್ನನ್ನು ಸ್ಮರಿಸು,” ಎಂದು ಆಜ್ಘೆ ಮಾಡಿ ಹೇಳಿದಂತಾಗಿ ಅಂದಿನಿಂದ ಆ ವ್ಯಕ್ತಿಗೆ ಆಪಾರ ಭಕ್ತಿ ಮೂಡಿತು.ನಂತರ ವ್ಯಾಪಾರಿಯು ಅಲ್ಲೊಂದು ಚಪ್ಪರಹಾಕಿ ಪೂಜಿಸಿ ನಮಸ್ಕಾರಿಸಿ ವ್ಯಾಪಾರಕ್ಕೆ ಹೊರಟು ಹೋದನು. ಅವನಿಗೆ ತುಂಬಾ ಲಾಭಂಶ ಬಂದಿತ್ತು.ಅದರಿಂದ ಪುಟ್ಟ ದೇವಾಲಯ ಕಟ್ಟಿಸಿ ಶ್ರೀ ಕಲ್ಲೇಶ್ವರಸ್ವಾಮಿ ಎಂದು ಪೂಜಿಸಿದನು. ತದ ನಂತರ ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ದೇವಸ್ಥಾನ ನಿರ್ಮಿಸಿ ಇಲ್ಲಿ ಜನರು ಊರನ್ನು ಕಟ್ಟಿಕೊಂಡು ವಾಸಿಸಲು ಪ್ರಾರಂಭಿಸಿದರು. ಚಾಲುಕ್ಯ ಮತ್ತು ಹೊಯ್ಸಳರ ಶೈಲಿಯ ಲಕ್ಷಣಗಳನ್ನು ಹೊಂದಿರುವ ದೇವಸ್ಥಾನದಲ್ಲಿ ದೇವಸ್ಥಾನ ಗರ್ಭಗುಡಿಯಲ್ಲಿ ಉದ್ಭವ ಮೂರ್ತಿ ಶಿವಲಿಂಗವಿದೆ.ಎದುರಿಗೆ ನಂದಿ, ನವರಂಗ ಮಂಟಪ, ಮಹಾಮಂಟಪ, ಉಯ್ಯಾಲೆ ಕಂಬ, ಗಣೇಶ,ಪ್ರದಕ್ಷಿಣ ಆವರಣ,ಪೂರ್ವ ಅಭಿಮುಖವಾಗಿ ಮಹಾದ್ವಾರ ಮತ್ತು ದಕ್ಷಿಣ ಅಭಿಮುಖವಾಗಿ ಮತ್ತೊಂದು ದ್ವಾರವಿದ್ದು ಎರಡು ಕಡೆಯೂ ಬೃಹತ್ ನಂದಿ ಇದೆ. ತ್ರಿಕೂಟ ಲಿಂಗ ದೇವಸ್ಥಾನವು ಆವರಣದಲ್ಲಿ ಇದೆ.ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಲಿಂಗಗಳಿಗೆ ಏಕಕಾಲದಲ್ಲಿ ಇಲ್ಲಿ ಅಭಿಷೇಕ ನಡೆಯುತ್ತದೆ ಮತ್ತು ಇದೇ ದೇವಾಲಯದಲ್ಲಿ ಅಷ್ಟಲಕ್ಷ್ಮೀಯರನ್ನು ಸಹ ನಾವು ಕಾಣಬಹುದು.ದೇವಸ್ಥಾನದ ಪ್ರವೇಶ ದ್ವಾರದ ಹತ್ತಿರವಿರುವ ಉಯ್ಯಾಲೆ ಕಂಬದ ಬಲಗಡೆ ಹಾಗೂ ದೇವಸ್ಥಾನದ ಎಡ ಗೋಡೆಯ ಮೇಲೆ ಗಜಲಕ್ಷ್ಮೀಯರನ್ನು ಸಹ ಪ್ರತಿಷ್ಠಾಪಿಸಲಾಗಿದೆ.ಶಿಲಾ ಶಾಸನಗಳು,ವೀರಗಲ್ಲು, ಮಾಸ್ತಿಗಲ್ಲುಗಳು ಮತ್ತು ಮಜ್ಜನ ಮಂಟಪವು ಚರಿತ್ರೆಯ ಸಾಕಷ್ಟು ಪುರಾವೆಗಳ ಐತಿಹ್ಯವಿದೆ . ಹೊಯ್ಸಳರ ವಾಸ್ತು ಶಿಲ್ಪ ಹೊಲುವ ಲಾಂಛನವು ಸಹ ದೇವಸ್ಥಾನದ ಮೇಲಿದೆ. ದೇವಸ್ಥಾನದಲ್ಲಿ ನವರಂಗ ಮಂಟಪದ ನಂತರ ಬರುವ ಪ್ರಾಂಗಣದಲ್ಲಿ ಗೌರಮ್ಮ, ವೀರಭದ್ರ ಸ್ವಾಮಿ ಮತ್ತು ಸುಬ್ರಹ್ಮಣ್ಯೇಶ್ವರ ಸ್ವಾಮಿಯು ನೆಲೆಸಿದ್ದಾರೆ. ಮೇಲ್ಚಾವಣಿಯಲ್ಲಿರುವ ಕಮಲದಲ್ಲಿ ಹಾಗೂ ಕಂಬಗಳ ಮೇಲು ರಾಮಾಯಣ ಮಹಾಭಾರತದ ಕಥೆಯನ್ನಾಧರಿಸಿದ ದೇವರ ಕೆತ್ತನೆಗಳಿವೆ.ಇಡೀ ದೇವಸ್ಥಾನದಲ್ಲಿ 101 ದೇವರು ನೆಲೆಸಿದ್ದು ಪ್ರತಿದಿನವೂ ತ್ರಿಕಾಲ ಪೂಜೆ ಹಾಗೂ ದೀಪಾರಾಧನೆ ನಡೆಯುತ್ತದೆ.ಕಲ್ಲಿನ ಉದ್ಭವ ಮೂರ್ತಿ ಕಲ್ಲೇಶ್ವರನ ಸನ್ನಿಧಿಯ ಆದ್ದರಿಂದ ಈ ಊರಿಗೆ ಕಲ್ಲೇದೇವರಪುರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಇಲ್ಲಿ ಮತ್ತೊಂದು ವಿಶೇಷವಾಗಿದೆ.

ಕಲ್ಲೇದೇವರಪುರ ಗ್ರಾಮವು ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಈ ಗ್ರಾಮವು ಚಿತ್ರದುರ್ಗ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಚಿತ್ರದುರ್ಗದಿಂದ 25 ಕಿಲೋಮೀಟರ್ ಹಾಗೂ ಜಗಲೂರಿನಿಂದ 15 ಕಿಲೋಮೀಟರ್ ದೂರದಲ್ಲಿದೆ.
ಕಲ್ಲೇಶ್ವರ ದೇವರು ನೆಲೆಸಿದ ಸ್ಥಳವಾದ ಕಾರಣಕ್ಕೆ ಈ ಗ್ರಾಮಕ್ಕೆ ಕಲ್ಲೇದೇವರಪುರ ಹೆಸರು ಬಂದಿದೆ.
ಇದು ತಾಲ್ಲೂಕು/ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿದೆ.

ಐತಿಹ್ಯ:
ಹಿಂದೆ ಈ ದೇವಾಲಯದ ಪ್ರದೇಶವೆಲ್ಲವೂ ಕಾಡುಪೆಳೆಯಿಂದ ಕೂಡಿದ್ದು ಪಕ್ಕದ ಬಯಲಿನಲ್ಲಿ ಮಲ್ಲಶೆಟ್ಟಿ ಎಂಬ ವ್ಯಾಪಾರಿಯೊಬ್ಬ ಪೆಳೆಯಿಂದ ಕಟ್ಟಿಗೆಯನ್ನು ತಂದು ನೆಲದಲ್ಲಿ ಹೂತಿದ್ದ ಒಂದು ಕಲ್ಲಿಗೆ ಮತ್ತೆರಡು ಕಲ್ಲುಗಳನ್ನು ಇಟ್ಟು ಒಲೆಯನ್ನು ಹೂಡಿ ಅಡುಗೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅನ್ನದ ಮಡಿಕೆಯಲ್ಲಿ ಅನ್ನದ ಜೊತೆಗೆ ರಕ್ತ ಕಾಣಲು ಶುರುವಾಯಿತು. ವ್ಯಾಪಾರಿ ಗಾಬರಿಯಿಂದ ದೇವರೆಂದು ನೆನೆಸಿಕೊಂಡನಂತೆ. ಆಗ ದೇವರು ನೀನು ಒಲೆ ಗುಂಡೆಂದು ಭಾವಿಸಿದ ನಾನು ಒಲೆ ಗುಂಡಲ್ಲ.ನಾನು ಕಲ್ಲಿನಾಥ -ಕಲ್ಲೇಶ್ವರ ಎಂದು ಒಡಮೂಡಿದ ಕಲ್ಲಿನ ಶಿವಲಿಂಗದಿಂದ ಒಂದು ಚಿಕ್ಕದಾದ ಕಲ್ಲು ಸಿಡಿದು ಹೇಳಿತಂತೆ. ನಿನ್ನ ವ್ಯಾಪಾರದ ಜಾಗದಲ್ಲಿ ಈ ಕಲ್ಲಿನಿಂದಲೇ ತೂಗಿ ಕೊಡು ನಿನಗೆ ಮಂಗಳವಾಗುತ್ತದೆ ಎಂದಿತಂತೆ. ಆಗ ವ್ಯಾಪಾರಿಯು ಭಕ್ತಿಯಿಂದ ವ್ಯಾಪಾರ ಮಾಡಿ ಗುಡಿ ಕಟ್ಟಿಸಿದನಂತೆ.

ಪರಿಚಯ:
ಕಲ್ಲೇಶ್ವರ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ 11 -12ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ.
ಗರ್ಭಗೃಹ,ಅಂತರಾಳ, ನವರಂಗ,ಮಹಾಮಂಟಪ ಸಭಾಮಂಟಪ, ನಂದಿಮಂಟಪ, ಉಯ್ಯಾಲೆ ಕಂಬ ಹಾಗೂ ಮಹಾದ್ವಾರ ಗೋಪುರಗಳನ್ನು ಒಳಗೊಂಡ ವಿಸ್ತಾರವಾದ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಕಪ್ಪುಶಿಲೆಯಲ್ಲಿ ಕಡೆಯಲಾದ ನಯವಾದ ಶಿವಲಿಂಗವಿದೆ. ನವರಂಗದಲ್ಲಿ ಹೊಯ್ಸಳ ಶೈಲಿಯ ನಾಲ್ಕು ಕಂಬಗಳಿವೆ.
ನವರಂಗದಲ್ಲಿ ಶಿವಲಿಂಗಕ್ಕೆ ಎದುರಾಗಿ ನಂದಿಯನ್ನು ಪ್ರತಿಷ್ಠಾಪಿಸಿರುವರು.
ನವರಂಗದಲ್ಲಿ ಗಣೇಶ ಹಾಗೂ ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾದ ಸೂರ್ಯನ ಮೂರ್ತಿ ಇದೆ. ಮುಖಮಂಟಪದ ಎದುರಿನಲ್ಲಿ ನಂದಿಯ ಶಿಲ್ಪವಿದ್ದು ಇದನ್ನು ಅಂಕಲಿ ಬಸವಣ್ಣ ಎಂದು ಕರೆಯುತ್ತಾರೆ. ನವರಂಗದ ಮುಂಭಾಗದ ಮಹಾ ಮಂಟಪವು
ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.
ಮಂಟಪದ ಇಕ್ಕೆಲಗಳಲ್ಲಿ ವೀರಭದ್ರ ಹಾಗೂ ಗೌರಮ್ಮ ದೇವರ ಗರ್ಭಗೃಹಗಳಿವೆ. ಮಹಾಮಂಟಪದ ಬಲಭಾಗದಲ್ಲಿ ವೀರಗಲ್ಲು ಇದ್ದು,ಇದನ್ನು ಈರಗಾರ ಹುಚ್ಚೇಶ್ವರ ಎಂದು ಕರೆಯುತ್ತಾರೆ. ಮಹಾಮಂಟಪದ ಮುಂಭಾಗದಲ್ಲಿ ನಂದಿ ಇದ್ದು ಇದನ್ನು ತೊಟ್ಟಿಪೆಳೆ ಬಸವಣ್ಣ ಎಂದು ಕರೆಯುತ್ತಾರೆ.ಗರ್ಭಗೃಹದ ಮೇಲೆ ಪಾಂಸನ ಮಾದರಿಯ ಶಿಖರವಿದೆ.

ಮಜ್ಜನ ಮಂಟಪ:
ದೇವಾಲಯದ ಹಿಂಬಾಗದಲ್ಲಿ ದೊಡ್ಡ ಮಜ್ಜನದ ಮಂಟಪವಿದ್ದು ಇಷ್ಟು ದೊಡ್ಡ ಮಂಟಪ ಬೇರೆಲ್ಲಿಯೂ ಇಲ್ಲವೆಂದು ಹೇಳಲಾಗುತ್ತದೆ.

ಪೂಜೆ:
ಈ ದೇವರಿಗೆ ತ್ರಿಕಾಲಪೂಜೆ,ವಿಶೇಷ ಪೂಜೆ ನಡೆಯುತ್ತವೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ,ಅಷ್ಟೋತ್ತರ ಬಿಲ್ವಾರ್ಚನೆ,ವೇದಮಂತ್ರ ಘೋಷ ನಿಯಮಬದ್ಧವಾಗಿ ನಡೆಯುತ್ತವೆ. ಕಾರ್ತಿಕಮಾಸದಲ್ಲಿ ದೀಪೋತ್ಸವ ನಡೆಯುತ್ತದೆ.

ಶಾಸನಗಳು :
ಜಗಳೂರಿನ 31,32 (ಕ್ರಿ. ಶ.1235)ಹಾಗೂ 33ನೇ (ಕ್ರಿ. ಶ.1279)ಶಾಸನದಲ್ಲಿ ಈ ದೇವರಿಗೆ ದಾನ ಶಾಸನ ಬಗ್ಗೆ ವಿವರಣೆ ಇದೆ. ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಕಾಲದಲ್ಲಿ ನೀಡಿದ ದಾನವನ್ನು (ಕ್ರಿ. ಶ.1526) ಶಾಸನದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!