ಶುಕ್ರದೆಸೆ ನ್ಯೂಸ್ : ಶಶಿಧರ್ ಎಂಬ 50 ವರ್ಷದ ವ್ಯಕ್ತಿ ನೇಣಿಗೆ ಶರಣು … ಜಗಳೂರು ಟೌನ್ ಜೆ ಡಿ ಲೇಹೌಟ್ ನಲ್ಲಿ ವಾಸವಾಗಿದ್ದ ಶಶಿಧರ್ ಎಂಬ 50 ವರ್ಷದ ವ್ಯಕ್ತಿ ಮದ್ಯ ಸೇವನೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಜರುಗಿದೆ. ಪಟ್ಟಣದಲ್ಲಿ ವಾಸವಾಗಿದ್ದ ಶಶಿಧರ್ ಮಂಗಳವಾರ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಸಾವು. ಈತ ಆಗ ಆಗ ತನ್ನ ಪತ್ನಿ ಉಪನ್ಯಾಸಕಿ ರೂಪಾ ಮೇಲೆ ಜಗಳ ಮಾಡುತ್ತಿದ್ದ ಈತನ ಹೆಂಡತಿ ರೂಪಾ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ಗೆಸ್ಟ್ ಟೀಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಇವರು ಈ ಹಿಂದೆ ಪ್ರಿತಿಸಿ ಮದುವೆಯಾಗಿದ್ದರು ಇವರಿಗೆ ಒಬ್ಬ 17 ವರ್ಷದ ಪುತ್ರನಿದ್ದು ಇತ್ತಿಚೆಗೆ ಶಶಿಧರ ಅತಿಯಾದ ಮದ್ಯ ಸೇವಿಸಿ ಮದ್ಯವ್ಯಸನಿಯಾಗಿದ್ದ ಎಂದು ತಿಳಿದು ಬಂದಿದೆ..ಆದರೆ ಈತ ನೇಣಿಗೆ ಶರಣಾಗಲು ಕಾರಣವೇನು ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗುವುದು. ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.ಸ್ಥಳಕ್ಕೆ ಪಿ ಎಸ್ ಸಾಗರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.