ದಿನಾಂಕ ಮಾರ್ಚ 23 ರಂದು ಕೆಚ್ಚೆನಹಳ್ಳಿ ಗ್ರಾಮದ ರಾಜಪ್ಪ ತಂದೆ ರಾಮಪ್ಪ‌ ಎಂಬ ವ್ಯಕಿ ವಿಷ ಸೇವಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವು. ಶುಕ್ರದೆಸೆ ನ್ಯೂಸ್: ತಾಲ್ಲೂಕಿನ ಕೆಚ್ಚೆನಹಳ್ಳಿ ಗ್ರಾಮದಲ್ಲಿ ವಿಷ ಸೇವಿಸಿ ರಾಜಪ್ಪ ಎಂಬ 50 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ‌ ನಡೆದಿದೆ. ಈ ವ್ಯಕ್ತಿ ಕುಟುಂಬ ನಿರ್ವಹಣೆ ಮಾಡಲು ಸಾಲ ಸೂಲ ಮಾಡಿದ್ದ ಸಾಲ ಭಾಧೆ ತಾಳಲಾರದೆ ಈ ಹಿಂದೆ ಗ್ರಾಮದಲ್ಲಿ ಜೋಳಕ್ಕೆ ಔಷಧಿ ಸಿಂಪಡಿಸುವ ಕಳೆನಾಶಕ ಔಷಧಿಯನ್ನು ದಿ ಮಾರ್ಚ್ 23 ರಂದು ಸೇವನೆ ಮಾಡಿದ್ದ ವ್ಯಕ್ತಿಯನ್ನು ಅತ್ತಿರದ ಜಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ‌ಕೋಡಿಸಿದ್ದರು ಆದರೆ ವಿಷಕಾರಿ ಅಂಶ ನರನಾಡಿಗಳಲ್ಲಿ ಸೇರಿಕೊಂಡ ಹಿನ್ನಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ವಿನ ಚಿಕಿತ್ಸೆಗಾಗಿ ಬಾಪೂಜಿ ‌ಆಸ್ಪತ್ರೆಗೆ ರವಾನಿಸಲಾಗಿತ್ತು. ಇಷ್ಟು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ರಾಜಪ್ಪ ಚಿಕಿತ್ಸೆ ಫಲಕಾರಿಯಾಗದೆ ದಿ 4 ರಂದು ಸಾವನ್ನಪ್ಪಿರುತ್ತಾರೆ ಎಂದು ತಿಳಿದು ‌ಬಂದಿದೆ.ಈತನಿಗೆ ಇಬ್ಬರು ಪುತ್ರರು‌ ಒಬ್ಬರು ಪುತ್ರಿ ಹಾಗೂ ಪತ್ನಿ ಸೇರಿದಂತೆ ಕುಟುಂಬ ವರ್ಗದವರುನ್ನು ಬಿಟ್ಟು ಆಗಲಿರುವುದು ಕುಟುಂಬದಲ್ಲಿ ದುಖ ಮಡುಗಟ್ಟಿದೆ ಗ್ರಾಮದಲ್ಲಿ ಮೌನ ಆವರಿಸಿದೆ.ಈ ಸಂಬಂಧವಾಗಿ ಅತ್ತಿರದ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿ ಪಿ ಐ ಶ್ರೀನಿವಾಸ್ ರಾವ್ ಹಾಗೂ ಪಿ ಎಸ್ ಐ‌ ಸಾಗರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!