ಜಗಳೂರು ಸುದ್ದಿ :- ವಿಶೇಷ ಲೇಖನ
ಜಗಳೂರು ಪಟ್ಟಣದ ಜೆ.ಸಿ. ಆರ್. ಬಡಾವಣೆ. ಇಂದ್ರ ಬಡಾವಣೆ. ಇಮಾಮ್ ಬಡಾವಣೆ. ಬಸವೇಶ್ವರ ಬಡಾವಣೆ. ಲೋಕೇಶ್ ರೆಡ್ಡಿ ಬಡಾವಣೆ. ಕೃಷ್ಣ ಬಡಾವಣೆ. ತುಮಟಿ ಲೇಔಟ್, ಬಡಾವಣೆ. ಸೂರ್ಯ ಮೇಕ್ ನಾರಾಯಣ ಬಡಾವಣೆ. ವಿದ್ಯಾನಗರ ಬಡಾವಣೆ. ಸೇರಿದಂತೆ ವಿವಿಧ ಬಡಾವಣೆಗಳಲ್ಲಿ. ಹಲವಾರು ಗ್ರಾಮಗಳಿಂದ ಸುಮಾರು ಎಂಟು ದಿನಗಳಿಂದ. ಜೋಕುಮಾರನನ್ನು ಹೊತ್ತುಕೊಂಡು ಹಾಡು ಹೇಳುವ ಮೂಲಕ. ಸೋಬಾನ ಹೇಳುತ್ತಾ ಮನೆ ಮನೆ ಬಾಗಿಲಿಗೆ ಹೋಗಿ ಜೋಕುಮಾರ ಕುಂಕುಮ ಪೂಜೆಗೆ ಬೇಕಾಗಿರುವದನ್ನು ಮನೆಯವರಿಗೆ ನೀಡುತ್ತೇವೆ. ಪೂಜೆ ಮಾಡಿ ಕೊಟ್ಟಿರುವ ಅದನ್ನು ತೆಗೆದುಕೊಂಡು ಹೋಗಿ. ರೈತರು ತಮ್ಮ ಜಮೀನುಗಳಿಗೆ ಬೆಳೆದಿರುವಂತಹ ಹಸಿ ಸೊಪ್ಪನ್ನು ತೆಗೆದುಕೊಂಡು ಬಂದು ಅದನ್ನು ಬೇಯಿಸಿ ಜಮೀನುಗಳಿಗೆ ಸರಗ ಹೊಡೆಯುತ್ತಾರೆ. ಜೋಕುಮಾರನ ಬೆವರು ಜಮೀನಿನಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ತೆಗೆದುಕೊಂಡು ಮನೆ ಮನೆಗೆ ಭೇಟಿ ನೀಡಿ ಅವರ ಹತ್ತಿರ ಇರತಕ್ಕಂಥ ಬೇಳೆ ತೊಗರಿ ಕಾಳುಗಳ ಕೊಟ್ಟು ತರಕಾರಿ ಮತ್ತು ಧಾನ್ಯಗಳನ್ನು ತೆಗೆದುಕೊಂಡು ಜೋಕುಮಾರನಿಗೆ ಪದ್ದತಿ ರೂಡಿಗತವಾಗಿ ಪೂಜೆಯನ್ನು ನೆರವೇರಿಸುವರು. . ಜೋಕುಮಾರನ್ನು ತೆಗೆದುಕೊಂಡು ಬಂದಂತಹ ಮಹಿಳೆಯರು. ರೇಣುಕಮ್ಮ. ಗಂಗಮ್ಮ. ರೇಖಾ. ಗೀತಮ್ಮ
ಜೋಕುಮಾರಸ್ವಾಮಿ ಹೊತ್ತು ಊರೂರು ತಿರುಗುವ ಮಹಿಳೆಯರು: ಈತನ ಪೂಜೆಯಲ್ಲಿ ಬಾಗಿಯಾಗಿದ್ದರು.
ಜಾನಪದದ ಸೊಗಡು ಹಾಸಹೊಕ್ಕಾಗಿದೆ.
ಮದ್ಯಕರ್ನಾಟಕದಲ್ಲಿ ವಿವಿಧ ಆಚರಣೆಗಳು ಇನ್ನೂ ಜೀವಂತವಾಗಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿಯೇ ಮನೆಮನೆಗೆ ಸಮೃದ್ಧಿಯನ್ನು ಹೊತ್ತು ತರುವ ಜೋಕುಮಾರಸ್ವಾಮಿ ಆಚರಣೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಜೋಕುಮಾರನ ಪೂಜೆ
: ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ವಿಶೇಷತೆಯಿದೆ. ಜೋಕುಮಾರ ಸ್ವಾಮಿ ಮಳೆ ಮಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂಬುದು ಈ ಭಾಗದ ಜನರ ನಂಬಿಕೆ.
ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಜೋಕುಮಾರ ಎಂದು ಕರೆಯುತ್ತಾರೆ. ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ.
ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು
ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು
ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ; ಬೆನಕನ ಅಮಾವಾಸ್ಯೆಯ ಬಳಿಕ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಆರನೇ ದಿನಕ್ಕೆ ಜೋಕುಮಾರನ ಜನನ ಆಗುತ್ತದೆ ಎಂಬುದು ಭಕ್ತರ ನಂಬಿಕೆ. ಗ್ರಾಮೀಣ ಮತ್ತು ನಗರಗಳಲ್ಲಿ ಮಹಿಳೆಯರು ಜೋಕುಮಾರನನ್ನು ಬುಟ್ಟಿಯಲ್ಲಿ ಹೊತ್ತು ಸುತ್ತುತ್ತಾರೆ. ಹೀಗೆ ಜೋಕುಮಾರ ಹುಣ್ಣಿಮೆ ಬರುವವರೆಗೆ 7 ದಿನಗಳ ಕಾಲ ಸಂಚರಿಸುತ್ತಾರೆ. ಅಲ್ಲದೆ, ಉತ್ತಮ ಮಳೆ, ಬೆಳೆ ಆಗಲಿ ಎಂದು ಇಲ್ಲಿನ ಜನರು ಜೋಕುಮಾರನಿಗೆ ಪೂಜಿಸುತ್ತಾರೆ.
ಜಾನಪದದ ಸೊಗಡು; ಹೊಸ ಬಿದಿರಿನ ಬುಟ್ಟಿಯಲ್ಲಿ ಮಣ್ಣಿನಿಂದಲೇ ಜೋಕುಮಾರನ ಮೂರ್ತಿ ಮಾಡಿ ಪ್ರತಿಷ್ಠಾಪಿಸುತ್ತಾರೆ. ಬೇವಿನ ಎಲೆಗಳಿಂದ ವಿವಿಧ ಹೂಗಳು, ಮೆಣಸಿನಕಾಯಿಂದಲೇ ಅಲಂಕಾರ ಮಾಡುತ್ತಾರೆ. ನಂತರ ಮಹಿಳೆಯರು ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಊರಿನ ಪ್ರಮುಖ ಗಲ್ಲಿಗಳಿಗೆ ಹೊತ್ತುಕೊಂಡು ಹೋಗುತ್ತಾರೆ. ಮನೆಯ ಕಟ್ಟೆಯ ಮೇಲಿಟ್ಟು ಜೋಕುಮಾರನ ಹಾಡುಗಳನ್ನು ಹಾಡುತ್ತಾರೆ. ಇಲ್ಲಿ ಜೋಕುಮಾರನ ಹಾಡುಗಳು ಜಾನಪದ ಶೈಲಿಯಲ್ಲಿವೆ. ಈ ಎಲ್ಲ ಹಾಡುಗಳನ್ನು ಓದಲು, ಬರೆಯಲು ಬಾರದ ಮಹಿಳೆಯರು ಹಾಡುತ್ತಾರೆ.
ಜೋಕುಮಾರನ ತುಟಿಗೆ ಬೆಣ್ಣೆ; ಜೋಕುಮಾರನಿಗೆ ಅಕ್ಕಿ, ಜೋಳ, ಸಜ್ಜಿ, ಗೋಧಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ನೈವೇದ್ಯ ರೂಪದಲ್ಲಿ ನೀಡುತ್ತಾರೆ. ಜೋಕುಮಾರನ ತುಟಿಗೆ ಹಚ್ಚಲಾದ ಬೆಣ್ಣೆಯನ್ನು ಬೇವಿನ ಎಲೆಗೆ ಕಪ್ಪು ಕಾಡಿಗೆ ಹಚ್ಚಿ ನುಚ್ಚು ಪ್ರಸಾದ ಇಟ್ಟುಕೊಡುತ್ತಾರೆ.
ಜೋಕುಮಾರಸ್ವಾಮಿ ಹೊತ್ತು ತಿರುಗುವ ಮಹಿಳೆ ರೇಣುಕಮ್ಮ ಮಾತನಾಡಿ, ಗಣೇಶ ಚತುರ್ಥಿ ಆದ ಬಳಿಕ ಅಷ್ಟಮಿ ದಿನದಂದು ಜೋಕುಮಾರ ಜನಿಸುತ್ತಾನೆ. ಗಣೇಶಮೂರ್ತಿ ಮಾಡುವ ಸ್ಥಳದಲ್ಲಿಯೇ ಮಣ್ಣಿನಿಂದ ಜೋಕುಮಾರನ ಮೂರ್ತಿಯನ್ನು ಸಹ ಮಾಡಿಕೊಂಡು ಬರುತ್ತೇವೆ. ನಂತರ ಬಿದಿರನ ಬುಟ್ಟಿಯಲ್ಲಿ ಇಟ್ಟುಕೊಂಡು ಗ್ರಾಮೀಣ ಹಾಗೂ ನಗರಗಳಲ್ಲಿ ಸಂಚಾರ ಮಾಡುತ್ತೇವೆ ಎಂದರು.