ಜಾನುವಾರು ಸಾಕಾಣಿಕೆಆರ್ಥಿಕ ಬಲವರ್ಧನೆಗೆ ಪೂರಕ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ

ಜಗಳೂರು ಸುದ್ದಿ:ಜಾನುವಾರುಗಳ ಸಾಕಾಣಿಕೆಯಿಂದ ಗ್ರಾಮೀಣ ಭಾಗದ ಆರ್ಥಿಕತೆ ಬಲವರ್ಧನೆಗೆ ಪೂರಕ.ರೈತರು ಅಧಿಕ ಸಂಖ್ಯೆಯಲ್ಲಿ ಜಾನುವಾರು ಸಾಕಾಣಿಕೆಗೆ ಮುಂದಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆನೀಡಿದರು.

ಪಟ್ಟಣದ ಶಾಸಕರ ನಿವಾಸದ ಬಳಿ ಜಾನುವಾರು 21 ನೇ ಜಾನುವಾರು ಗಣತಿಗೆ ಭಿತ್ತಿಚಿತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪೂರ್ವಜರ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳನ್ನೇ ಅವಲಂಬಿಸಿದ್ದರು.ಮೊಟ್ಟೆ ಮಾಂಸದಂತಹ ಜಾನುವಾರು ಉತ್ಪನ್ನಗಳು ಗ್ರಾಮೀಣ ಭಾಗದ ಜನಸಂಖ್ಯೆಗನುಗುಣವಾಗಿ ಪೌಷ್ಠಿಕ ಭದ್ರತೆಗೆ ಪೂರಕವಾಗಿದ್ದವು.ಇತ್ತೀಚೆಗೆ ತಂತ್ರಜ್ಞಾನ ಅಳವಡಿಕೆಯಿಂದ ಆಧುನಿಕ ಕೃಷಿಪದ್ದತಿಗಳಿಂದ ಜಾನುವಾರುಗಳ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಪ್ರಸಕ್ತವಾಗಿ ಕೆರೆಗಳು ಕೋಡಿಬಿದ್ದು ನೀರಿನ ಆಕರಗಳು ಮೈದುಂಬಿ ಹರಿಯುತ್ತಿವೆ.ಸಮೃದ್ದವಾಗಿ ಮೇವು ಬೆಳವಣಿಗೆಯಿಂದ ಜಾನುವಾರು ಸಾಕಾಣಿಕೆಗೆ ಅನುಕೂಲವಾಗಲಿದೆ ಎಂದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ್ ಮಾತನಾಡಿ,’40000 ದನಗಳು,129000 ಕುರಿಮೇಕೆಗಳಿದ್ದು.‌ಜಾನುವಾರುಗಳ ಗಣತಿಗೆ 15 ಜನ ಗಣತಿದಾರರು,2 ಜನ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.ತಾಲೂಕಿನ ಮನೆ ಹಾಗೂ ಉದ್ಯಮ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ರೈತರು ಸಹಕರಿಸಬೇಕು.ಇದರಿಂದ ಸರಕಾರ ಜಾನುವಾರು ಸಂರಕ್ಷಣಾ ಯೋಜನೆ ಮತ್ತು ನೀತಿ ನಿರೂಪಣೆಗೆ ಪ್ರಯೋಜನವಾಗುತ್ತದೆ ಎಂದು ಮಾಹಿತಿ ನೀಡಿದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷಬಿ. ಮಹೇಶ್ವರಪ್ಪ, ಮುಖಂಡರಾದ ಗಿಡ್ಡನಕಟ್ಟೆ ಕಾಂತರಾಜ್,ಚಿತ್ರಪ್ಪ,ತಿಪ್ಪೇಸ್ವಾಮಿ,ಮಾಜಿ ಮಂಜುನಾಥ್,ಪಲ್ಲಾಗಟ್ಟೆ ಶೇಖರಪ್ಪ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!