ಪೌರಕಾರ್ಮಿಕರೊಂದಿಗೆ ಸಾರ್ವಜನಿಕರು ಸ್ವಚ್ಛತೆಗೆ ಕೈಜೋಡಿಸಿ:ಶಾಸಕ.ಬಿ.ದೇವೇಂದ್ರಪ್ಪ ಕರೆ.
ಜಗಳೂರು ಸುದ್ದಿ:ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಶಾಸಕ.ಬಿ.ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ನಟರಾಜ್ ಟಾಕೀಸ್ ಬಳಿ ಖಾಲಿ ನಿವೇಶನದಲ್ಲಿ ಸಸಿಗೆ ನೀರೆರೆದು,ಪ್ರತಿಜ್ಞಾವಿಧಿಯೊಂದಿಗೆ ಸ್ವಭಾವ ಸ್ವಚ್ಚತಾ ಸಂಸ್ಕಾರ ಸ್ವಚ್ಛತಾ -ಸ್ವಚ್ಛತೆಯ 2024 ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪಟ್ಟಣ ಪಂಚಾಯಿತಿಯ ಕಸದವಾಹನ ಪ್ರತಿನಿತ್ಯ ಪ್ರತಿ ವಾರ್ಡ್ ಗಳಲ್ಲಿ ಮನೆಬಾಗಿಲಿಗೆ ಬರುವಾಗ ಸಾರ್ವಜನಿಕರು ಒಣಕಸ,ಹಸಿಕಸ ವಿಲೆವಾರಿಯೊಂದಿಗೆ ಪಟ್ಟಣದ ನೈರ್ಮಲ್ಯ ಕಾಪಾಡಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಕಸವಿಲೆವಾರಿಗಳಿಂದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ.ಜಾಗೃತರಾಗಿ ಮುಂಜಾಗ್ರತೆಯಿಂದ ಚರಂಡಿ ಸೇರಿದಂತೆ ಮನೆಯ ನೆರೆಹೊರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
‘ಸರ್ಕಾರದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಗಾಂಧಿಜಯಂತಿ ಅಂಗವಾಗಿ ಆಯೋಜಿಸುವ ಸ್ವಚ್ಛತೆಯ ಜನಜಾಗೃತಿ ಕುರಿತು ಆಯೋಜಿಸುವ ಕಾರ್ಯಕ್ರಮಗಳು ಪ್ರಶಂಸನೀಯ.ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದರು.
ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,’ಸರ್ವರೂ ಸ್ವಚ್ಚತೆಯೇ ಸೇವೆ ಎಂಬ ಭಾವನೆಮೈಗೂಡಿಸಿಕೊಳ್ಳಬೇಕಿದೆ.ಸೆ.19 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ.ಪರಿಸರದಲ್ಲಿ ಗಿಡಮರಗಳನ್ನು ಉಳಿಸಿ ಬೆಳೆಸಬೇಕು’ ಎಂದು ತಿಳಿಸಿದರು.
ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ನವೀನ್ ಕುಮಾರ್,ಸದಸ್ಯರಾದ ರಮೇಶ್ ರೆಡ್ಡಿ,ಲಲಿತಾಶಿವಣ್ಣ,ಶಕೀಲ್ ಅಹಮ್ಮದ್,ಲುಕ್ಮಾನ್ ಖಾನ್,ಮಹಮ್ಮದ್ ಅಲಿ,ಆರೋಗ್ಯ ನಿರೀಕ್ಷಕ ಪ್ರಶಾಂತ್,ಸೇರಿದಂತೆ ಇದ್ದರು.