ಈದ್ ಮಿಲಾದ್ ಸೌಹಾರ್ದ ಸಾಮರಸ್ಯತೆಯ ಪ್ರತೀಕ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ
ಜಗಳೂರು ಸುದ್ದಿ:ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಸಾಮಸ್ಯತೆ,ಸೌಹಾರ್ದತೆಯ ಈದ್ ಮಿಲಾದ್ ಹಬ್ಬದ ಪ್ರತೀಕವಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ವಿಶ್ವಶಾಂತಿಗಾಗಿ ಮಹಮ್ಮದ್ ಪೈಗಂಬರ್ ಅವರ ಸಂದೇಶಗಳು ಸಮಾಜಕ್ಕೆ ಆದರ್ಶಗಳು.ಧರ್ಮಾತೀತವಾಗಿ ಧಾರ್ಮಿಕ ವಿಚಾರಗಳ ಸಂವಹನ,ಸಮಾಲೋಚನೆಗಳು ಹಬ್ಬಗಳು ಸಂಭ್ರಮದ ಸೆಲೆಯಾಗಬೇಕು ಎಂದು ತಿಳಿಸಿದರು.
ಪಟ್ಟಣದ ಭುವನೇಶ್ವರಿ,ಮಹಾತ್ಮಗಾಂಧಿ ವೃತ್ತಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಮೂಲಕ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಅಂಗವಾಗಿ ಖುರಾನ್ ಪಠಣದೊಂದಿಗೆ ಈದ್ ಮಿಲಾದ್ ಸಂಭ್ರಮ ಆಚರಿಸಲಾಯಿತು.
ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಮುಖಂಡರಾದ ಬಿ.ಮಹೇಶ್ವರಪ್ಪ,ಮಸ್ಜಿದ್ – ಏ ಇಮಾಮ್ ಅಹಮದ್ ರಜಾ ಮಸೀದಿಯ ಅಧ್ಯಕ್ಷ ಶಫಿವುಲ್ಲಾ ಖಾನ್, ಧರ್ಮ ಗುರುಅರ್ಪಾತ್ ಮೌಲಾನ, ಎಸ್ . ಎಸ್.ಎಫ್. ತಾಲೂಕು ಅಧ್ಯಕ್ಷ ನಿಜಾಮ್ ಖಾನ್, ಮಸೀದಿ ಕಮಿಟಿ ಮುಖ್ಯಸ್ಥರಾದ ಮಹಮ್ಮದ್ ಗಜಾಲಿ, ನಜರ್ ಉಲ್ಲಾಖಾನ್, ಕಲಂದರ್ ಹಜರತ್, ಇಮ್ತಿಯಾಸ್, ಸಾಧಿಕ್ , ಸೈಯದ್ ಗೌಸ್, ಸೈಯದ್ ವಸಿಮ್, ಇರ್ಫಾನ್,ಸಮಿಉಲ್ಲಾ ಎಸ್ ,ಮಹಬೂಬ್ ಸಾಬ್ ,ದಾದಾಪೀರ್ ಕೌಸರ್ ಹಾಗೂ ಮಸೀದಿ ಕಮಿಟಿ ಯುವಕರು ಹಾಜರಿದ್ದರು.