Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 6
ನಿಮ್ಮ ಜಮೀನಿಗೆ ಕಾಲು ದಾರಿ ಅಥವಾ ಬಂಡಿ ದಾರಿ ಎಷ್ಟು ಇದೆ ಎಂದು ತಿಳಿಯುವುದು ಹೇಗೆ
ನಿಮ್ಮ ಜಮೀನಿಗೆ ಹೋಗಲು ಇರುವ ದಾರಿಯನ್ನ ಕಂಡುಕೊಳ್ಳಿ. ಕಾಲುದಾರಿ ಹಾಗೂ ಬಂಡಿ ದಾರಿ ಅಳತೆಯನ್ನು ತಿಳಿದುಕೊಳ್ಳಿ ಎಲ್ಲರಿಗೂ ಸಹ ಗೊಂದಲ ಇದ್ದೇ ಇರುತ್ತದೆ ನಮ್ಮ ಜಮೀನಿಗೆ ಹೋಗುವುದು ಅಳತೆ ಎಷ್ಟು ಬಂಡಿಯಳತೆ ಎಷ್ಟು ಎಂಬ ಗೊಂದಲ ಇರುತ್ತದೆ. ಹಾಗೂ ಕಾಲುದಾರಿ ಅಳತೆ ಎಷ್ಟು? ಕಾಲುದಾರಿ ಹಾಗೂ ಬಂಡು ಬಂಡಿ ದಾರಿ ಅಳತಿಯನ್ನು ನಾವು ತಿಳಿದುಕೊಳ್ಳೋಣ. ನೋಡಿ ಸ್ನೇಹಿತರೆ ಹಲವಾರು ಜನರಿಗೆ ಇದೇ ಸಮಸ್ಯೆ ಇರುತಿದೆ ಅವರು ಅವರ ಜಮೀನಿಗೆ ಹೋಗುವಾಗ ಅಲ್ಲಿ ದಾರಿ ಇರುವುದಿಲ್ಲ ಅವರು ಪಕ್ಕದ ಜಮೀನಿನ ದಾರಿಯಿಂದ ಹಾದು ಹೋಗಬೇಕಾಗುತ್ತದೆ. ಬರ ಬರುತ್ತಾ ಕಾಲುದಾರಿ ಮತ್ತು ಜಮೀನಿನ ದಾರಿ ಮಧ್ಯೆ ಜಗಳವು ಶುರುವಾಗುತ್ತದೆ. ಹಿನ್ನೆಲೆಯಲ್ಲಿ ಸರ್ಕಾರವು ಇದಕ್ಕೊಂದು ಪರಿಹಾರವನ್ನು ನೀಡಿದೆ. ಅದೇನೆಂದರೆ ಪ್ರತಿಯೊಬ್ಬರಿಗೂ ಸಹ ಅವರವರ ಜಮೀನಿಗೆ ಹೋಗಿ ಬರಲು ಒಂದು ಕಾಲು ದಾರಿಯ ಹಕ್ಕು ಇರುತ್ತದೆ.
ಹಾಗೂ ನೀವು ದಾರಿಯನ್ನ ಪಡೆಯುವುದು ನಿಮ್ಮ ಮೂಲಭೂತ ಹಕ್ಕಿನಲ್ಲಿ ಒಳಗೊಂಡಿರುತ್ತದೆ. ನಮ್ಮ ಪೂರ್ವಜರು ಪ್ರತಿಯೊಂದು ಸರ್ವೆಯನ್ನು ಮಾಡುವಾಗ ಕಾಲುದಾರಿ ಹಾಗೂ ಬಂಡಿದಾರಿ ಅಳತೆಯನ್ನು ಪ್ರತ್ಯೇಕವಾಗಿ ಇಡುತ್ತಿದ್ದರು. ಅದನ್ನ ನಾವು ಈಗ ಖರಾಬ ಭೂಮಿ ಅಂತ ಕರೀತೀವಿ. ಈ ಭೂಮಿಯಲ್ಲಿ ಎರಡು ರೀತಿಯ ವರ್ಗಗಳು ಇರುತ್ತವೆ. ಬಾ ಕರಾಬರಲ್ಲಿ ಕಾಲುದಾರಿ ಮತ್ತು ಬಂಡಿ ದಾರಿಯ ವಿಸ್ತೀರ್ಣದ ಬಗ್ಗೆ ಮಾಹಿತಿ ಇರುತ್ತದೆ. ಕರ್ನಾಟಕ ಆಕ್ಟ್ 1966ರ ಪ್ರಕಾರ ನಾವು ನಡೆದುಕೊಂಡು ಹೋಗುವಂತಹ ದಾರಿಯ ವಿಸ್ತೀರ್ಣ ಎಂಟು ಅಡಿ ಎರಡು ಇಂಚು ಇರಬೇಕು. ಅಷ್ಟು ಜಾಗವನ್ನು ಬಿಡಬೇಕಾಗುತ್ತದೆ. ಅದರ ಉದ್ದದ ವಿಸ್ತೀರ್ಣವನ್ನು ನಾವು ಹೇಳಲಿಕ್ಕೆ ಸಾಧ್ಯವಿಲ್ಲ ಏಕೆಂದರೆ ಜಮೀನು ಎಷ್ಟು ದೂರದವರೆಗೂ ಇರುತ್ತದೆಯೋ ಅಲ್ಲಿ ತನಕನೂ ಅದರ ವಿಸ್ತೀರ್ಣ ಇರುತ್ತದೆ. ಇನ್ನು ನಾವು ಬಂಡಿ ದಾರಿಯ ಬಗ್ಗೆ ಮಾತನಾಡಲಿಕ್ಕೆ ಹೋದರೆ 20 ಅಡಿ ಅಗಲವಿರುತ್ತದೆ.
ಸರ್ಕಾರ ಕೊಟ್ಟಿರುವ ಹಕ್ಕಿನ ಪ್ರಕಾರ ಕಾಲುಧಾರಿ ಹಾಗೂ ಬಂಡಿ ದಾರಿಯಲ್ಲಿ ಯಾರು ಕೂಡ ಅವರ ಜಮೀನಿನವರೆಗೆ ತಕರಾರು ಇಲ್ಲದೆ ಹೋಗಿ ಬರಬಹುದು. ಪಕ್ಕದ ರೈತನ ಕೂಡ ಯಾವುದೇ ರೀತಿ ಆಬ್ಜೆಕ್ಷನ್ ಮಾಡೋ ಅವಶ್ಯಕತೆ ಇಲ್ಲ. ಇದು ಇವರ ಮೂಲಭೂತ ಹಕ್ಕು ಆಗಿರುತ್ತದೆ. ಅದರಂತೆ ನೀವು ಪ್ರತ್ಯೇಕ ವಿಸ್ತೀರ್ಣವನ್ನ ನೀವು ನೋಡ ಬಯಸುವುದಾದರೆ ನೀವು ಸರ್ವೆ ಆಫೀಸಿಗೆ ಹೋಗಿ ಅಲ್ಲಿ ಅರ್ಜಿಯನ್ನು ಕೊಟ್ಟರೆ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.
ಒಂದು ವೇಳೆ ನಿಮಗೆ ಜಮೀನಿಗೆ ಹೋಗುವ ದಾರಿ ಸಿಗಲಿಲ್ಲ ಅಂತಾದಲ್ಲಿ ಸರ್ವೆಯಲ್ಲಿ ಇಲ್ಲ ಅಂತ ಬರದಲ್ಲಿ ನೀವು ಚಿಂತಿಸಬೇಕಾದ ಅಗತ್ಯ ಇಲ್ಲ ನೀವು ಬೇರೆ ದಾರಿಯನ್ನ ತೆರೆದುಕೊಳ್ಳಬಹುದು. ಅದು ಹೇಗೆ ಎಂದರೆ ನೀವು ಎಲ್ಲಾ ದಾಖಲೆಗಳೊಂದಿಗೆ ಡಿ ಡಿ ಎಲ್ ಆರ್ ಅವರಿಗೆ ಅರ್ಜಿ ಕೊಟ್ಟು ದಾರಿ ಅಗತ್ಯತೆಗಳನ್ನು ನೀವು ತಿಳಿಸಿದರೆ ಖಂಡಿತ ನಿಮಗೆ ದಾರಿ ಸಿಗುತ್ತದೆ. ೮
|
ದಾನ ಪತ್ರದ ಮೂಲಕ ಮಾಡಬೇಕು ಅಥವಾ ವಿಭಾಗ ಪತ್ರದ ಮೂಲಕ ಮಾಡಬೇಕು ಅನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.