ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಕಾರ್ಯಕರ್ತರೊಂದಿಗೆ ಸಮಲೋಚನೆ ಸಭೆ ನಡೆಸಿ ಪಕ್ಷ ಸೇರುವ ನಿರ್ಧಾರ ಮಾಜಿ ಶಾಸಕ ಹೆಚ್ ಪಿ ರಾಜೇಶ್.

ಸುದ್ದಿ ಜಗಳೂರು

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 7

ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಸುದ್ದಿಗಾರರೊಂದಿಗೆ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು ಕಳೆದ ವಿಧಾನಸಭಾ ಚುನಾವಣೆಯಲ್ಲಿ   ಸ್ವತಂತ್ರ್ಯ ಸ್ವಾಭಿಮಾನಿ ಅಭ್ಯರ್ಥಿಯಾಗಿ  ಸ್ವರ್ಧಿಸಿ ಗೆದ್ದು ಸೋಲು ಅನುಭವಿಸಿ ಕ್ಷೇತ್ರದ ಆಡಳಿತದ ಬಗ್ಗೆ ಗಮನಿಸುತ್ತಿದ್ದೆನೆ. ಇದೀಗ ನಮ್ಮನ್ನು ನಂಬಿದ ಪ್ರಮಾಣಿಕ ಕಾರ್ಯಕರ್ತರ ಮತ್ತು ನಮ್ಮ  ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಯಾವುದಾದರು ಪಕ್ಷಕ್ಕೆ ಸೇರ್ಪಡೆಯಾಗಲು ಅಥವಾ ಸ್ವತಂತ್ರ್ಯ ಸ್ವಾಭಿಮಾನಿಯಾಗಿ ಒಟ್ಟಾರೆ ಮುಂದಿನ ಏಳು ಬೀಳುಗಳ ಬಗ್ಗೆ ಸುದೀರ್ಘವಾಗಿ ದಿನಾಂಕ ಪ್ರೇಬ್ರವರಿ 12  ರಂದು ಸೋಮವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಕಾರ್ಯಕರ್ತರೊಂದಿಗೆ ಮಹತ್ವದ  ಸಮಲೋಚನೆ ಸಭೆ  ನಡೆಸಿ ನಮ್ಮ ರಾಜಕೀಯ ನಡೆಯನ್ನು ನಿರ್ದಾರ ಮಾಡಲಾಗುವುದು ಎಂದು ಮಾಜಿ ಶಾಸಕರು ನೂರಾರು ಕಾರ್ಯಕರ್ತರ ಜೊತೆಗೆ ಸುದ್ದಿಗೋಷ್ಠಿಯಲ್ಲಿ  ಸುದ್ದಿಗಾರರೊಂದಿಗೆ ತಿಳಿಸಿದರು ಒಟ್ಟಾರೆ   ತನ್ನ ಗುಟ್ಟಿನ ರಹಸ್ಯವನ್ನ ತಿಳಿಸದೆ ಕಾರ್ಯಕರ್ತರ  ನಡೆಯೆ ನನ್ನ ನಡೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾಜಿ ಶಾಸಕರು 

ಬಿಜೆಪಿ.ಕಾಂಗ್ರೆಸ್ ಪಕ್ಷದ.ರಾಜ್ಯ ನಾಯಕರಿಂದ ತಮಗೆ ಆಹ್ವಾನ ಬಂದಿಯೇ?

ಮಾಜಿ ಶಾಸಕ ಹೆಚ್ ಪಿ ಆರ್ 

:ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ,ಹಾಗೂ ರಾಜ್ಯಾದ್ಯಕ್ಷ  ಡಿ. ಕೆ ಶಿವಕುಮಾರ್ ಎಸ್ ಎಸ್ ಮಲ್ಲಿಕಾರ್ಜುನ್, ಶಿವಶಂಕರಪ್ಪ ಅಲ್ಲದೆ ಬಿಜೆಪಿಯಿಂದ ಸಂಸದ ಸಿದ್ದೇಶ್ವರ ಹಾಗೂ ವಿಜಯೇಂದ್ರ ಹೀಗೆ ಎರಡು ಪಕ್ಷಗಳಿಂದಲೂ ನನ್ನಗೆ  ಯಾವುದೇ ಅಹ್ವಾನ ಬಂದಿಲ್ಲ ಮುಖಂಡರು ಬೆಂಬಲಿಗರು ಯಾವ ಪಕ್ಷಕ್ಕೆ ಹೋಗಬೇಕು ಬೇಡವು ಎಂಬುದು  ಮಾರ್ಗದರ್ಶನ ಮಾಡುತ್ತಾರೋ ಆ ಪಕ್ಷಕ್ಕೆ ಹೊಗುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಲೋಕಸಭೆ ಚುನಾವಣೆ ಸಮೀಪವಿದ್ದು, ಮುಖಂಡರು ಕಾರ್ಯಕರ್ತರ ಭವಿಷ್ಯದ ಹಿತದೃಷ್ಟಿಯಿಂದ ಬೆರೋಂದು ಪಕ್ಷಕ್ಕೆ ಹೋಗುವ ತೀರ್ಮಾನ ಅನಿವಾರ್ಯ , ಮುಂದಿನ ತಾ.ಪಂ. ಜಿ.ಪಂ ಚುನಾವಣೆಯಲ್ಲಿ ನನ್ನ ಬೆಂಬಲಿಗರಿಗೆ ಅನುಕೂಲವಾಗಲಿ ಎಂಬ ಆಶಯದಿಂದ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಮುಖಂಡರಾದ ಎಲ್ ಬಿ ಬೈರೇಶ್. ತಿಪ್ಪೇಸ್ವಾಮಿ ಗೌಡ್ರು,ಎನ್ ಎಸ್ ರಾಜಣ್ಣ. ಮಾಜಿ ನಾಯಕ ಸಮಾಜದ ಕಾರ್ಯಧರ್ಶಿ. ಲೋಕಣ್ಣ.ಮುಖಂಡ ಬಿದರಕೆರೆ ವೀರೇಶಿ., ಸೊಕ್ಕೆರಾಜಣ್ಣ, ಮುಖಂಡ ಸೂರಲಿಂಗಪ್ಪ,,ಮಾರಣ್ಣ ಸೇರಿದಂತೆ  ಅಭಿಮಾನಿಗಳು ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿದ್ದರು

ಮಾಜಿ ಶಾಸಕ ಹೆಚ್ ಪಿ ರಾಜೇಶ್  ಚಿತ್ತ ಯಾವ ಪಕ್ಷದತ್ತ ಸಾರ್ವಜನಿಕ ವಲಯದಲ್ಲಿ  ಕೂತಹಲ  ಮೂಡಿಸುತ್ತಿರುವ  ನಿರ್ಧಾರದ ಗುಟ್ಟಿನ ರಹಸ್ಯವೇನು? ವೀಕ್ಷಿಸಿ ನಮ್ಮ ವೆಬ್ ಮೀಡಿಯಾ ನ್ಯೂಸ್.

Leave a Reply

Your email address will not be published. Required fields are marked *

You missed

error: Content is protected !!