Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಪ್ರೇಬ್ರವರಿ 6
ಜಗಳೂರು ತಾಲ್ಲೂಕು ಪಂಚಾಯತಿ ಆಡಳಿತ ಕುಸಿತ ಇಸ್ವತ್ತು ಮಾಡಿಸಲು ಹರಸಾಹಸ . ಕೈಗೆ ಸಿಗದ ಪಿಡಿಓಗಳು ಮೊಬೈಲ್ ಕರೆ ಸ್ವಿಕರಿಸುತ್ತಿಲ್ಲ ಸಾರ್ವಜನಿಕರ ಆರೋಪ
ತಾಲೂಕಿನ ಕೆಲ ಗ್ರಾಪಂ ಗಳಲ್ಲಿ ಇಸ್ವತ್ತು ಮಾಡಿಕೊಡಲು ಫಲಾನುಭವಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವು ಕೂಡ ಹೊಸದೇನಲ್ಲ . ತಾಪಂ ಪ್ರಭಾರ ಇಓ ಕೆ ಟಿ ಕರಿಬಸಪ್ಪ ರವರು ತಾಲ್ಲೂಕು ಪಂಚಾಯತಿ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದಾರೆ . ಕ್ಷೇತ್ರದ ಶಾಸಕರು ಇತ್ತ ಕಡೆ ಗಮನಹರಿಸಿ ಚುರುಕಿನ ಆಡಳಿತ ನಡೆಸಲು ಕ್ರಮಕೈಗೊಳ್ಳಬೇಕು.ಇಸ್ವತ್ತು ಮಾಡಿಕೊಡಲು ಹಣ ನೀಡಿದರೆ ಸಲೀಸಾಗಿ ಮಾಡಿಕೊಡುತ್ತಾರೆ ಎಂಬವುದಕ್ಕೆ ಸಾಕ್ಷಿ ಎಂಬಂತೆ ಕಳೆದ ದಿನಗಳಲ್ಲಿ ಕೆಚ್ಚೆನಹಳ್ಳಿ ಗ್ರಾಪಂ ಪಿಡಿಓ ಇಸ್ವತ್ತು ಮಾಡಿಕೊಡಲು ಕೆಳಗೊಟೆ ಗ್ರಾಮದ ಬಸವನಗೌಡ ಎಂಬುವವರ ಬಳಿ ಲಂಚ ಸ್ವಿಕರಿಸು ವೇಳೆ ಪಿ ಡಿ ಓ ರೆಡ್ ಹ್ಯಾಂಡ ಆಗಿ ಸಿಕ್ಕಿಬಿದ್ದ ನಿರ್ದರ್ಶನಗಳು ಕಣ್ಮುಂದೆ ಇವೆ ಇಂತ ಹಣ ಪೀಡಕರಿದ್ದಾರೆ . ಕೆಲ ಪಂಚಾಯಿತಿಗಳಲ್ಲಿ ಈಗಲೂ ಲಂಚದ ಅವತಾರ ತಾಂಡವಾಡುತ್ತಿದೆ ಹಣ ನೀಡದೆ ಯಾವ ಕೆಲಸ ನಡೆಯವುದಿಲ್ಲ ಇದಕ್ಕೆ ಸಾಕ್ಷಿಯಂಬಂತೆ ಗುತ್ತಿದುರ್ಗ ಗ್ರಾಪಂ ಹೊಸೂರು ಗ್ರಾಮದ ವ್ಯಕ್ತಿವೊರ್ವನಿಗೆ ಇಸ್ವತ್ತು ಮಾಡಿಕೊಡಲು ಅಲ್ಲಿನ ಪಿಡಿಓ ಶಶಿಧರ್ ಪಾಟೀಲ್ ಹಣ ಪಡೆದಿದ್ದಾರೆ ಎಂಬ ಆರೋಪವು ಸಹ ಸಾರ್ವಜನಿಕ ವಲಯದಲ್ಲಿ ಗ್ರಾಸವಾಗಿ ಚರ್ಚೆಯಾಗುತ್ತಿದೆ.
ತಾಲ್ಲೂಕಿನ ಕೆಲ ಗ್ರಾಪಂಗಳಲ್ಲಿ 15 ನೇ ಹಣಕಾಸು ಯೋಜನೆಯಡಿಯಲ್ಲಿ ಅನುದಾನ ಸಹ ದುರುಪಯೋಗದ ಆರೋಪ ಕೇಳಿ ಬಂದಿದೆ .ಕಳೆದ ದಿನಗಳ ಹಿಂದೆ ಪಲ್ಲಾಗಟ್ಟೆ ಗ್ರಾಮ ಪಂಚಾಯತಿ ಪಿಡಿಓ ಶಶಿಧರಪಾಟಿಲ್ ಎಂಬುವರು ಲಕ್ಷ ಲಕ್ಷ ಹಣ ಲೂಟಿ ಮಾಡಿರುವುದನ್ನ ಅಲ್ಲಿನ ಗ್ರಾಪಂ ಸದಸ್ಯರು ಬಯಲು ಮಾಡಿರುವುದು ವ್ಯಾಪಕವಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು .ಈ ರೀತಿ ದಿನೆ ದಿನೆ ಪಂಚಾಯತಿ ಆಡಳಿತವು ಕುಸಿತವಾಗಿ ಅಧೋಗತಿ ತಲುಪಿತ್ತಿವೆ ಇವುಗಳಿಗೆ ಕಡಿವಾಣ ಹಾಕಬೇಕಾದ ಮೇಲಾಧಿಕಾರಿಗಳೆ ಕೆಳಗಿನ ಅಂತದ ಅಧಿಕಾರಿಗಳು ತಪ್ಪು ಮಾಡಿದಾಗ ಶಿಕ್ಷಿಸುವ ಬದಲು ರಕ್ಷಣೆ ನೀಡಿ ಅಮಾನತ್ತು ಮಾಡುವ ಬದಲು ಬೇರೆಡೆಗೆ ಯಾವುದಾದರು ಕಾನೂನು ಪರಿಮಿತಿ ಹುಡುಕಿ ಬೇರೆಡೆಗೆ ನಿಯೋಜನೆ ಮಾಡಿ ಮತ್ತೂಷ್ಟು ಭ್ರಷ್ಟಾಚಾರ ಮಾಡಲು ಇಂಬು ಕೊಟ್ಟಂತಿದೆ.ಇದಕ್ಕೆ ಉದಾಹರಣೆ ಎಂದರೆ ಕಳೆದ ದಿನಗಳ ಹಿಂದೆ ಗುರುಸಿದ್ದಪುರ ಪಂಚಾಯತಿ ಪಿಡಿಓ ಎ ಟಿ ನಾಗರಾಜ್ ರವರು ತಪ್ಪು ಮುಚ್ಚಿಕೊಳ್ಳಲು ಮೂಲ ಚನ್ನಗಿರಿ ತಾಲೂಕಿನ ಪಂಚಾಯತಿಯೊಂದಕ್ಕೆ ನಿಯೋಜನೆ ಮಾಡಿ ಮರೆಮಾಚಲಾಗಿತ್ತು ಪುನ ಐದು ತಿಂಗಳ ನಂತರ ಅದೇ ಪಿಡಿಓ ನಾಗರಾಜ್ ರವರುನ್ನ ಜಗಳೂರು ತಾಲ್ಲೂಕಿನ ಗುತ್ತಿದುರ್ಗ .ಹಿರೆಮಲ್ಲನಹೊಳೆ ಗುರುಸಿದ್ದಪುರ ಪಂಚಾಯತಿಗಳಿಗೆ ನಿಯೋಜನೆ ಮಾಡಿರುವುದನ್ನ ನಾವು ಸ್ಮರಿಸಬಹುದಾಗಿದೆ ಇಂತ ಉದಾಹರಣೆಗಳುವೆ. ಒಟ್ಟಾರೆ ಮೇಲಾಧಿಕಾರಿಗಳೆ ಶಿಕ್ಷೆಸುವ ಬದಲು ರಕ್ಷಿಸುವುದು ಯಾವ ನ್ಯಾಯ ಸರ್ಕಾರಿ ನೀಯಮ ಸುತ್ತೂಲೆಗಳು ನಾಮಕವ್ಯವಸ್ಥೆಯಂತಾಗಿವೆ . ಇದೀಗ ಅದೆ ನಾಗರಾಜ ಅತಿಯಾದ ಭಷ್ಟಚಾರಕ್ಕೆ ಸಿಲುಕಿ ಆರ್ ಟಿ ಐ ಕಾರ್ಯಕರ್ತನ ರಾಮಕೃಷ್ಣನ ಕೊಲೆ ಪ್ರಕರಣದಲ್ಲಿ ಕುಮ್ಮಕ್ಕು ಇದೆ ಎಂದು ಆರೋಪದಡಿ ಜೈಲು ಸೇರಿದ್ದ ಕಥೆ ಹೊಸದೇನೆಲ್ಲ. ಪ್ರಜಾಪ್ರಭುತ್ವ ದೇಶದ ಕೆಲ ಕಛೇರಿಗಳಲ್ಲಿ ಅಧಿಕಾರಿಗಳ ನಡೆ ಈ ರೀತಿಯಾದರೆ ಹೇಗೆ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ. . ಕರ್ತವ್ಯ ಪಾಲನೆಯಾಗುತ್ತಿಲ್ಲ ಕೆಲ ಗ್ರಾಪಂ ಪಂಚಾಯತಿಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ಪಿಡಿಓಗಳು ಕರ್ತವ್ಯ ಪಾಲನೆ ಮಾಡಬೇಕಾದ ಸರ್ಕಾರಿ ನೀಯಮವಿದ್ದರು ಸಹ ಗ್ರಾಪಂ ಗಳಲ್ಲಿ ಯಾವುದೇ ಪಿಡಿಓ ಮತ್ತು ಕೆಲ ಮುಖ್ಯವಾದ ಸಿಬ್ಬಂದಿಗಳು ಹಾಜುರಿರುವುದಿಲ್ಲ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಗ್ರಾಪಂ ಗೆ ಭೇಟಿ ಮಾಡಿದರೆ ಕೈಗೆ ಸಿಗುವುದಿಲ್ಲ ಕೆಲ ಪಿಡಿಓ ಗಳಂತು ಪೋನ ಕರೆ ಸಹ ಸ್ವೀಕರಿಸುವುದಿಲ್ಲ .ಜಗಳೂರು ಕ್ಷೇತ್ರದಲ್ಲಿ ಹೈಟೆಕ್ ಅಭಿವೃದ್ಧಿ ಅಧಿಕಾರಿಗಳೆ ಹೆಚ್ಚು ಕಾರಿನಲ್ಲಿ ಗ್ಲಾಸ್ ಏರಿಸಿಕೊಂಡು ಸಾರ್ವಜನಿಕರ ಕಣ್ಣಿಗೆ ಕಾಣದಂತೆ ಮಾಯವಾಗುವರು.
ಗ್ರಾಪಂ ಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಡಿ ಸಾಮಗ್ರಿ ಅನುದಾನ ಮಂಜೂರಾದ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳು ಪುಲ್ ಆ್ಯಕ್ಟಿವ್ ಆಗಿ ತಾಪಂ ಇಲಾಖೆ ಆವರಣವೆ ತುಂಬಿ ತುಳುಕುವುದು ಜಿಪಂನಿಂದ ಅನುದಾನದ ಹಣ ರಿಲಿಜ್ ಆಗುವುದೆ ತಡ ಪಾರ್ಟಿ ಪರಿಷಂಟ್ ಪಾಲು ಹಂಚಿ ತಾನುಷ್ಟು ತಿಂದ ಬಾಯಿಗೆ ಹೊರೆಸಿಕೊಂಡು ಗ್ರಾಪಂ ವ್ಯಾಪ್ತಿಯಲ್ಲಿನ ಸಾರ್ವಜನಿಕ ಕೆಲಸಗಳನ್ನೆ ಮರೆತು ಬಿಡುವರು ಇದು ನೈಜ ವಾಸ್ತವ ಆದ್ದರಿಂದ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸರ್ಕಾರದ ಅನೇಕ ಯೋಜನೆಗಳುನ್ನು ಬಡವರಿಗೆ ನೀಡಲು ಒತ್ತು ನೀಡಬೇಕಾಗಿದೆ . ಗ್ರಾಮೀಣ ಬಾಗದಲ್ಲಿ ಸಾಮಾನ್ಯ ಬಡವರು ಒಂದು ಬಚ್ಚಲು ಗುಂಡಿಗೆ ಬಿಲ್ ಮಾಡಿಕೊಳ್ಳವುದು ಸಹ ಕಷ್ಟ ಪಡುವ ಪರಿಸ್ಥಿತಿಯಿದೆ . ವಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ ಸೇರಿದಂತೆ ಕೆಲ ಪಂಚಾಯತಿಗಳಲ್ಲಿ ಅಂಗವಿಕಲರಿಗೆ ಬಳಸುವ ಅನುದಾನ.ಮತ್ತು ಎಸ್ಸಿ ಎಸ್ಟಿ ಬಳಕೆ ಅನುದಾನ ಸಹ ಮೀಸಲಿಟ್ಟಿರುವುದಿಲ್ಲ ಎಂಬ ಕೂಗು ಸಹ ಕೇಳಿ ಬಂದಿದೆ.ಒಟ್ಟಾರೆ ಕ್ಷೇತ್ರದಲ್ಲಿ ಉತ್ತಮ ಆಡಳಿತ ನಡೆಸಲು ಕ್ಷೇತ್ರದ ಉತ್ಸಾಹಿ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಹಾಗೂ ಜಿಪಂ ಸಿಇಓ ತಾಲ್ಲೂಕಿಗೆ ಖಾಯಂ ತಾಪಂ ಇಓ ನಿಯೋಜನೆ ಮಾಡುವಂತೆ ಸಾರ್ವಜನಿಕರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.
ಸಂಪಾದಕ