ಜಾತ್ರೆಗಳು ಮೂಲ ಜನಪದರ ಸಾಂಸ್ಕೃತಿಕ ಪರಂಪರೆ ಬೆಸುಗೆಯಾಗಿದೆ. ಆಧುನಿಕ ಭರಾಟೆಯಲ್ಲಿ ಸಂಸ್ಕೃತಿ ಪರಂಪರೆ ಕಣ್ಮರೆಯಾಗುತ್ತಿದೆ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಮಾರ್ಚ್ 10
ಜಗಳೂರು ಸುದ್ದಿ:’ಬಯಲು ಪ್ರದೇಶದ ಜನರ ನೆಲಮೂಲದ ಕುಲಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯಿಂದ ಬದುಕು ಕಟ್ಟಿಕಂಡವರ ಕಥೆಯ ಇತಿಹಾಸವಿದೆ’ಎಂದು ಸಂಸ್ಕೃತಿ ಚಿಂತಕ,ವಿಮರ್ಶಕ,ಅಂಕಣಕಾರ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ದೊಣೆಹಳ್ಳಿಯ ಜಿಬಿಟಿ ಪಬ್ಲಿಕೇಷನ್ಸ್,ಸಂಗೇನಹಳ್ಳಿ ಶ್ರೀ ನಂದಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಡಾ.ಸಂಗೇನಹಳ್ಳಿ ಅಶೋಕ ಕುಮಾರ್ ರಚಿಸಿರುವ ಜಗಳೂರು ಸೀಮೆಯ ಜಾತ್ರೆಗಳು ಸಾಂಸ್ಕೃತಿಕ ಅವಲೋಕನದ ಪುಸ್ತಕ ಲೋಕರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಲವು ಸಂಸ್ಕೃತಿ,ಸಮುದಾಯಗಳ ಒಕ್ಕೂಟವಾಗಿರುವ ಭಾರತ ದೇಶದಲ್ಲಿ ಪರಂಪರೆಗಳಯ ಕೊಳೆತ ಶವವಾಗಬಾರದು. ಸಮಾಜ ಮತ್ತು ಸಂಸ್ಕೃತಿ ನಿಂತ ನೀರಾಗದೆ ಸದಾ ಹರಿಯುತ್ತಿರುತ್ತದೆ.ಪರಂಪರೆ ಅಧ್ಯಯನ ಮಾಡಿದ ಸಂಶೋಧಕ ಲೇಖಕ ಡಾ.ಅಶೋಕ ಕುಮಾರ್ ಸಂಗೇನಹಳ್ಳಿ ಅವರು ಕೇವಲ ಪರಿಚಯಾತ್ಮಕ ವಿಷಯಕ್ಕೆ ಸೀಮಿತವಾಗದೆ,ವಿರೋಧವಿರುವ ಪರಂಪರೆಯ ಸಂಸ್ಕೃತಿಯನ್ನು ವೈಭವೀಕರಿಸದೆ ಜಾಗರೂಕತೆಯಿಂದ ತಾಳ್ಮೆಯಿಂದ, ಆಳವಾದ ಅಧ್ಯಯನದೊಂದಿಗೆ ಸಮಗ್ರ ವಿಶ್ಲೇಷಣೆಯನ್ನೊಳಗೊಂಡ ಜಗಳೂರು ಸೀಮೆಯ ಜಾತ್ರೆಗಳು ಸಾಂಸ್ಕೃತಿಕ ಅವಲೋಕನದ ಕೃತಿ ರಚನೆ ಜಾನಪದ ವಿನ್ಯಾಸದೊಂದಿಗೆ ಜನ್ಮಭೂಮಿ ಜಗಳೂರಿನಲ್ಲಿಯೇ ಪುಸ್ತಕ ಬಿಡುಗಡೆ ಪ್ರಶಂಸನೀಯ ಸಾರ್ಥಕ ಎಂದರು.
66 ಜಾತ್ರೆಗಳ ಸಮಗ್ರ ಪರಂಪರೆಯನ್ನೊಳಗೊಂಡ ಪುಸ್ತಕ ಅಧ್ಯಯನಕ್ಕೆ ಅಳಿತದ ರೀತಿಯಲ್ಲಿ ಕೃತಿ ರಚಿತವಾಗಿರುವುದು ಪರಂಪರೆ ಗೌರವದ ಸ್ಮೃತಿಗೆ ಸಾಕ್ಷಿಯಾಗಿದೆ.ಕುರುಚಲು ಅರಣ್ಯವಿರುವ ಬೌಗೋಳಿಕ ಕ್ಷೇತ್ರದಲ್ಲಿ ಪಶುಪಾಲನೆ ಕೃಷಿಯಾಗಿ ನಂತರ ಜಾತ್ರೆಗಳಾಗಿ ಮಾರ್ಪಟ್ಟಿವೆ.ಬುಡಕಟ್ಟು,ದಲಿತ ಸಮುದಾಯ ಹೆಚ್ಚಾಗಿರುವ ಜಗಳೂರಿನಲ್ಲಿ ಪ್ರಸಕ್ತವಾಗಿ ವಿದ್ಯಾವಂತರಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ.ಪೂರ್ವಜರಕಾಲದ ಮೌಢ್ಯ ಆಚರಣೆಗಳು ಮರುಕಳಿಸುವುದಿಲ್ಲ.ಮಾಸಿಕ ಆದಾಯವಿರದ ಕೃಷಿ ಆರ್ಥಿಕತೆಯಲ್ಲಿ ಆರ್ಥಿಕ ಸಂಕಷ್ಟದ ರೈತಾಪಿ ವರ್ಗದವರು ತಾಯಿಯ ಒಡವೆ ಅಡವಿಟ್ಟು ಮಕ್ಕಳ ವಿದ್ಯಾಭ್ಯಾಸ ಪೂರೈಸಿ ಉದ್ಯೋಗ ಸೇರಿಕೊಳ್ಳುವುದು ಅಪರೂಪವೇನಲ್ಲ.ಹಾಗೂ ಗ್ರಾಮೀಣ ಪ್ರದೇಶದ ವಿದ್ವಾಂಸರು ರೂಪುಗೊಳ್ಳಲು ತಾಯಿಯ ಪಾತ್ರ ಮಹತ್ವವಾದದ್ದು ಎಂದು ಹೇಳಿದರು.
ದೇಶದಲ್ಲಿ ಸಾಂಸ್ಕೃತಿಕ ಸ್ತಿತ್ಯಂತರವಾಗಿ ನರಬಲಿ, ಕುರಿ,ಕೋಳಿ ಬಲಿ,ಆಚರಣೆಗಳಾಗಿ ಬದಲಾಗಿರಬಹುದು.ಕುರುಬ,ಬೇಡ,ಮಾದಿಗ ಸಮುದಾಯಗಳ ಪಡೆಗಳು ಮುಸ್ಲಿಂ ಆಳ್ವಿಕೆಯಲ್ಲಿ ಮತಾಂತರಗೊಂಡಿರಬಹುದು.ಇಂದಿಗೂ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ಇಂದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮ ನನ್ನ ಸ್ಮೃತಿಪಟಲದಲ್ಲಿ ಮಾಸಿಹೋಗದಂತಿದೆ.ಯಾವ ಜಾನಪದ ಜಾತ್ರೆಗೂ ಕಡಿಮೆಯಿಲ್ಲ.ತನ್ನ ಮೊಮ್ಮಗ ಗುಣಾಢ್ಯನಿಗೆ ಕೃತಿ ಹಸ್ತಾಂತರಿಸಿ ಜ್ಞಾನ ಸಂಪತ್ತನ್ನು ಉಡುಗೊರೆಯಾಗಿ ಕೊಟ್ಟಿದ್ದು.ಮಗಳು ಬುಟ್ಡಿಯಲ್ಲಿ ಪುಸ್ತಕ ತಂದಿದ್ದು ಸಂತಸ ತಂದಿದೆ.ಬರದನಾಡಿನಲ್ಲಿ ಸಾಹಿತ್ಯ ಶ್ರೀಮಂತವಾಗಿದೆ.
ವೈಯಕ್ತಿಕವಾಗಿ 500 ಪುಸ್ತಕಗಳನ್ನು ಖರೀದಿಸಿ ತಾಲೂಕಿನಾದ್ಯಂತ ಹಂಚುವೆ.ರಾಜ್ಯಮಟ್ಟದ ಗ್ರಂಥಾಲಯದಲ್ಲಿ ಅಧ್ಯಯನಕ್ಕೆ ಶಿಫಾರಸ್ಸುಮಾಡುವೆ ಎಂದು ಭರವಸೆ ನೀಡಿದರು.
ಹಾವೇರಿ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಮಾತನಾಡಿ,ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಅಮ್ಮನ ಜಾತ್ರೆಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ.ಜಗಳೂರಿನಲ್ಲಿ ಅಸ್ಪೃಶ್ಯರು ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ.ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಶಿಕ್ಷಣ ಪಡೆದುವೈಚಾರಿಕತೆ ಮೈಗೂಡಿಸಿಕೊಂಡು,ಸಮಾನತೆ,ಸಹೋದರತೆ,ಬ್ರಾತೃತ್ವದೊಂದಿಗೆ ನಾಗರೀಕರಾಗಿ ಬದಲಾಗಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಜೆ.ಎಂ.ಮಲ್ಲಿಕಾರ್ಜುನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಎಂ. ಬಸವಪ್ಪ,ಲೇಖಕರ ಮಾತೃಶ್ರೀ ಕೆ.ಎಸ್.ಹನುಮಕ್ಕ ಎಸ್.ಹನುಮಂತರೆಡ್ಡಿ,ಜಿಬಿಟಿ ಮೋಹನ್ ಕುಮಾರ್,ಶಂಕರಘಟ್ಟ ದ ಜಾನಪದ ವಿದ್ವಾಂಸ ಡಾ.ಬಸವರಾಜ್ ನೆಲ್ಲಿಸರ,ನಿವೃತ್ತ ಪ್ರಾಚಾರ್ಯರರಾದ ಮಲ್ಲಿಕಾರ್ಜುನ್ ಕಲಮರಹಳ್ಳಿ,ಯಾದವರೆಡ್ಡಿ, ಡಾ.ಲೊಕೇಶ್,ಪ್ರಾಂಶುಪಾಲ ದಾದಪೀರ್ ನವಿಲೆಹಾಳ್,ಡಿಸಿ ಮಲ್ಲಿಕಾರ್ಜುನ್,ರವಿಕುಮಾರ್,
ಸಾಹಿತಿಎನ್.ಟಿ.ಎರ್ರಿಸ್ವಾಮಿ,ಎ.ಬಿ.ರಾಮಚಂದ್ರಪ್ಪ,ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ,ಮೋಹನ್ ಕುಮಾರ್,ಉಪನ್ಯಾಸಕ ಎಡಿ ನಾಗಲಿಂಗಪ್ಪ,ವಕೀಲ ಆರ್ .ಓಬಳೇಶ್,ಓಬಣ್ಣ, ಕಸಾಪ ಅಧ್ಯಕ್ಷೆ ಸುಜಾತಮ್ಮ,ಗೀತಮ್ಮ,ಸೇರಿದಂತೆ ಪ್ರಗತಿ ಪರ ಸಂಘಟನೆ ಮುಖಂಡರುಗಳು ಭಾಗವಹಿಸಿದ್ದರು.