ಡಾ ಸಂಗೇನಹಳ್ಳಿ ಅಶೋಕ ಕುಮಾರ್ ಅವರ ಜಗಲೂರು ಸೀಮೆಯ ಜಾತ್ರೆಗಳು ಸಾಂಸ್ಕೃತಿಕ ಅವಲೋಕನ ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಕೃತಿಕಾರರಾದ ಸಂಗೇನಹಳ್ಳಿ ಡಾ ಅಶೋಕ ಕುಮಾರ್ ತಿಳಿಸಿದರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on March 6
ಪಟ್ಟಣದ ಎಂ ಆರ್ ಕಂಪರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದರು ಜಗಲೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಜಾತ್ರೆಗಳು ಉತ್ಸವಗಳು ಜರುಗುತ್ತಿದ್ದು ಜಾತ್ರೆ ಹಬ್ಬಹರಿದಿನಗಳು ಮನುಷ್ಯ ಮನುಷ್ಯನ ನಡುವೆ ಬಾಂದವ್ಯ ಬೆಸೆಯುವ ಜಾತ್ರೆಗಳುನ್ನು ಕುರಿತು ರಚಿಸಿರುವ ಕೃತಿ ನಾಲ‌್ಕನೆ ಕೃತಿಯಾಗಿದೆ ನಮ್ಮ ತಾಯಿಯವರ ಅಮೃತ ಅಸ್ತದಿಂದ ಕೃತಿ ಬಿಡುಗಡೆಗೊಳ್ಳಲಿದೆ
.ಪಟ್ಟಣದ ವಾಲ್ಮೀಕಿ ಭವನದಲ್ಲಿ ದಿನಾಂಕ 9 ರಂದು ಶನಿವಾರ ಸಮಯ 11 ಗಂಟೆಗೆ ಕೃತಿ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.ಕಾರ್ಯಕ್ರಮದಲ್ಲಿ ನಾಡಿನ ಸಂಸ್ಕೃತಿ ಚಿಂತಕರು ಡಾ ಬಂಜೆಗೆರೆ ಜಯಪ್ರಕಾಶ ಹಾಗೂ ನಿವೃತ್ತ ಪ್ರಾಂಶುಪಾಲರಾದ ಎಂ ಬಸಪ್ಪ.ವಿಶ್ವವಿದ್ಯಾಲಯ ಕುಲಪತಿಗಳು ಡಾ.ಟಿ ಎಂ ಭಾಸ್ಕರ್.ಜಾನಪದ ವಿದ್ವಾಂಸರು .ಡಾ ಬಸವರಾಜ ನೆಲ್ಲಿಸರ.ಜಿಬಿಟಿ ಮೊಹನ್ ಸೇರಿದಂತೆ ಕಾರ್ಯಕ್ರಮ ದಲ್ಲಿ ಪಾಲ್ಗೋಳುವರು ಎಂದು ತಿಳಿಸಿದರು.ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಬುದ್ದಿಜೀವಿಗಳು .ಚಿಂತಕರು ಸಾಹಿತಿಗಳು.ಪ್ರಗತಿಪರರು ರೈತರು ಜನಸಾಮಾನ್ಯರ ಬಂಧುಗಳು ತಾಲ್ಲೂಕಿನ ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನ ಯಶಸ್ವಿಗೋಳಿಸುವಂತೆ ಮನವಿ ಮಾಡಿಕೊಂಡರು.
.
ಹಿರಿಯ ಪತ್ರಕರ್ತ ದೋಣಿಹಳ್ಳಿ ಗುರುಮೂರ್ತಿ ಮಾತನಾಡಿ
ಜಗಲೂರು ಸೀಮೆ ಜಾತ್ರೆಗಳ ಸಾಂಸ್ಕೃತಿಕ ಅವಲೋಕನ “ಕೃತಿ ವಿಶ್ಲೇಷಣಾತ್ಮಕವಾದ ಕೃತಿಯಾಗಿದ್ದು
. ಅದ್ರಲ್ಲೂ ಜಗಲೂರಿನ ಬಯಲು ಸೀಮೆ ಜನರ ಸಾಂಸ್ಕೃತಿಕ ಸಂಬಂಧಗಳ ಬೆಸುಗೆಯಾಗಿರುವ ಕೃತಿ ವಿಶೇಷವಾಗಿದೆ ಎಂದರು. ವಿಶಿಷ್ಟ ಕೃತಿ ಬಿಡುಗಡೆ ಯುವಕರಿಗೆ ಸ್ಪೂರ್ತಿಯಾಗಿದೆ. ಎಂದರು ಈ ಸಂದರ್ಭದಲ್ಲಿ ಗೀತಾಂಜಲಿ ಪ್ರಕಾಶಕರಾದ ಜಿಬಿಟಿ ಮೋಹನ್ ಸೇರಿದಂತೆ ಹಾಜರಿದ್ದರು.