Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on march 12

₹3.5 ಕೋಟಿ ವೆಚ್ಚದಲ್ಲಿ ಕೆರೆ ತಡೆಗೋಡೆ ಅಭಿವೃದ್ದಿಗೆ ಪ್ರಸ್ತಾವ: ಶಾಸಕ ಬಿ.ದೇವೇಂದ್ರಪ್ಪ ಭರವಸೆ

ಜಗಳೂರು ಸುದ್ದಿ:₹3.5 ಕೋಟಿ ವೆಚ್ಚದಲ್ಲಿ ಕೆರೆ ತಡೆಗೋಡೆ ಅಭಿವೃದ್ದಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು.ಮೊದಲ ಕಂತಿನಲ್ಲಿ ₹1.5 ಕೋಟಿ ಬಿಡುಗಡೆಯಾಗಿದೆ.ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆವತಿಯಿಂದ ‘ನಮ್ಮ ಊರು ನಮ್ಮ ಕೆರೆ’ಯೋಜನೆಯಡಿ ಅಭಿವೃದ್ದಿಗೊಳಿಸಿದ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನನ್ನ ಸ್ವಗ್ರಾಮದ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ರೈತರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ಮೂಲಕ ಸಹಕರಿಸಿದ್ದಾರೆ.ಇದರ ಫಲವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದವರು ಗೋಕಟ್ಟೆಯನ್ನು ಸುಂದರ ವಿನ್ಯಾಸದ ಕೆರೆ ನಿರ್ಮಾಣಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.

57 ಕೆರೆ ತುಂಬಿಸುವ ಯೋಜನೆಯಡಿ ನೀರು ಭರ್ತಿ:ಪಕ್ಕದ ಗಡಿಮಾಕುಂಟೆ ಕೆರೆಗೆ 57 ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ ಹಾದು ಹೋಗಿದ್ದು.ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಮನವೊಲಿಸಿ ಪೈಪ್ ಮೂಲಕ ಚಿಕ್ಕಮ್ಮನಹಟ್ಟಿ ಕೆರೆಗೆ ನೀರು ಹರಿಸಲಾಗುವುದು.ಕೊಳ ಮತ್ತು ಉದ್ಯಾನವನ ನಿರ್ಮಿಸಲಾಗುವುದು.ಗ್ರಾಮದ ಜನಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.

ಗ್ರಾಮದ ಪವಾಡಪುರುಷ ಪೂಜಾರಜ್ಜನ ನಾಮದಡಿ ದ್ವಾರ ಬಾಗಿಲು ನಿರ್ಮಿಸಲಾಗುವುದು.ಅಲ್ಲದೆ ಶಾಲೆ,ಪಶು ಆಸ್ಪತ್ರೆ ಕಟ್ಟಡ ಸೇರಿದಂತೆ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುವುದು.ಸರಕಾರಿ ಜಾಗದಲ್ಲಿ ಗುಡಿಸಲು,ಕಣಗಳಿಗೆ ಒತ್ತುವರಿ ಮಾಡಿಕೊಂಡ ಗ್ರಾಮಸ್ಥರು ತೆರವುಗೊಳಿಸಿ ಕೈಜೋಡಿಸಬೇಕು.ಮಳೆಗಾಲದಲ್ಲಿ ಗ್ರಾಮದ ಹೊರಹೊಲಯದ ಕಲ್ಲಂಜಿಕಟ್ಟೆ ಯಿಂದ ಹರಿದು ಪೋಲಾಗುತ್ತಿದ್ದ ನೀರನ್ನು ಸಂಗ್ರಹಿಸಿ ಜಗಳೂರು ಕೆರೆಗೆ ಸರಾಗವಾಗಿ ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮದ ಸಂಪತ್ತನ್ನು ಸರ್ವರ ಆಸ್ತಿಯಾಗಿದ್ದು ಕಾಪಾಡಬೇಕು.ತಮ್ಮ ಮಕ್ಕಳ ಶಿಕ್ಷಣ,ದುಡಿಮೆಗೆ ಒತ್ತುಕೊಡಿ,ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಸಾಮರಸ್ಯ,ಶಾಂತಿ ನೆಲೆಸಲು ಬದ್ದನಾಗಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಜಿಲ್ಲಾ ನಿರ್ದೇಶಕ ಡಾ.ಜನಾರ್ಧನ್,ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಡಿ ₹53ಕೋಟಿ ತಾಲೂಕಿನಲ್ಲಿ ಆರ್ಥಿಕ ಉಳಿತಾಯ,₹110 ಕೋಟಿ ಮರುಪಾವತಿ ಹೊರಬಾಕಿ ಮೊತ್ತ ವಿದೆ.268 ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನ,ಆರೋಗ್ಯ ರಕ್ಷಾ ವಿಮೆ,ಶಾಲೆಗಳಿಗೆ ಬೆಂಚ್ ಡೆಸ್ಕ್ ವಿತರಣೆ,ಅಸಮರ್ಥ 68 ಮಂದಿಗೆ ಮಾಶಾಸನ, ₹1‌.10 ಕೋಟಿ ವೆಚ್ಚದಲ್ಲಿ ದೇವಸ್ಥಾನಗಳ ಜೀರ್ಣೊದ್ದಾರ,ನಿರ್ಗತರಿಗೆ ವಾಸ್ಥಲ್ಯ ಯೋಜನೆಯಡಿ ತಲಾ ₹1 ಲಕ್ಷ ವೆಚ್ಚದಲ್ಲಿ 2 ವಸತಿ ಮನೆನಿರ್ಮಾಣ,ಮದ್ಯವರ್ಜನ ಶಿಬಿರ,ಹಾಗೂ ವಿಕಲಚೇತನರಿಗೆ ಸಲಕರಣೆ ವಿತರಣೆ,ನಮ್ಮೂರು ನಮ್ಮ ಕೆರೆ ಯೋಜನೆಯಡಿ 5 ಕೆರೆಗಳ ಅಭಿವೃದ್ದಿಗೆ ಆಯ್ಕೆಮಾಡಲಾಗಿದೆ.ಅದರಲ್ಲಿ ಚಿಕ್ಕಮ್ಮನಹಟ್ಟಿ ಕೆರೆಯನ್ನು ₹12 ಲಕ್ಷ 30 ಸಾವಿರ 502 ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂದರ್ಭದಲ್ಲಿ ಗ್ರಾ.ಪಂ‌ ಅಧ್ಯಕ್ಷೆ ಲಕ್ಷಮ್ಮ ಮಾರಪ್ಪ,ಉಪಾಧ್ಯಕ್ಷೆ ಸುಧಾಮಣಿ ಕಾಟಪ್ಪ,ಸದಸ್ಯರಾದ ಕೆಂಗಮ್ಮ,ಓ.ಮಂಜಣ್ಣ,ಬೊಮ್ಮಕ್ಕ,ಪ್ರಾದೇಶಿಕ ನಿರ್ದೇಶಕಿ ಗೀತಮ್ಮ,ಜ್ಞಾನವಿಕಾಸ ಯೋಜನೆ ನಿರ್ದೇಶಕಿ ರತ್ನ ಪಿ.ಎಸ್‌.ಅರವಿಂದನ್,ನಾಗರಾಜ್,ಪ್ರೇರಣ ಟ್ರಸ್ಟ್ ಫಾದರ್ ಸಿಲ್ವೆಸ್ಟರ್, ಕೆರೆ ಅಭಿವೃದ್ದಿ ಸಮಿತಿಯ ,ರಂಗಪ್ಪ,ಕಾಟಪ್ಪ,ತಿಪ್ಪೇಸ್ವಾಮಿ,ಹನುಮಂತಪ್ಪ,ಪಿಡಿಓ ವಾಸುದೇವ,ಪಲ್ಲಾಗಟ್ಟೆ ಶೇಖರಪ್ಪ,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ‌ ನಿರ್ದೇಶಕ ಬಿ.ಮಹೇಶ್ವರಪ್ಪ,ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!