ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್ ತಂತಿಯನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಗ್ರಾಮದ ಮಾಜಿ ಸೈನಿಕ ಎಸ್.ಟಿ. ಹನುಮಂತಪ್ಪ (50) ಮೃತಪಟ್ಟಿದ್ದಾರೆ. ತೋಟಕ್ಕೆ ನೀರು ಬಿಡಲು ಹೋಗಿದ್ದಾಗ ಈ ಘಟನೆ ಜರುಗಿದೆ. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಸ್ವಗ್ರಾಮ ತರಗನಹಳ್ಳಿಯ ರುದ್ರಭೂಮಿಯಲ್ಲಿಂದು ಅಂತ್ಯಸಂಸ್ಕಾರ ನೆರೆವೇರಲಿದೆ. ಸ್.ಟಿ. ಹನುಮಂತಪ್ಪ ಅವರು, ಭಾರತೀಯ ಅರೆಸೇನಾ ಪಡೆಯಾದ ಸಿಆರ್‌ಪಿಎಫ್ ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.