filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ದೊಣೆಹಳ್ಳಿ:ಮಾ.7 ರಿಂದ ಮೂರು ದಿನಗಳ ಕಾಲ ದಾಸೋಹ ಸಂಸ್ಕೃತಿ ಉತ್ಸವ ದಾಸೋಹ‌ ಮಠದ ಸಂಚಾಲಕರು :ದೊಣೆಹಳ್ಳಿ ಗುರುಮೂರ್ತಿ.

ಜಗಳೂರು ಸುದ್ದಿ,
ಜಗಳೂರು,ಮಾ.4:ಮಾ.7 ರಿಂದ ಮಾ.9 ರವರೆಗೆ
ದೊಣೆಹಳ್ಳಿ ಶರಣಬಸವೇಶ್ವರ ದಾಸೋಹ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವ ಜರುಗಲಿದೆ ಎಂದು ಮಠದ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಂದಿನಿಂದ ಒಲೆ ಪೂಜೆಯ ಮೂಲಕ ಆರಂಭವಾದ
5‌ ದಿನಗಳ ದಾಸೋಹ ಸಂಸ್ಕೃತಿ ಉತ್ಸವದಲ್ಲಿ.ಮೂರು ದಿನಗಳ ಕಾಲ ಸಾಮಾಜಿಕ ಸಮಾವೇಶಗಳು ನಡೆಯಲಿದ್ದು.ವೇದಿಕೆಯಲ್ಲಿ ನಾಡಿನ ಪೂಜ್ಯ ವಿಚಾರಶೀಲ ಮಠಾಧೀಶರು,ವಿಶ್ರಾಂತ ನ್ಯಾಯಮೂರ್ತಿಗಳು,ಸಂವಿಧಾನ ತಜ್ಞರು,ಕಾನೂನು ಪಂಡಿತರು,ಹಿರಿಯ ಪತ್ರಕರ್ತರು,ಜನಪ್ರತಿ ನಿಧಿಗಳು ಭಾಗವಹಿಸಲಿದ್ದಾರೆ.ಚಿತ್ರದುರ್ಗ,ದಾವಣಗೆರೆ,ಬಳ್ಳಾರಿ,ವಿಜಯನಗರ,ನಾಲ್ಕು ಜಿಲ್ಲೆ‌ಗಳಾದ್ಯಂತ ದಟ್ಟ ಪ್ರಭುತ್ವ ಹೊಂದಿದ ಮಠದ ಭಕ್ತಸಮೂಹ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಮಾ.7 ರಂದು ಶರಣತತ್ವ ಕಾರ್ಯಕ್ರಮದಲ್ಲಿ ಸರ್ಪಭೂಷಣ ಶಿವಯೋಗಿ ಮಠದ ಶ್ರೀ ಮಲ್ಲಿಕಾರ್ಜುನ ದೇವರು,ಸಂಡೂರು ಮಠದ ಪ್ರಭುಸ್ವಾಮಿ,ಚಿತ್ರದುರ್ಗ ಮಠದ ಬಸವಕುಮಾರ ಸ್ವಾಮೀಜಿ ಸಾನಿಧ್ಯದಲ್ಲಿ ಉತ್ಸವ ಉದ್ಘಾಟನೆ ಶಾಸಕ ಬಿ.ದೇವೇಂದ್ರಪ್ಪ ಅವರು ಅಧ್ಯಕ್ಷತೆಯಲ್ಲಿ,ಬಸವಸಮಿತಿ ಅಧ್ಯಕ್ಷ ಶರಣ ಅರವಿಂದ ಜತ್ತಿ ಅವರು ಉದ್ಘಾಟಿಸಲಿದ್ದಾರೆ.ಡಾ.ಜೆ.ಎಸ್.ಪಾಟೀಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ .ಕೂಡ್ಲಿಗಿ ಶಾಸಕ ಡಾ.ಎನ್ ಟಿ ಶ್ರೀನಿವಾಸ್ ಅವರು ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಾ.8 ರಂದು ಚಿತ್ರದುರ್ಗ ಗುರುಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜನಮಾಧ್ಯಮ ಚಿಂತನಾ ಸಮಾವೇಶದಲ್ಲಿ ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಉದ್ಘಾಟಿಸಲಿದ್ದಾರೆ.ಚಿತ್ರದುರ್ಗದ ಮಾದಾರ ಚೆನ್ನಯ್ಯ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಕೊಟ್ಟೂರು ಚಾನುಕೋಟಿ ಮಠದ ಡಾ.ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.

ಮಾ.9‌ ರಂದು ಸಂವಿಧಾನ ಸಂರಕ್ಷಣಾ ಸಮಾವೇಶ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಮಠದ ಪಂಡಿತ ರಾಧ್ಯ ಶಿವಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಹೈಕೋರ್ಟ ನ ನಿವೃತ್ತ ನ್ಯಾಯಾಧೀಶರಾದ ಡಾ.ಎಚ್.ಎಸ್ ನಾಗಮೋಹನ್ ದಾಸ್,ಹೆಚ್.ಬಿಲ್ಲಪ್ಪ ಅವರು ಭಾಗವಹಿಸಲಿದ್ದಾರೆ.ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಿದರು.

ಕಾನಾಮಡುಗು ದಾಸೋಹ ಮಠದ ಶರಣಾರ್ಯರು ಮಾತನಾಡಿ,ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ರೈತರ ,ಬಡವರ ಅನುಕೂಲಕ್ಕಾಗಿ ಕ ದಾಸೋಹ ಉತ್ಸವ ಸಮಾವೇಶಗಳು ನಡೆಯಲಿವೆ.ಉಚಿತ ನೇತ್ರ ತಪಾಸಣಾ‌ ಕನ್ನಡ ವಿತರಣೆ, ನಡೆಸಲಾಗುವುದು.ಬೆಂಗಳೂರು ರೋಟರಿ ಸಂಸ್ಥೆಯ ಸಹಯೋಗದಲ್ಲಿ ನಡೆಸಲಾಗುವುದು.ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ‌ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಣೆಹಳ್ಳಿ ಬಸವರಾಜಪ್ಪ,ಎಐಟಿಯುಸಿ ಮುಖಂಡ
ಗೊಲ್ಲರಹಟ್ಟಿ ತಿಪ್ಪೇಸ್ವಾಮಿ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!