ದಿಢೀರ್ ನೆ ಕಾರ್ಮಿಕರ ವಜಾ‌:ವಿಂಡ್ ಫ್ಯಾನ್ ವಿರುದ್ದ ಪ್ರತಿಭಟನೆ.

ಜಗಳೂರು :ತಾಲ್ಲೂಕಿನ ಮಠದದ್ಯಾಮನಹಳ್ಳಿ ಬಳಿ ವಜಾಗೊಳಿಸಿರುವ ಕಾರ್ಮಿಕರ ಮರುಸೇರ್ಪಡೆಗೊಳಿಸಲು ರಿನ್ಯಿವ್ಯೂ ಪವನ ವಿದ್ಯುತ್ ಕಂಪನಿ ವಿರುದ್ದ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಅಹೋರಾತ್ರಿ ಧರಣಿ ನಡೆಸಲಾಯಿತು.

ಕಂಪನಿಯಲ್ಲಿ 42 ಜನ ಕಾರ್ಮಿಕರು ಕೆಲಸಮಾಡುತ್ತಿದ್ದು ದಿಢೀರ್ ನೆ 36 ಜನ ಕಾರ್ಮಿಕರನ್ನು ವಜಾಗೊಳಿಸಲಾಗುತ್ತಿದೆ.ಉಳಿದ 10‌ಜನ ಕಾರ್ಮಿಕರಿಗೆ ನೋಟೀಸ್ ನೀಡಲಾಗಿದೆ.ಫೆ.25 ವರೆಗೆ ಗಡುವು ನೀಡಲಾಗಿದೆ.ಕಂಪನಿಯಲ್ಲಿ ಕಾರ್ಮಿಕರಿಗೆ ಯಾವುದೇ ಭದ್ರತೆಯಿಲ್ಲದೆ ಬೇಕಾಬಿಟ್ಟಿ ನಡೆಸಿಕೊಳ್ಳುತ್ತಿದ್ದಾರೆ.ಅಲ್ಲದೆ ಕಾರ್ಮಿಕ ಕಾನೂನು ಬಾಹಿರವಾಗಿ ನಡೆಸಿಕೊಳ್ಳುತ್ತಿರುವುದು ಖಂಡನೀಯ ಕೂಡಲೇ ವಜಾಗೊಳಿಸಿರುವ ಕಾರ್ಮಿಕರನ್ನು ಮರುಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಂಡ್ ಫ್ಯಾನ ಕಾರ್ಮಿಕ ಸಂಘಟನೆಯ ರಾಜ್ಯ ಮುಖಂಡ ತಿಪ್ಪೇಸ್ವಾಮಿ,ರಾಜ್ಯ ಸಮಿತಿ ಸದಸ್ಯರಾದ ಬೀರಲಿಂಗಪ್ಪ,ಶಿವಾಜಿ ರಾವ್,ಲೋಕೇಶ್,ಜಿಲ್ಲಾ ಮುಖಂಡರಾದ ಇಂದಿರಾ,ಕಿರಣ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!