By shukradeshe news
editor m.rajappa vyasgondanahalli
Kannada | online news portal |Kannada news online July 15_7_2026
ಸುದ್ದಿ ಜಗಳೂರು
ಜನಜಾನುವಾರುಗಳಿಗೆ ಕುಡಿಯುವ ನೀರು ಮೇವು ಬರ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಜ್ಜಾಗುವಂತೆ ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು
ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ
ಕ್ಷೇತ್ರದ ಶಾಸಕರ ಅದ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿತು.
ಪ್ರಕೃತಿ ವಿಕೋಪ ನಿರ್ವಹಣೆ ನಿರ್ವಹಿಸಲು ಅಗತ್ಯವಿರುವ ಕೃಷಿ ಇಲಾಖೆ ಅಧಿಕಾರಿಗಳು ವಾಡಿಕೆಗಿಂತ ಕಡಿಮೆ ಮಳೆ ವರದಿ ರೈತರ ಜಮಿನುಗಳಲ್ಲಿ ಬೆಳೆ ವರದಿ.ಸೇರಿದಂತೆ ಜನಜಾನುವಾರಗಳಿಗೆ ಕುಡಿಯುವ ನೀರು ವಸ್ತು ಸ್ಥಿತಿ ವರದಿ ತಯಾರಿಸುವ ಮೂಲಕ ಬರ ಪರಿಸ್ಥಿತಿಯನ್ನ ಎದುರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ತಾಲ್ಲೂಕು ಅಧಿಕಾರಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಸೂಚನೆ ನೀಡಿದರು .
ರೈತರು ಸಾರ್ವಜನಿಕರು ಅತಂಕಪಡುವ ಅಗತ್ಯವಿಲ್ಲ ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಡಿ .ಕೆ ಶಿವಕುಮಾರ್ ರವರು ಶೀಘ್ರವೆ ಸಚಿವ ಸಂಪುಟ ಸಭೆ ಏರ್ಪಡಿಸಲಿದ್ದು
ಬರ ನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ಮಳೆ ಬೆಳೆ ಜನಜಾನುವಾರುಗಳಿಗೆ ಅಗತ್ಯ ಮೇವಿನ ಲಭ್ಯತೆ ಕುಡಿಯುವ ನೀರಿನ ಲಭ್ಯತೆ ಮೇರೆಗೆ ಜಿಲ್ಲಾಧಿಕಾರಿಗಳ ಮೂಲಕ ವರದಿ ಆಧಾರದ ಮೇಲೆ ಬರಪೀಡಿತ ಪ್ರದೇಶವೆಂದು ಘೋಷಿಸಲು ಅಗತ್ಯ ಪೂರಕ ಮಾಹಿತಿ ಕಲೆ ಹಾಕುವ ಮೂಲಕ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಸಭೆ ನಡೆಸಲಿದ್ದಾರೆ .
ಬರ ಪರಿಸ್ಥಿತಿಯಲ್ಲಿ ರೈತರು ಮಳೆ ಇಲ್ಲದೆ ಬಿತ್ತನೆಗೆ ಮುಂದಾಗಬಾರದು .ಸಾಲ ಸೂಲ ಮಾಡಿ ರೈತರು ಬಿತ್ತನೆ ಬೀಜ ಗೊಬ್ಬರಕ್ಕೆ ನಷ್ಠವಾಗಲಿದೆ ಮಳೆ ಲಭ್ಯತೆ ನೋಡಿಕೊಂಡು ಬಿತ್ತನೆ ಮಾಡುವಂತೆ ಸಲಹೇ ನೀಡಿದರು
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ
ರೈತರು ಮಳೆಯಿಲ್ಲದೆ ಅಡಿಕೆ ಸಸಿ ನಡೆವುದರಿಂದ ಆರ್ಥಿಕ ನಷ್ಟ ಅನುಭವಿಸಿದಂತಾಗಲಿದೆ ಸುಮಾರು ಎರಡು ಮೂರು ತಿಂಗಳು ಸುಧಾರಿಸಿ ಸಸಿ ನಾಟಿ ಮಾಡಬೇಕು ಈಗಾಗಲೇ ಮಳೆ ಕೊರತೆ ಎದ್ದು ಕಾಣುತ್ತಿದೆ .ತಾಲ್ಲೂಕು ಆಡಳಿತ ತಮ್ಮ ಸಮಸ್ಯೆಗಳಿಗೆ ಸದಾ ಸ್ವಂದಿಸಿ ಕೆಲಸ ಮಾಡಲಿದೆ
ರೈತರು ಅವಸರದಿಂದ ಬಿತ್ತನೆ ಮಾಡಿ ಕೈ ಸುಟ್ಟುಕೊಳ್ಳಬಾರದು ಮಳೆ ಬಿದ್ದಾಗ ಬಿತ್ತನೆ ಮಾಡುವುದು ಸೂಕ್ತ ಎಂದರು
ಈ ಸಂದರ್ಭದಲ್ಲಿ ಪಶುವೈದ್ಯಾ ಇಲಾಖೆ ಅಧಿಕಾರಿ ಲಿಂಗರಾಜ್ ಮಾತನಾಡಿ
ಬರ ಹಿನ್ನಲೆಯಲ್ಲಿ ಜಾನುವಾರುಗಳಿಗೆ ರೋಗ ಭಾದೆ ತಡೆಗಟ್ಟುವ ಲಸಿಕೆಗೆ ಸಿದ್ದತೆ ಮಾಡಿಕೊಳ್ಳಲಾಗುವುದು ಮೇವಿನ ಕೊರತೆ ಲಭ್ಯತೆ ಅಂದಾಜಿಸುವ ವರದಿ ತಯಾರಿಸಲಾಗುವುದು ಎಂದರು.
ಕೃಷಿ ಇಲಾಖೆ ಅಧಿಕಾರಿ ಶ್ವೇತಾ ವರದಿ ನೀಡಿ ಈ ಬಾರಿ ಅತಿ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನಲೆಯಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ
.ಬರ ಹಿನ್ನಲೆಯಲ್ಲಿ ಕ್ಷೇತ್ರದ ವಸ್ತುಸ್ಥಿತಿ ವರದಿ ನೀಡಲಾಗುವುದು ಬೆಳೆ ವಿಮೆ ಸೇರಿದಂತೆ ರೈತರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ಕೆಂಚಪ್ಪ .ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿ ಸಾಧಿಕವುಲ್. ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಶಿವಕುಮಾರ್ .ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜುರಿದ್ದರು.
