ಜಗಳೂರು:-

ಚಿತ್ರದುರ್ಗದ ಬೋವಿ ಗುರುಪೀಠದ ಆವರಣದಲ್ಲಿ ಜುಲೈ 19ರಂದು ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಗಳ 17ನೇ ಪಟ್ಟಾಭಿಷೇಕ ಮಹೋತ್ಸವ,

28ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ಜನ್ಮ ದಿನೋತ್ಸವ ಹಿನ್ನೆಲೆ ರಾಷ್ಟ್ರೀಯ ಭೋವಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಬೋವಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಬೋವಿ ಸಂಘದ ಜಿಲ್ಲಾಧ್ಯಕ್ಷ ಡಾ. ಎಚ್.‌ ಜಯ್ಯಣ್ಣ ತಿಳಿಸಿದರು.


ಪಟ್ಟಣದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಶ್ರೀಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತ ಬಂದಿದೆ. ಆದರೆ ಈ ಬಾರಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ಸಮುದಾಯ ತೀರ್ಮಾನಿಸಿದೆ. ಬೋವಿ ಜನೋತ್ಸವ ಕೇವಲ ಒಂದು ಆಚರಣೆಯಷ್ಟೆ ಆಗಿರದೆ, ಸಮಾಜದ ಏಳಿಗೆ ಹಾಗೂ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹತ್ತಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ.

ರಾಜ್ಯದಲ್ಲಿ ಬೋವಿ ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿದ್ದರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ತುಂಬ ಅಭಿವೃದ್ದಿ ಕಾಣಬೇಕಾಗಿದೆ. ನಮ್ಮ ಸಮುದಾಯ ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ನಮ್ಮವರಿಗೆ ಹೆಚ್ಚಿನ ಪ್ರೋತ್ಸಹ, ಅವಕಾಶಗಳನ್ನು ಒದಗಿಸಿಕೊಡಬೇಕು ಎಂದರು.


ಬೋವಿ ಸಂಘದ ತಾಲೂಕಾಧ್ಯಕ್ಷ ವೈ. ಅರ್ಜುನ್‌ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿಎಚ್‌ಡಿ ಪದವಿಧರರಿಗೆ, ಎಂಬಿಬಿಎಸ್‌ ಮುಗಿಸಿದ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನಿಸಲಾಗುವುದು. ರಕ್ತದಾನ ಶಿಬಿರ ಹಾಗೂ ಸಿದ್ದರಾಮೇಶ್ವರರ ಕುರಿತು ವಿಶೇಷ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದ ನಾಯಕರಿಗೆ, ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಿದ ಸಾಧಕರಿಗೆ ಸನ್ಮಾನ. ಹಸಿರೋತ್ಸವದ ಮೂಲಕ ನೂರಾರು ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಜನತೆಗಾಗಿ ವಧು-ವರರ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಸಿ.ಎಂ ಡಿ.ಕೆ ಶಿವಕುಮಾರ್‌, ಡಿಸಿಂಎ ಡಾ.ಜಿ ಪರಮೇಶ್ವರ್‌ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಚಿವ ಅರವಿಂದ್‌ ಲಿಂಬಾವಳಿ ವಹಿಸಲಿದ್ದಾರೆ. ಪಾವಗಡ ಶಾಸಕ ವಿ.ವೆಂಕಟೇಶ್‌, ಪುಲಕೇಶಿ ನಗರದ ಶಾಸಕ ಎ.ಸಿ ಶ್ರೀನಿವಾಸ್‌, ಮಾಜಿ ಸಚಿವ ಶಿವರಾಜ್‌ ತಂಗಡಗಿ, ಶಾಸಕ ಎಂ. ಚಂದ್ರಪ್ಪ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದಿಶಾ ಕಮಿಟಿ ಸದಸ್ಯ ಡಾ. ರೇವಣಸಿದ್ದಪ್ಪ, ಬೋವಿ ಸಂಘದ ಕಾರ್ಯದರ್ಶಿ ಎಂ.ವಿ ಶ್ರೀನಿವಾಸ್‌, ಉಪಾಧ್ಯಕ್ಷ ಆರ್.ವಿ ಗೋವಿಂದ್‌ರಾಜ್‌, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಬೆಂಚಿಕಟ್ಟೆ ಗಂಗಾಧರ್‌, ರಾಮಾಂಜನೇಯ, ಕೆ.ವಿ.ಬಸವರಾಜ,ವೆಂಕಟೇಶ, ವೀರೇಶ್‌ ಬಿದರಕೆರೆ, ಮಾರುತಿ, ಪರಶುರಾಮ, ರಾಮಣ್ಣ, ರಮೇಶ್‌, ಸತೀಶ್‌ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

You missed

error: Content is protected !!