Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on
ಜಗಳೂರು:
ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯವು ಸಮಾಜಶಾಸ್ತ್ರ ವಿಭಾಗದ ಸಂಶೋಧಕ ಅರುಣ್ ಕುಮಾರ್ ಕೆ. ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ಪ್ರದಾನ ಮಾಡಿ ಅಧಿಸೂಚನೆ ಹೊರಡಿಸಿದೆ.
ಕುಲಪತಿಗಳ ಅನುಮೋದನೆಯ ಮೇರೆಗೆ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗವು ಜುಲೈ 1, ರಂದು ಅಧಿಸೂಚನೆ ಪ್ರಕಟಿಸಿದ್ದು, ಅರುಣ್ ಕುಮಾರ್ ಅವರು ಸಲ್ಲಿಸಿದ್ದ “ಕರ್ನಾಟಕದಲ್ಲಿ ಗಣಿಗಾರಿಕೆಯು ಸಮಾಜದ ಮೇಲೆ ಬೀರುವ ಪರಿಣಾಮ” (Impact of Mining on Society in Karnataka) ಎಂಬ ಸಂಶೋಧನಾ ಪ್ರಬಂಧವನ್ನು ಅಂಗೀಕರಿಸಲಾಗಿದೆ.
ಅರುಣ್ ಕುಮಾರ್ ಅವರು 2019ರ ಡಿಸೆಂಬರ್ 26ರಂದು ಪಿಎಚ್.ಡಿ.ಗೆ ನೋಂದಣಿ ಮಾಡಿಕೊಂಡಿದ್ದರು. ಸಮಾಜಶಾಸ್ತ್ರ ವಿಭಾಗದ ಡಾ. ನುಸ್ರತ್ ಫಾತಿಮಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರ್ಣಗೊಳಿಸಿದ್ದಾರೆ.
ಅರುಣ್ ಕುಮಾರ್ ಅವರ ಈ ಸಾಧನೆಗೆ ವಿಶ್ವವಿದ್ಯಾಲಯದ ಅಧ್ಯಾಪಕರು, ಸಂಶೋಧಕರು, ಜಗಳೂರಿನ ಶ್ರೀ ರಾಜರಾಜೇಶ್ವರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲ ಡಾ.ಶಿವಾಜಿ ರಾ.ಕಟ್ಟಿ ಸೇರಿದಂತೆ ಕುಟುಂಬ ವರ್ಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
