ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಂಗಾರಕ್ಕನಗುಡ್ಡ ದ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಜೆ ಎಸ್ ಡಬ್ಲ್ಯೂ ವಿಂಡ್ ಫ್ಯಾನ್ ಖಾರ್ಕನೆ ಯಲ್ಲಿ ಸ್ಥಳೀಯ ನಿರುದ್ಯೋಗ ವಿದ್ಯಾವಂತರಿಗೆ ಉದ್ಯೋಗ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಜಗಳೂರು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಲ್ಲಿನ ಜೆ ಎಸ್ ಡಬ್ಲ್ಯೂ ಸಂಸ್ಥೆ ಸಂಪನ್ಮೂಲ ಅಧಿಕಾರಿ ವಾದಿರಾಜ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ವೇಳೆ ಕರವೇ ತಾಲ್ಲೂಕು ಅಧ್ಯಕ್ಷ ಎಂ. ವೈ ಮಹಾಂತೇಶ್ ಮಾತನಾಡಿ ಜಗಳೂರು ತಾಲ್ಲೂಕು ಬರಪೀಡಿ ತಾಲೂಕು ಆಗಿದ್ದು ಅನೇಕ ನಿರುದ್ಯೋಗಿ ಯುವಕ ಯುವತಿಯರು ಉದ್ಯೋಗವಿಲ್ಲದೆ ಮಹಾನಗರಗಳತ್ತ ಗುಳೆ ಹೊಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತ ಬರ ಪರಿಸ್ಥಿತಿ ಸಂದರ್ಭದಲ್ಲಿ ತಾಲ್ಲೂಕಿನ ಸಮೀಪವೆ ಖಾರ್ಕಾನೆ ನಿರ್ಮಾಣವಾಗುತ್ತಿರುವ ಉತ್ತಮ ಬೆಳವಣಿಗೆಯಾಗಿದೆ ಆದ್ದರಿಂದ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು‌

ಈ ಸಂದರ್ಭದಲ್ಲಿ ವಕೀಲ ಆರ್ ಓಬಳೇಶ್, ಪ್ರಗತಿ ಪರ ಹೋರಾಟಗಾರ ಸತ್ಯಮೂರ್ತಿ, ಕರವೇ ಗೌರವಧ್ಯಕ್ಷರಾದ.ಮ ಸುರೇಶ್ ಸಂಗೊಳ್ಳಿ, ಮುನ್ನ , ಐಟಿ ಘಟಕದ ಅಧ್ಯಕ್ಷ ಎಂ. ಡಿ ಅಬ್ದುಲ್ ರಖೀಬ್ , ಕಸಬ.ಹೋಬಳಿ ಅಧ್ಯಕ್ಷರಾದ ಸುಭೇಂದ್ರ , ತಾಲ್ಲೂಕು ರೈತ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ , ಪದಾಧಿಕಾರಿಗಳಾದ‌ ಮಂಜುಳಾ, ಚಂಪಾವತಿ , ಶಿವಣ್ಣ ಬಂಗಾರಿಗುಡ್ಡ , ವಂಕಟೇಶ್ ,‌ ಗಣೇಶ್ , ಲಕ್ಷ್ಮಿ ಮಹಾಲಕ್ಷ್ಮಿ , ರೂಪ , ಆಂಜನೇಯ , ಮಲ್ಲಿಕಾರ್ಜುನ ಭರಮಸಮುದ್ರ. ಸಂಜು , ಸೇರಿದಂತೆ ಕರವೇ ಇತರೆ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!