ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಿತ್ತಿರುವುದು ಸಂತೋಷ. ಇಂತಹದೊಂದು ಸತ್ಪರಂಪರೆಗೆ ದಾವಣಗೆರೆ ಜಿಲ್ಲೆ ಮಾದರಿಯಾಗುತ್ತಿದೆ. ಇದಕ್ಕೆಲ್ಲಾ ಸ್ಫೂರ್ತಿ ಮತ್ತು ಪ್ರೇರಣೆ ಕುವೆಂಪು ಅವರು. ಧಾರವಾಡದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ಕುವೆಂಪು ಅವರದು. ಆಗ ಕುವೆಂಪು ಮೆರವಣಿಗೆಗೆ ಒಪ್ಪಿರಲಿಲ್ಲ. ಅದರಂತೆ ೧೯೯೨ರಲ್ಲಿ ದಾವಣಗೆರೆ ನಗರದಲ್ಲಿ ನಡೆದ ೬೧ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ ಎಸ್ ಎಸ್ ಕೂಡ ತಮ್ಮ ಗುರುಗಳಾದ ಕುವೆಂಪು ಅವರ ಮಾದರಿಯನ್ನು ಅನುಸರಿಸಿದ್ದರು. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಡಾ. ಲೋಕೇಶ ಒಡೆಯರ್, ಡಾ. ಲೋಕೇಶ ಅಗಸನಕಟ್ಟೆ, ಆರ್ ಜಿ ಹಳ್ಳಿ ನಾಗರಾಜ, ಎನ್ ಟಿ ಯರ್ರಿಸ್ವಾಮಿ ಮುಂತಾದವರೆಲ್ಲರೂ ಮೆರವಣಿಗೆಯನ್ನು ಒಪ್ಪದೆ ಕಾಲ್ನಡಿಗೆಯಲ್ಲಿ ನಡೆದು ಮಾದರಿಯಾಗಿದ್ದಾರೆ. ಈಗ ಬಿ ಎನ್ ಮಲ್ಲೇಶ್ ಸಹ ತುಳಿದ ಮಾರ್ಗ ಅನುಕರಣೆಯ.
-ಸಮ್ಮೇಳನದ