ಶಿಕ್ಷಕರು ತಮ್ಮ ಆದ್ಯ ಕರ್ತವ್ಯವನ್ನ ಎಂದಿಗೂ ಮರೆಯಬಾರದು ಶಿಕ್ಷಕರು ಕಲಿಸುವ ಅಕ್ಷರ ಜ್ಞಾನ ಬಲದಿಂದ ದೇಶದ ಭವಿಷ್ಯವೆ ಅಡಗಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಹೇಳಿದರು
ಜಗಳೂರು ಪಟ್ಟಣದ ಗುರುಭವನದಲ್ಲಿ ಸೋಮವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಏರ್ಪಡಿಸಲಾಗಿದ್ದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ಉದ್ಗಾಟನೆ ಮಾಡಿ ನಂತರ ಶಿಕ್ಷಕರುನ್ನು ಕುರಿತು ಮಾತನಾಡಿದರು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬಂತೆ ಕಲಿಯುವ ಅಂತದಲ್ಲಿ ವಿಧ್ಯಾರ್ಥಿಗಳು ಗುರುಭಕ್ತರಾಗಿ ಶಿಕ್ಷಣ ಪಡೆಯಬೇಕು .ಶಿಕ್ಷಕರು ನಮ್ಮ ಸರ್ಕಾರ ನೀಡುವ ಸೌಲಭ್ಯಗಳಾದ ಬಿಸಿಯೂಟ.ವಿಧ್ಯಾರ್ಥಿ ವೇತನ .ಪುಸ್ತಕ ಬಟ್ಟೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಜೊತೆಗೆ ನಂಬಿದ. ಮಕ್ಕಳ ಫಠ್ಯಚಟುವಟಿಕೆಗಳಲ್ಲಿ ಲೋಪವಾಗದಂತೆ ತಮ್ಮ ಕರ್ತವ್ಯ ವನ್ನ ನಿರ್ವಹಿಸುವಂತೆ ಸಲಹೇ ನೀಡಿದರು.
ಮಕ್ಕಳು ದೇವರು ಸಮಾನ ನಮ್ಮ ಸರ್ಕಾರ ಸಮಾನವಾದ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಬೇಕು ಎಂಬ ಹಿತದೃಷ್ಟಿಯಿಂದ ಹಲವು ಸೌಲಭ್ಯ ನೀಡಿದೆ . ಶಿಕ್ಷಕರು ಸೃಷ್ಠಿ ಕರ್ತರು ನೀವು ಕಟೆಯುವ ನಿರ್ಧಾರದ ಮೇಲೆ ಕಲ್ಲು ಶಿಲೆಯಾಗುವುದು .ಒಬ್ಬ ಮೂಗನನ್ನ ವಾಚಾಳಿಯನ್ನಾಗಿ ಮಾಡುವ ಶಕ್ತಿ ನಿಮ್ಮಲ್ಲಿದೆ ನಿಷ್ಠೆಯಿಂದ ಸೇವೆ ಮಾಡಿ ಎಂದು ಶಿಕ್ಷಕರಿಗೆ ಶಾಸಕರು ಕಿವಿ ಮಾತು ಹೇಳಿದರು. ನಿಮ್ಮ ಸಮಸ್ಯೆಗಳಿಗೆ ಸದಾ ಸ್ವಂದಿಸುವ ಸೇವಕ ನಾನು ಬರಿ ಶಾಸಕನಲ್ಲ ನಿಮ್ಮ ಸೇವಕನಾಗಿ ಕ್ಷೇತ್ರಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತೆನೆ.ಈ ಬಾರಿ ಬರುವ ಸೆಪ್ಟೆಂಬರ್ 5 ರಂದು ವಿನೂತನ ಶಿಕ್ಷಕರ. ದಿನಾಚರಣೆಯನ್ನು ಒಗ್ಗಟ್ಟಿನಿಂದ ಆಚರಿಸೊಣ ಶಿಕ್ಷಕರು ಗೈರಾಗದಂತೆ ಭಾಗಿಯಾಗಿ ಶಿಕ್ಷಕರ ಮಹತ್ವ ತಿಳಿಯುವಂತೆ ಸಲಹೇ ನೀಡಿದರು. ವೇದಿಕೆಯಲ್ಲಿ ಸನ್ಮಾನ ಸ್ವಿಕರಿಸಿದ ನಿವೃತ್ತಿ ಹೊಂದುವ ಶಿಕ್ಷಕರು ತಮ್ಮ ನಿವೃತ್ತಿ ಜೀವನದಲ್ಲಿ ತಮ್ಮ ಆರೋಗ್ಯ
ಸುಖಕರವಾಗಿರಲಿ ಎಂದು ಹಾರೈಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿ
ನಿವೃತ್ತಿಯಾಗುವ ಶಿಕ್ಷಕರ ಆರೋಗ್ಯ ಬಾಗ್ಯಶಾಲಿಗಳಾಗಿರಲಿ ಎಂದು ಹಾರೈಸಿದರು.
ಜಗಳೂರು ತಾಲ್ಲೂಕಿನಲ್ಲಿ 1200 ಶಿಕ್ಷಕರಿದ್ದು ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲ ನದಿ ಮೂಲವಿಲ್ಲ ಶಿಕ್ಷಣ ಒಂದೆ ನಮಗೆ ಆಸ್ತಿಯಾಗಿದೆ ಆದ್ದರಿಂದ ತಾಲ್ಲೂಕಿನ ಬಹುತೇಕ ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿದ್ದು ಶಾಸಕರು ಸಂಬಂಧಿಸಿದ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಕನಿಷ್ಠ ಒಂದು ವರ್ಷಕ್ಕೆ 25 ಶಾಲಾ ಕೊಠಡಿಗಳನ್ನಾದರು ನಿರ್ಮಿಸಲು ಅನುದಾನ ತಂದು ಉತ್ತಮ ಶಾಲಾ ಕೋಠಡಿಗಳುನ್ನು ನಿರ್ಮಿಸಲು ಮುಂದಾಗುವಂತೆ ಸಲಹೇ ನೀಡಿದರು. ಶಾಲಾ ಕೊಠಡಿಗಳ ಬಗ್ಗೆ ಶಾಸಕರು ಗಮನಹರಿಸಲಿ ನಿಮ್ಮ ಜೊತೆ ಸದಾ ನಾವುದ್ದೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಿಕ್ಷಕರ ಸಮಸ್ಯೆಗಳಿದ್ದರೆ ನಮ್ಮ ಜೊತೆ ಹಂಚಿಕೊಳ್ಳಿ.ಶಿಕ್ಷಕರು 175 ಹಳ್ಳಿಗಳ ಆಕಾಶವಾಣಿಯಿದ್ದಂತೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
.
ಪ್ರಾಸ್ತಾವಿಕವಾಗಿ ಬಿ ಆರ್ ಸಿ ಹಾಲಪ್ಪ ಮಾತನಾಡಿದರು ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ದಾಖಲಾತಿ ಅಂತ ಮುಗಿದಿದ್ದು ಗ್ರಾಮೀಣ ಬಾಗದಲ್ಲಿ ಶಿಕ್ಷಕರ ಕೊರತೆಯಿದೆ .ಶಿಕ್ಷಕರ ಜವಾಬ್ದಾರಿಗಳು ಇತ್ತಿಚಿನ ದಿನಗಳಲ್ಲಿ ಹೆಚ್ಚಿದ್ದು ಅವುಗಳ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳುನ್ನು ನಮ್ಮ ಶಿಕ್ಷಕರು ಪ್ರಮಾಣಿಕವಾಗಿ ಸೇವೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾದ 27 ಶಿಕ್ಷಕರಿಗೆ ಶಾಸಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಹುದ್ದೆಯಿಂದ ಪದನಿಮಿತ್ತಗೊಂಡು ವರ್ಗಾವಣೆಗೊಂಡ ಉಮಾದೇವಿ .ಪ್ರಭಾರ ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ.ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಗೌಡ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್.ಕಾರ್ಯಧರ್ಶಿ ಆಂಜೇನ್ ನಾಯ್ಕ್.ಎನ್ ಜಿ ಓ ಮಾಜಿ ಅದ್ಯಕ್ಷ ಸತೀಶ್.ಮಾಜಿ ಅದ್ಯಕ್ಷ ಆನಂದಪ್ಪ.ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಪ್ರಕಾಶ್. ರೂಪಾ.ಮಾಜಿ ಅದ್ಯಕ್ಷ ಹುಲ್ಲೆಪ್ಪ.ಸೇರಿದಂತೆ ಹಾಜರಿದ್ದರು