ಜಗಳೂರು ಸುದ್ದಿ:-

ಶುಕ್ರದೆಸೆ ನ್ಯೂಸ್:-

ತಾಲ್ಲೂಕಿನ ವಿವಿಧ ಬಾಗಗಳಲ್ಲಿ ಮಳೆಯಾಗಿದೆ ಗಾಳಿ ಮಳೆಗೆ ಮರಗಳು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಎಂದು ತಿಳಿದು ಬಂದಿದೆ.

ರೈತರು ಇಷ್ಟು ದಿನ ಮಳೆಯಿಲ್ಲದೆ ತಮ್ಮ ತಮ್ಮ ಜಮೀನುಗಳುನ್ನು ಉಳುಮೆ ಮಾಡಿಕೊಂಡು ಮಳೆಗಾಗಿ ಮುಗಿಲು ನೋಡುತಾ ಮಳೆಗಾಗಿ ಪ್ರಾರ್ಥಿಸಿದ್ದರು ಮಳೆ ಬಿದ್ದರೆ ಬಿತ್ತನೆ ಮಾಡಲು ಕಾದು ಕುಳಿತ ರೈತರಿಗೆ ಇದೀಗ ಇಂದು ಸುರಿದ ಮಳೆಗೆ ರೈತರ ಮೋಗದಲ್ಲಿ ಮಂದಹಾಸ ಮೂಡಿಸಿದೆ. ತಾಲ್ಲೂಕಿನ ಬಿಳಿಚೋಡು .ಸೊಕ್ಕೆ. ಕಸಬಾ ಹೊಬಳಿಗಳಲ್ಲಿ ಉತ್ತಮ ಮಳೆಯಾಗಿದ್ದು ಇನ್ನು ಕೆಲ ಬಾಗದಲ್ಲಿ ಸ್ವಲ್ಪ ಪ್ರಮಾಣದ ಮಳೆ ಬಂದಿದೆ ಎನ್ನಲಾಗಿದೆ.

ಇಂದು ಸಂಜೆ ಸುರಿದ ಗುಡುಗು ಸಹಿತ ಗಾಳಿ‌ ಮಳೆಗೆ ಕಾಮಗೆeತನಹಳ್ಳಿ ಭರಮಸಮುದ್ರ ಮಾರ್ಗದ ರಸ್ತೆಗೆ ಅಡ್ಡಲಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಎಂದು ತಿಳಿದು ಬಂದಿದೆ

ಭರಮಸಮುದ್ರ ಗ್ರಾಮದಲ್ಲಿ ಗಾಳಿ ಮಳೆ ರಭಸಕ್ಕೆ ಕೆಲ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ ಕಾಮಗೇತನಹಳ್ಳಿ ಮಾರ್ಗವಾಗಿ ಭರಮಸಮುದ್ರಕ್ಕೆ ಬರುವ, ರಸ್ತೆಯಲ್ಲಿ ಮರವೊಂದು ಮತ್ತು ವಿದ್ಯುತ್ ಕಂಬಗಳು ದಾರಿಗೆ ಅಡ್ಡಲಾಗಿ ಉರುಳಿರುವುದರಿಂದ ಸಂಪರ್ಕ ಖಡಿತಗೊಂಡಂತಾಗಿದೆ ಗ್ರಾಮಸ್ಥರು ವಿದ್ಯುತ್ ಕಂಬಗಳು ಧರೆಗೆ ಉರುಳಿರುವುದರಿಂದ ಸಂಚಾರ ಸಮಯದಲ್ಲಿ ಅತಂಕದಿಂದ ಸಂಚಾರಿಸುವಂತ ಪರಿಸ್ಥಿತಿ ಎದುರಾಗಿದೆ ಸಂಬಂಧಿಸಿದ ಬೆಸ್ಕಾಂ‌ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ವಿದ್ಯುತ್ ಕಂಬಗಳುನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶೀಘ್ರವೆ ಈ ಬಾಗದಲ್ಲಿ ಸುಗಮ ಸಂಚಾರ ಮಾಡಲು ಬೆಸ್ಕಾಂ ಇಲಾಖೆ ಅಧಿಕಾರಗಳು ತೆರವುಗೋಳಿಸುವಂತೆ ಭರಮಸಮುದ್ರದ ಯುವ ರೈತ‌ಮುಖಂಡ ಕುಮಾರ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!