ಜಗಳೂರು

ಶುಕ್ರದೆಸೆ ನ್ಯೂಸ್:-

ಜಗಳೂರು ಸುದ್ದಿ:ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಬಿ.ದೆವೇಂದ್ರಪ್ಪ ಕಿವಿಮಾತು ಹೇಳಿದರು.

ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ (ಪ.ವರ್ಗ) ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ ಅವರು ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿ ಮಾತನಾಡಿದರು.

ಸರ್ಕಾರ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದು ಸುಸಜ್ಜಿತವಾದ ಭೌತಿಕ ಕಟ್ಟಡ ಹೊಂದಿರುವ ವಸತಿ ನಿಲಯದಲ್ಲಿ ಪೌಷ್ಟಿಕ ಅಹಾರ ಇತರೆ ಸೌಕರ್ಯಗಳನ್ನು ತಾವುಗಳು ಸದುಪಯೋಗ ಪಡೆದುಕೊಂಡು ಉತ್ತಮ ವ್ಯಾಸಂಗದೊಂದಿಗೆ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಪೋಷಕರಿಗೆ ಇಲಾಖೆಗೆ ಕೀರ್ತಿ .ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಭವಿಷ್ಯ ತಮ್ಮ ಕೈಯಲ್ಲಿದೆ ಎಂದು ಉದಾಹರಣೆಗೆ ಒಂದು ಉಪಾ ಕಥೆ ಹೇಳುವ ಮೂಲಕ ಪಾರಿವಾಳ ಜ್ಯೋತಿಷಿ ಅವರ ಕಥೆಯೊಂದಿಗೆ ನಿದರ್ಶನ ನೀಡಿದರು.

ಮೊಬೈಲ್ ಬಳಕೆ ತಪ್ಪಲ್ಲ ಅದನ್ನು ಒಳ್ಳೆಯ ವಿಚಾರಧಾರೆಗಳಿಗೆ ಉಪಯೋಗಿಸಿ ಕೆಟ್ಟ ಸಂದೇಶಗಳನ್ನು ಅಳಿಸಿಹಾಕಿ ಎಂದ ಅವರು ಎಲ್ಲಿ ನಾರಿಯರು ಇರುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಾಣ್ಣುಡಿಯಂತೆ ಸಮಾಜದಲ್ಲಿ ಮಹಿಳೆಯರಿಗೆ ಗೌರವಸ್ಥಾನವಿದೆ.ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಿಮ್ಮದಾಗಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಸ್ವಾಭಿಮಾನದ ಬದುಕು,ಐತಿಹಾಸಿಕ ಮಹಿಳಾ ಹೊರಾಟಗಾರ್ತಿಯರು ಆದರ್ಶವಾಗಲಿ ಎಂದು ಹಾರೈಸಿದರು.

ಹಾಸ್ಟೆಲ್ ವ್ಯವಸ್ಥೆ ಕಂಡು ಪ್ರಶಂಸೆ ವ್ಯಕ್ತಪಡಿಸಿದ ಶಾಸಕ:ಬರದನಾಡಿನ ಬಡಮಕ್ಕಳಿಗೆ ವಸತಿನಿಲಯದ ವ್ಯವಸ್ಥೆ ಸುಸಜ್ಜಿತ ಕಟ್ಟಡ ಯಾವ ಐಷರಾಮಿ ಹೊಟೆಲ್ ಗೂ ಕಡಿಮೆಯಿಲ್ಲ.ಉತ್ತಮ ಅಡುಗೆ ಕೊಠಡಿ,ವಸತಿಗೆ ಬೆಡ್ ವ್ಯವಸ್ಥೆ,ಶುಚಿರುಚಿಯಾದ ಊಟ,ಗಾಳಿ ಬೆಳಕಿನ ಹಾಗೂ ಕಂಪ್ಯೂಟರ್ ಲ್ಯಾಬ್ ನ ಹೈಫೈ ಸೌಲಭ್ಯವಿದೆ ಎಂದು ಪ್ರಶಂಸಿದರು.

ನಾನು ಪಿಯುಸಿ ವ್ಯಾಸಂಗಮಾಡುವಾಗ ಸರಿಯಾಗಿ ಒಪ್ಪತ್ತಿನ ಊಟವಿರಲಿಲ್ಲ.ಹಾಸಿಗೆ ಹೊದಿಕೆಯಿಲ್ಲದೆ ಗೋಣಿ ಚೀಲ ಬಳಕೆಮಾಡುತ್ತಿದ್ದೆ.ಕಷ್ಟದ ಮಧ್ಯೆ ಉತ್ತಮ ವ್ಯಾಸಂಗ ಮಾಡಿದರ ಫಲವಾಗಿ ನನ್ನ ಹಾಗೂ ನನ್ನ ಮಕ್ಕಳ ಭವಿಷ್ಯ ಉಜ್ವಲವಾಗಿದೆ ಎಂದು ಸ್ಮರಿಸಿದರು.

ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ,ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಉತ್ತಮ ಗುಣಮಟ್ಟದ ವಿದ್ಯಾರ್ಥಿನಿಯರ ಹಾಸ್ಟೆಲ್ ಸೌಲಭ್ಯ ವಿದೆ.ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ.ಪ್ರತಿ ಹಾಸ್ಟೆಲ್ ನಲ್ಲಿ ವರ್ಷಕ್ಕೆ 100 ವಿದ್ಯಾರ್ಥಿನಿಯರ ದಾಖಲಾತಿಗೆ ಅವಕಾಶವಿದೆ ಅದರಲ್ಲಿ ಶೇ. 25 ರಷ್ಟು ಸಾಮಾನ್ಯ ವರ್ಗದವರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!