posted by shukradeshenews Kannada jlr July 6
ಸುದ್ದಿ ಜಗಳೂರು
ಸರ್ಕಾರ ಪಡಿತರ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಿಸಿ ಖಾತೆಗೆ ಹಣ ಬೇಡ ನ್ಯಾಯಬೆಲೆ ಅಂಗಡಿ ಮಾಲಿಕರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಆಗ್ರಹ.
ಪಟ್ಟಣದ ತಾಲ್ಲೂಕು ಕಛೇರಿಗೆ ಗುರುವಾರ ನ್ಯಾಯಬೆಲೆ ಅಂಗಡಿ ಮಾಲಿಕರ ಸಂಘದ ಪದಾಧಿಕಾರಿಗಳು ತೆರಳಿ ಉಪಾತಹಶೀಲ್ದಾರ್ ಮಂಜಾನಂದರವರಿಗೆ ಮನವಿ ಸಲ್ಲಿಸಿ ಸರ್ಕಾರದ ವಿರುದ್ದ ಗುಡುಗಿದರು. ತಾಲ್ಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಲಿಕರ ಸಂಘದ ತಾಲ್ಲೂಕು ಅದ್ಯಕ್ಷ ಎಂ ಡಿ ರಸೂಲ್ ಮಾತನಾಡಿದರು ರಾಜ್ಯ ಸರ್ಕಾರ ಈಗಾಗಲೇ ಈ ಹಿಂದೆ ಗ್ಯಾರಂಟಿ ಪಡಿತರ 10 ಕೆಜಿ ಅಕ್ಕಿ ಕೋಡುವುದಾಗಿ ಘೋಷಣೆ ಮಾಡಿದಂತೆ ಅಕ್ಕಿಯನ್ನ ವಿತರಿಸಬೇಕು . 5 ಕೆಜಿ ಅಕ್ಕಿ ವಿತರಣೆ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವುದನ್ನ ಕೂಡಲೆ ನಿಲ್ಲಿಸಬೇಕು . ಪಡಿತರ ಖಾತೆಗೆ ಹಣ ಜಮಾ ಮಾಡುವುದಾಗಿ ಆದೇಶ ಮಾಡಿರುವುದನ್ನ ಹಿಂಪಡೆಯದಿದ್ದರೆ ನಾವು ಈ ತಿಂಗಳ ಮಾಯೆಯ ಅಕ್ಕಿಯನ್ನು ಗೋದಾಮುನಿಂದ ಎತ್ತುವಳಿ ಮಾಡುವುದಿಲ್ಲ.ರಾಜ್ಯಾದ್ಯಂತ ನಮ್ಮ ರಾಜ್ಯಾಧ್ಯಕ್ಷ ಕರೆ ಮೇರೆಗೆ ಮಾಲಿಕರುಗಳ ಸಂಘದವತಿಯಿಂದ ನಮ್ಮ ಬೇಡಿಕೆ ಈಡೇರಿಸುವಂತೆ ಮನವಿ ನೀಡಲು ಕರೆ ಕೊಟ್ಟಿದ್ದು ಶೀಘ್ರವೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು.
ಮಾಲಿಕರಾದ ಬಿಳಿಚೋಡು ಹೂಮಣ್ಣ ಮಾತನಾಡಿ
ಅಕ್ಕಿ ಬದಲು ಹಣ ನೀಡಿದರೆ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ 5 ಕೆಜಿ ಕಮೀಷನ್ ನಷ್ಠವಾಗಲಿದೆ. ನಮ್ಮ ಜೀವನ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಲಿಕರಾದ ಹೂಮಣ್ಣ. ಸಂಘದ ಗೌರವದ್ಯಕ್ಷರಾದ ರುದ್ರಮುನಿ ಉಪಾದ್ಯಕ್ಷರಾದ ಬಸವರಾಜ್ ಪ್ರದಾನ ಕಾರ್ಯಧರ್ಶಿ ಕೆ ಹನುಮಂತಪ್ಪ. ಕಾರ್ಯಧರ್ಶಿ ಎಂ ಆರ್ ಪುಟ್ಟಪ್ಪ..ಹೊಮಣ್ಣ. ಖಜಾಂಚಿ ಎಲ್ ಬಿ ಚಂದ್ರಶೇಖರ್.. ಜಿ ಸಿದ್ದಪ್ಪ.ಅಡೆವೆಪ್ಪ ಸೇರಿದಂತೆ ಹಾಜರಿದ್ದರು.