ತೋರಣಗಟ್ಟೆಯಲ್ಲಿ ಕೈವಾರ ತಾತಯ್ಯ ಜಯಂತಿ ಆಚರಣೆ.

ಜಗಳೂರು ಸುದ್ದಿ:ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ಬಲಿಜಿಗ ಸಮಾಜದಿಂದ ಕೈವಾರತಾತಯ್ಯ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಮಾತನಾಡಿ,ದ್ವಾಪರ ಯುಗದಲ್ಲಿ ಸಮಾಜದ ಬದಲಾವಣೆಗೆ ಶ್ರಮಿಸಿದ ಕಾಲಜ್ಞಾನಿ ಕೈವಾರ ತಾತಯ್ಯ ಅವರ ಕೊಡುಗೆ ಅಪಾರವಾಗಿದೆ.ದಾರ್ಶನಿಕರ ತತ್ವಾದರ್ಶಗಳನ್ನು ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಮಾತನಾಡಿ,ಬಲಿಜ ಸಮಾಜದಲ್ಲಿ ಜನಿಸಿದ ನಾವುಗಳು ಶ್ರೇಷ್ಠರಾಗಿದ್ದು.ಲೌಕಿಕತೆ  ತೊರೆದು ಆದ್ಯಾತ್ಮಿಕತೆಯ  ಜಗತ್ತನ್ನು ಪರಿಚಯಿಸಿದ ಯೋಗಿ ನಾರಾಯಣಾಯ  ಕೈವಾರ ತಾತಯ್ಯ ನವರು ನಮಗೆ ಆದರ್ಶವಾಗಿದ್ದಾರೆ‌.ಸಹೋದರ ಸಮಾಜದವರು ವಿಜೃಂಭಣೆಯಿಂದ ಜಯಂತಿಗಳನ್ನು ಆಚರಿಸಲಾಗುತ್ತಿದ್ದು.ನಾವೂ ಒಗ್ಗಟ್ಟಿನಿಂದ ಕೈವಾರ ತಾತಯ್ಯ ಜಯಂತಿಯನ್ನು ಮುಂದಿನ ದಿನಗಳಲ್ಲಿ  ಅದ್ದೂರಿಯಾಗಿ ಪಕ್ಷಾತೀತವಾಗಿ ಆಚರಿಸೋಣ ಎಂದು ಕರೆ ನೀಡಿದರು.

ಮೂರು ಶತಮಾನಗಳ ಹಿಂದೆ ಕಾಲಜ್ಞಾನಿ ನುಡಿದಂತೆ ಕತ್ತಿಗುರಾಣಿಗಳಿಲ್ಲದೆ,ಯುದ್ದತಂತ್ರಗಳನ್ನು ಅರಿಯದ ರಾಜಕಾರಣಿಗಳು ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿರುವುದು ಸತ್ಯಸಂಗತಿಯಾಗಿದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್,ಪ್ರಕಾಶ್,ಜಯಕುಮಾರ್,ಲೊಕೇಶ್ ,ರಾಮಾಂಜನೇಯ,ರುದ್ರಮುನಿ,ಶ್ರೀನಿವಾಸ್,ಸೇರಿದಂತೆ ಇದ್ದರು. 

Leave a Reply

Your email address will not be published. Required fields are marked *

You missed

error: Content is protected !!