By shukradeshenews
Kannada | online news portal | Kannada news online
Shukradeshenews Kannada | online news portal | Kannada news online
news jlr
ಅಂದಿನ ಮೈಸೂರು ರಾಜ್ಯವನ್ನ ಕರ್ನಾಟಕ ರಾಜ್ಯವೆಂದು ಘೋಷಿಸಿ ಹಿಂದೂಳಿದವರ ಕಲ್ಯಾಣಕ್ಕಾಗಿ ಆರ್ಥಿಕ ಸಂಪತ್ತುನ್ನು ಸಮಪಾಲಾಗಿ ಹಂಚಿ ದುರ್ಬಲರ ದ್ವನಿಯಾದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸುರವರ ಕೊಡುಗೆ ಆಪಾರ ಎಂದು ಶಾಸಕ ಬಿ ದೇವೆಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡ ನೆಲ ಜಲ ಭಾಷೆ ಜಾತಿ ಮತಗಳುನ್ನು ಒಳಗೊಂಡಿರುವ ಕರ್ನಾಟಕ ಒಂದು ಶಾಂತಿಯ ತೋಟ್ಟಿಲಂತೆ ಕರ್ನಾಟಕ ಏಕೀಕರಣಕ್ಕೆ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರ ಅಮೋಘ ಸೇವಾ ಕಾರ್ಯ ಶ್ಲಾಘನೀಯ.. . ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸಂಯುಕ್ರಾಶ್ರಯದಲ್ಲಿ ಭಾನುವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ 108ನೇ ದೇವರಾಜ್ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಬಿ ದೇವೆಂದ್ರಪ್ಪ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಉದ್ಗಾಟನೆ ನುಡಿಗಳನ್ನಾಡಿದರು
ಅರಸುರವರು ಶ್ರೀಮಂತ ಮನೆತನದಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. 1952ರಲ್ಲಿ ರಾಜಕೀಯ ಪ್ರವೇಶಿಸಿದ ಅವರು 10 ವರ್ಷಗಳ ಕಾಲ ಶಾಸಕರಾಗಿದ್ದು ನಂತರ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಹಲವು ಜನಪರ ಯೋಜನೆಗಳು ಜಾರಿಗೆ ತಂದು ಬಡವರ ಏಳ್ಗಿಗಾಗಿ ಅವಿರತ ಶ್ರಮವಿದೆ . ಅವರಿಗೆ ಜನಸಾಮಾನ್ಯರ ಬಗ್ಗೆ ಅಪಾರವಾದ ಗೌರವ ಹೊಂದಿದ್ದರು ಎಲ್ಲಾ ವರ್ಗದ ಬಡವರ ನೊಂದವರ ನೆರವಿಗೆ ಧಾವಿಸಿ ಹಲವು ಕಲ್ಯಾಣ ಕಾರ್ಯಗಳ ಯೋಜನೆಗಳನ್ನು ಜಾರಿಗೆ ತಂದು ಹಿಂದೂಳಿದವರ ಅಭಿವೃದ್ಧಿಗೆ ಶ್ರಮಿಸಿರುವ ಅರಸುರವರು ಸಮಾಜದ ಹಿತಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ದೇಶದಲ್ಲಿಯೆ ಮಾದರಿ ಆಡಳಿತ ನಡೆಸಿದ್ದಾರೆ.ಎಂದು ಸ್ಮರಿಸಿದರು.
ಮನುಷ್ಯನ ಬ್ಲಡ್ ಮತ್ತು ಹಣವಂತರ ಹಣ ಒಂದು ಕಡೆ ಶೇಖರಣೆಯಾದರೆ ಅನಾಹುತವಾಗುವುದು ಖಚಿತ ಹಾಗೆ ಸರ್ಕಾರದ ಅಧಿಕಾರಿಗಳು ಹಣವಂತರು ಬ್ಲಾಕ್ ಮನಿ ಇಟ್ಟುಕೊಂಡರೆ ಐಟಿ ರೇಡ್ ಆಗಲಿದೆ ಅದೆ ರೀತಿ ದೇಶದ ಆರ್ಥಿಕ ಅಭಿವೃದ್ಧಿಗೆ ಅಪತ್ತು ಎಂದು ಅಭಿಪ್ರಾಯಪಟ್ಟರು ಆದ್ದರಿಂದ ಹಣ ಮತ್ತು ಬ್ಲಡ್ ಚಲನೆಯಿಲ್ಲಿದ್ದರೆ ಆರೋಗ್ಯವಂತ ಸಮಾಜ ಚಲನೆಯಲ್ಲಿದ್ದು ದೇಶದ ಅಭಿವೃದ್ಧಿ ಸಾದ್ಯ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಸಾಧನೆ ಮಾಡುವಂತ ಕನಸು ಕಾಣಬೇಕು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರಚಿಸಿದಂತ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದು ತಮ್ಮ ಕುಟುಂಬಗಳಿಗೆ ಆದಾರ ಸ್ತಂಭವಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಣ ಹುಲಿ ಹಾಲು ಇದ್ದಂತೆ ಹಾಲು ಕುಡಿದವರು ಘರ್ಜಿಸಲೆಬೇಕು ತಮ್ಮ ಬದುಕು ಉಜ್ವಲಗೊಳಿಸಿಕೊಳ್ಳಿ ಎಂದರು.
ಗ್ರೇಡ್ ಟು ತಹಶೀಲ್ದಾರ್ ಮಂಜಾನಂದ ಮಾತನಾಡಿ ಮೈಸೂರು ರಾಜ್ಯವನ್ನ ಕರ್ನಾಟಕ ರಾಜ್ಯವನ್ನಾಗಿ ನಾಮಕರಣ ಮಾಡಿ ದಿಟ್ಟತನದ ಆಡಳಿತಕ್ಕೆ ಸಾಕ್ಷಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರವರು ಜನಸಾಮನ್ಯರ ಜೊತೆ ಬೆರೆತುಹೋಗಿದ್ದರು ನನ್ನ ಹೆಸರು ಅರಸು ಆಗಿರಬಹುದು ಆದರೆ ನಾನು ಸಾಮಾನ್ಯನಲ್ಲಿ ಸಾಮಾನ್ಯ ನಾಗಿ ಹಿಂದೂಳಿದವರಿಗೆ ಸಾಮಾಜಿಕ ನ್ಯಾಯದ ಮೀಸಲಾತಿ ಕಲ್ಪಿಸಿದ ಜನಕ ಎಂದು ಸ್ಮರಿಸಿದರು.
ಶಿಕ್ಷಕ ರವಿಕುಮಾರ್ ಉಪನ್ಯಾಸ ನೀಡಿದರು ನಮ್ಮ ರಾಜ್ಯ ಬೌಗೋಳಿಕವಾಗಿ 1952 ರಲ್ಲಿ ಕನ್ನಡ ರಾಜ್ಯ ನಾಮಕವ್ಯವಸ್ಥೆ ರಾಜ್ಯವಾಗಿತ್ತು ರಾಜ್ಯದ ನೆಲ ಜಲ ಕನ್ನಡ ಏಕಿಕರಣ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರಿಗೆ ಸಲ್ಲಲಿದೆ. ಉಳುವವನೆ ಭೂ ಒಡೆತನದ ಹಕ್ಕನ್ನು ಜಾರಿಗೆ ತಂದು ಶೈಕ್ಷಣಿಕ ಸಾಂಸ್ಕೃತಿಕ .ರಾಜಕೀಯವಾಗಿ.ಸಾಮಾಜಿಕವಾಗಿ ಬದಲಾವಣೆ ತಂದು .ರಾಜ್ಯದಲ್ಲಿ ಮಲಹೊರುವ ಪದ್ದತಿ ನಿಷೇಧ ಜಾರಿ ಮಾಡಿ ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡಿ ರಾಜ್ಯದಲ್ಲಿ ದಿಟ್ಟತನದ ಸರಳತೆ ನ್ಯಾಯಪರವಾದ ಆಡಳಿತ ನಡೆಸಿದ್ದಾರೆ. .ಎಂದರು ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್. ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶಣ್ಣ.ಜಿಪಂ ಕಾರ್ಯನಿರ್ವಾಹಕ ಸಹಾಯಕ ಅಭಿಯಂತರರಾದ ಶಿವಮೂರ್ತಿ.ಲೋಕಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್. ಮಾಜಿ ತಾಪಂ ಅದ್ಯಕ್ಷ ಸಣ್ಣಸೂರಜ್ಜ.ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಅಸಮಾಭಾನು.ಸಿಡಿಪಿಓ ಇಲಾಖೆ ಅಧಿಕಾರಿ ಬೀರೆಂದ್ರಕುಮಾರ್..ಪಪಂ ಸದಸ್ಯರಾದ ಲುಖ್ಮಾನ್ ಖಾನ್. ರಮೇಶ್ವರೆಡ್ಡಿ.ನಿರ್ಮಲಕುಮಾರಿ.ಲಲಿತಾಮ್ಮ. ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ.ಬಿ ಸಿಎಂ ಇಲಾಖೆ ನೀಲಯ ಪಾಲಕರಾದ ದೇವೆಂದ್ರಪ್ಪ ಸೇರಿದಂತೆ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಮುಖಂಡರಾದ ಮಹಮದ್ ಗೌಸ್ ಸೇರಿದಂತೆ ಹಾಜರಿದ್ದರು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡಿ ಗೌರವಿಸಿದರು . ಶಾಸಕರಿಂದ ಅಲೆಮಾರಿ ಜನಾಂಗದ ಆರ್ಹ ಫಲಾನುಭವಿಗಳಿಗೆ ವಸತಿ ಹಕ್ಕುಪತ್ರ ವಿತರಿಸಲಾಯಿತು.