ಜಗಳೂರು ಸುದ್ದಿ :ಕಾಡು ಪ್ರಾಣಿಗಳಿಂದ ಹಾನಿಯಾದ ಬೆಳೆ ನಷ್ಟ ಪರಿಹಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ರೈತ ಸಂಘದ ಆರೋಪವಾಗಿದೆ . ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಪದಾಧಿಕಾರಿಗಳು ತಹಶೀಲ್ದಾರ್ ಕಛೇರಿಗೆ ತೆರಳಿ ರೈತರ ಜಮಿನುಗಳಲ್ಲಿ ಕಾಡು ಪ್ರಾಣಿಗಳಿಂದ ಹಾನಿಯಾಗಿರುವ ಬೆಳೆ ನಷ್ಠ ಕನಿಷ್ಠ ಪರಿಹಾರ ನೀಡುತ್ತಿಲ್ಲ ಎಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಿ ಸಂತೋಷಕುಮಾರ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯಧರ್ಶಿ ಗೌಡಗೊಂಡನಹಳ್ಳಿ ಸತೀಶ್ ಮಾತನಾಡಿ ಮೆಕ್ಕೆಜೋಳ ಬೆಳೆ ಹಾನಿಗೆ ಸರ್ಕಾರದ ನೀಯಮನುಸಾರ 1200 ರೂ.ಶೇಂಗಾ ಬೆಳೆಗೆ 300೦ ರೂ ಗಳ ತನಕ ನೀಯಮವಿದೆ ಆದರೆ ಆದೀಕಾರಿಗಳು ಸರ್ಕಾರದ ಆದೇಶದಂತೆ ಪರಿಹಾರ ನೀಡುತ್ತಿಲ್ಲ ತಾಲ್ಲೂಕಿನ ರಂಗಯ್ಯನದುರ್ಗದ ಅರಣ್ಯ ಅಸುಪಾಸಿನಲ್ಲಿರುವ ವಿವಿಧ ಗ್ರಾಮದ ಹಳ್ಳಿಗಳ ರೈತರ ಜಮಿನುಗಳಲ್ಲಿ ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳ ಉಪಟ್ಟಳದಿಂದ ಬೆಳೆ ಹಾನಿಯಾಗಿರುತ್ತದೆ.ರೈತರು ಸಾಲ ಸೂಲ ಮಾಡಿಕೊಂಡು ಬಿತ್ತಿದ ಬೆಳೆ ಕೈಗೆ ಸೇರದಂತೆ ಕಾಡಂಚಿನ ಪ್ರಾಣಿಗಳು ಬೆಳೆ ಹಾನಿ ಮಾಡುತ್ತಿವೆ .ಈ ಸಂಬಂಧವಾಗಿ ಈ ಹಿಂದೆ ಅಧಿಕಾರಿಗಳಿಗೆ ರೈತರು ಪರಿಹಾರ ನೀಡುವಂತೆ ಅರ್ಜಿ ನೀಡಿದ್ದೆವೆ ಸಂಬಂಧಿಸಿದ ಅರಣ್ಯ ಅಧಿಕಾರಿಗಳು ಸ್ಥಳ ತನಿಖಾ ವರದಿ ನೀಡಿ ಪರಿಶೀಲನೆ ನಡೆಸಿ ರೈತರು ಅತಂಕ ಬೇಡ ಪರಿಹಾರ ನೀಡುತ್ತೆವೆ ಎಂದು ಭರವಸೆ ನೀಡಿದ್ದರು ಆದರೆ ಇದೀಗ ಬೆಳೆ ಹಾನಿ ರೈತರಿಗೆ ಕೇವಲ 500 ರಿಂದ .700 ರೂಗಳು ಹಣ ಜಮಾ ಮಾಡಲಾಗುತ್ತದೆ ಇದು ಸಾಕಾಗುತ್ತಿಲ್ಲ ಸರ್ಕಾರದ ನೀಯಮದಂತೆ ಪರಿಹಾರ ನೀಡುವಂತೆ ಆಗ್ರಹಿಸಿದರು ಎಂದು ಅರೋಪಿಸಿದರು.. ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದಿಬ್ಬದಹಳ್ಳಿ ಗಂಗಾಧರಪ್ಪ.ಪ್ರಧಾನ ಕಾರ್ಯಧರ್ಶಿ ರಾಜನಹಟ್ಟಿ ರಾಜು.ಸೊಕ್ಕೆ ಹೊಬಳಿ ಅದ್ಯಕ್ಷ ಕೆಂಚಪ್ಪ.ರೈತ ಸಂಘದ ಪದಾಧಿಕಾರಿಗಳಾದ ಚಿಕ್ಕ ಉಜ್ಜಿನಿ ಪರಸಪ್ಪ.ಮುನಿಸ್ವಾಮಿ .ಎಕಾಂತಪ್ಪ.ದೇವೆಂದ್ರಪ್ಪ. ಹನುಮಂತಪ್ಪ. ಕ್ಯಾಸೆನಹಳ್ಳಿ ಬಸಣ್ಣ.ಸೇರಿದಂತೆ ಮುಂತಾದವರು ಹಾಜರಿದ್ದರು.