:ಪಕ್ಷದ ಸಮೀಕ್ಷೆಯಂತೆ ಐವರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ಅಭ್ಯರ್ಥಿಗೆ ಬೆಂಬಲ ನೀಡಿ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿ ಪ್ರಜಾಧ್ವನಿ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕಾಂಕ್ಷಿಗಳಿಗೆ ಪಾಠ

ಜಗಳೂರು ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಜಾ ದ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ದೀಪ ಬೆಳಗಿಸುವ ಮೂಲಕ ಉದ್ಗಾಟಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತವಾಗಿದ್ದರಿಂದ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಜಗಳೂರು ಕ್ಷೇತ್ರಕ್ಕೆ ನಮ್ಮ ಆಡಳಿತ ಸರ್ಕಾರದ ಅವಧಿಯಲ್ಲಿ ಸಿರಿಗೆರೆ ಶ್ರೀಗಳ ತರಳಬಾಳು ಹುಣಿಮೆಯಲ್ಲಿ ವಾಗ್ದಾನದಂತೆ 57 ಕೆರೆ ನೀರು ತುಂಬಿಸುವ ಯೋಜನೆಗೆ 250 ಕೋಟಿ ರೂ ಅನುದಾನ ನೀಡಲಾಗಿತ್ತು.ಕ್ಷೇತ್ರಕ್ಕೆ 15 ಸಾವಿರ ಮನೆಗಳನ್ನು ಬಡವರಿಗೆ ನೀಡಿ ಹಲವು ಭಾಗ್ಯಗಳ ಯೋಜನೆಡಿಯಲ್ಲಿ 7 ಕೆ ಜಿ ಅಕ್ಕಿ.ಅನ್ನ ಭಾಗ್ಯ ಪಶು ಭಾಗ್ಯ ಶ್ಯಾಧಿ ಬಾಗ್ಯ .ವಿಧ್ಯಾರ್ಥಿಗಳಿಗೆ ಶೂ ಬಾಗ್ಯ ಕ್ಷೀರಾ ಭಾಗ್ಯಗಳಂತ ಅನೇಕ ಬಾಗ್ಯಗಳ ಹೆಸರಿನಲ್ಲಿ ಜನಕಲ್ಯಾಣಕ್ಕೆ ಒತ್ತು ನೀಡಲಾಗಿತ್ತು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಶೇ.17.15 ಪರಿಶಿಷ್ಟ ವರ್ಗ 6.95 ಸೇರಿ ಶೇ.24.1 ರಷ್ಟು ಪರಿಶಿಷ್ಠ ಸಮುದಾಯದವರು ವಾಸ ವಾಗಿದ್ದಾರೆ. ನಾನು ಮುಖ್ಯಮಂತ್ರಿಯಾದ ನಂತರ ವಿವಿಧ ಸಮುದಾಯಗಳ ಜನ ಸಂಖ್ಯೆಗಳಿಗನು ಗುಣವಾಗಿ ಎಸ್.ಇ.ಪಿ ಟಿ.ಎಸ್.ಪಿ ಕಾನೂನು ಜಾರಿಗೊಳಿಸಿದೆ.ಆದರೆ ಬಿಜೆಪಿ ಯವರು ದೇಶದ ಯಾವ ರಾಜ್ಯದಲ್ಲಿ ಪರಿಶಿಷ್ಠ ಸಮುದಾಯದ ಪರ ಏಕೆ ಕಾನೂನು ಜಾರಿಗೊಳಿಸಿಲ್ಲ ಹಾಗಾದರೆ ಸಮುದಾಯದವರು ಏಕೆ ಬಿಜೆಪಿಗೆ ಮತನೀಡಬೇಕು ಎಂದು ಪ್ರಶ್ನಿಸಿದರು.ಎಸ್ಸಿ ಎಸ್ಟಿ ಜಾಯ್ದೆ ಜಾರಿಗೆ ತಂದು ಅನುದಾನ ಪರಿಣಾಮಕಾರಿಯಾಗಿ 88 ಸಾವಿರ ಕೋಟಿ ಬಳಕೆಯಾಗುವಂತೆ ಮಾಡಲಾಗಿತ್ತು.ಶುದ್ದ ನೀರಿನ ಘಟಕ ಸ್ಥಾಪನೆ ಮಾಡಿ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸಲಾಗಿತ್ತು .ಇಂದಿರಾ ಕ್ಯಾಂಟಿನ್ ಸ್ಥಾಪಿಸಿ ಬಡವರಿಗೆ ಕಾರ್ಮಿಕರಿಗೆ ವಿಧ್ಯಾರ್ಥಿಗಳಿಗೆ ಊಟ ಸಹಕಾರಿಯಾಗಿತ್ತು .ಆದರೆ ಈ ದುಷ್ಟ ಬಿಜೆಪಿ ಆಡಳಿತದ ಸರ್ಕಾರ ಇಲ್ಲಿನ ಕ್ಯಾಂಟಿನ್ ಮುಚ್ಚಲಾಗಿದೆ ಶುದ್ದ ನೀರಿನ ಘಟಕಗಳ ರಿಪೇರಿ ಮಾಡಿಸದೇ ನಿರ್ಲಕ್ಷ್ಯಿಸಲಾಗಿದೆ. ನಮ್ಮ ಅಭಿವೃದ್ಧಿ ಕೆಲಸಗಳಿಗೆ ನಾಮಫಲಕ ಆಳವಡಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಬಿ ಜೆ ಪಿ ಸರ್ಕಾರ ಜನರ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಬಡವರ ರಕ್ತ ಹೀರುವ 40 ಪರಿಷಂಟ್ ಸರ್ಕಾರದಿಂದ ದೇಶದ ಮತ್ತು ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಬಿ ಜೆ ಪಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಶೇ.40 ಪರ್ಸಂಟೇಜ್ ಸರಕಾರ ಎಂಬುದು ಗುತ್ತಿಗೆದಾರರು ನೊಂದು ಹೇಳಿದ ಮಾತು.ಪಿ.ಎಸ್.ಐ ನೇಮಕಾತಿಯಲ್ಲಿ ರೆಡ್ ಹ್ಯಾಂಡ್‌ಆಗಿ ಲಂಚ ಪ್ರಕರಣ,ಭ್ರಷ್ಟಾಚಾರ ಹೇಳಿಕೆ ಸುಳ್ಳಾ? ಮಾಡಾಳ್ ವಿರುಪಾಕ್ಷಪ್ಪ ನವರ ಪುತ್ರನ ಲೋಕಾಯುಕ್ತರಿಗೆ ಸಿಕ್ಕಿರುವುದಕ್ಕೆ ಸಾಕ್ಷಿಬೇಕಾ? ಹಾಗಾದರೆ ತಂದೆ ಶಾಸಕ ಹಾಗೂ ಸಚಿವರು ಎಷ್ಟು ಎಷ್ಟು ಲಂಚ ಪಡೆದಿರಬಹುದು ಎಂಬುದನ್ನು ಉಹಿಸಿಕೊಳ್ಳಿ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂದು ಆರೋಪಿಸಿದರು. ಸಂವಿಧಾನದ ಮೇಲೆ ಗೌರವವಿಲ್ಲದ ಗೊಲ್ವಾರಕರ್ ದೇಶದಲ್ಲಿ ಕೋಮು ಗಲಭೆ ಜಾತಿ ಜಾತಿ ಒಡೆದು ಆಳುವ ನೀತಿ ಸರಿಯಲ್ಲ. .ಬರುವ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ 10 ಕೆ ಜಿ ಅಕ್ಕಿ 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ ರೂ.ಗಳನ್ನು ನೀಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ನ್ನು ಜನತೆ ಮುಂದೆ ಪ್ರದರ್ಶಿಸಿದರು.. ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಸಲೀಂ ಆಲಿ ಮಾತನಾಡಿ ಬಿಜೆಪಿ ಪಕ್ಷದ ದುರಡಾಳಿತ ಕಂಡಂತ ರಾಜ್ಯದ ಈ ಬಾರಿ ಬದಲಾವಣೆ ಬಯಿಸಿದ್ದಾರೆ ಬರುವ ಚುನಾವಣೆಯಲ್ಲಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾತನಾಡಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಪಕ್ಷದ ಟಿಕೆಟ್ ಯಾರಿಗೂ ಸಿಕ್ಕರು ಸಹ ಪಕ್ಷನಿಷ್ಠೆಯಾಗಿರಬೇಕು. ಕಾಂಗ್ರೆಸ್ ಗೆಲುವು ಮತ್ತು ಸೋಲಿಗು ಕಾರ್ಯಕರ್ತರೆ ಕಾರಣ ಪಕ್ಷದ ಟಿಕೆಟ್‌ ಯಾರಿಗೆ ಸಿಗಲಿ ಒಗ್ಗಟ್ಟಿನಿಂದ ಪಕ್ದದ ಗೆಲುವಿಗೆ ಕೈ ಜೋಡಿಸಿ ಈ ಬಾರಿ ದಾವಣಗೆರೆ 8 ವಿಧಾನಸಭಾ ಕ್ಷೇತ್ರದಲ್ಲಿಯು ಸಹ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು. ಮಾಜಿ ಶಾಸಕ ಹೆಚ್ ಪಿ ರಾಜೇಶ್ ಮಾತನಾಡಿ ಪಕ್ಷದ ಟಿಕೆಟ್ ಯಾರಿಗೆ ಸಿಗಲಿ ಕಾಂಗ್ರೆಸ್ ಗೆಲುವಿಗೆ ಕೈಜೋಡಿಸಬೇಕು . ನಾನು ಶಾಸಕ ನಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ₹3330 ಕೋಟಿ ಅನುದಾನದಲ್ಲಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅಪ ರೂಪದ ಕೊಂಡಕುರಿ ನಾಡು ಏಷ್ಯಾ ಖಂಡದಲ್ಲಿ ಎರಡನೇ ವನ್ಯಜೀವಿ ಧಾಮವಾಗಿರುವ ಪ್ರದೇಶವನ್ನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ.ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ 57 ಕೆರೆ ತುಂಬಿಸುವ ಯೋಜನೆಗೆ ಸಿರಿಗೆರೆ ಶ್ರೀ ಗಳ ಆಶೀರ್ವಾದ ತರಳಬಾಳು ಹುಣ್ಣಿಮೆ ಸಂದರ್ಭ ದಲ್ಲಿ ₹ 250 ಕೋಟಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದು ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಎಂಬುದನ್ನು ನಾವು ಮರೆಯಬಾರದು . ಜಗಳೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿರಬಹುದು ಆದರೆ ನಾವೆಲ್ಲರೂ ಒಂದೇ ಕುಟುಂಬದವರಾಗಿದ್ದು ಯಾರಿಗೆ ಟಿಕೇಟ್ ಸಿಗಲಿ.ಮುಂದಿನ ಭವಿಷ್ಯದ ಕಾಂಗ್ರೆಸ್ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಗೆಲುವಿಗೆ ಸಹಕರಿಸುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ , ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಸಗೋಡು ಜಯಂಸಿಂಹ,ಪ್ರಕಾಶ್ ರಾಥೋಡ್, ಜಯದೇವ ನಾಯ್ಕ.ಡಿ ಬಸವರಾಜ್,ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ,ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,ಯುವ ಕಾಂಗ್ರೆಸ್ ಪಕ್ದದಮುಖಂಡ ರಕ್ಷಾ ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಬಸವಪುರ ರವಿಚಂದ್ರ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಲೊಕೇಶ್,ತಿಪ್ಪೇಸ್ವಾಮಿ ಗೌಡ,ಯು ಜಿ ಶಿವಕುಮಾರ್ ,ಬೈರೇಶ್,ಓಮಣ್ಣ.ಹನುಮಂತಪ್ಪ, ಶಿವಕುಮಾರ್ ಸ್ವಾಮಿ. ಕರಿಬಸನಗೌಡ ,ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!