ವಿಜಯನಗರ ಜಿಲ್ಲೆ

ಕಾಲು, ಬಾಯಿ ಜ್ವರ ತಡೆ ಲಸಿಕಾ ಅಭಿಯಾನಕ್ಕೆ ಚಾಲನೆ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 28

ಕಾನ ಹೊಸಹಳ್ಳಿ: ಸಮೀಪದ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಪಶುಪಾಲನೆ ಆಸ್ಪತ್ರೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇವರ ಸಹಯೋಗದೊಂದಿಗೆ ಮಂಗಳವಾರ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹೂಡೇಂ ಗ್ರಾ.ಪಂ ಅಧ್ಯಕ್ಷ ಬಿ ರಾಮಚಂದ್ರಪ್ಪ ಗೋಮಾತೆಗೆ ಪೂಜೆ ಮಾಡಿ ನಂತರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮನೆಯ ರಾಸುಗಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸಿ ಅವುಗಳ ಜೀವ ಉಳಿಸಿ ಎಂದರು. ಈ ವೇಳೆ ತಾಯಕನಹಳ್ಳಿ ಪಶು ಚಿಕಿತ್ಸಾಲಯ ಡಾ ಸುನಿಲ್ ಕುಮಾರ್ ಮಾತನಾಡಿ, ಬರದ ಪರಿಸ್ಥಿತಿಯಲ್ಲಿ ರೈತರಿಗೆ ಹೈನುಗಾರಿಕೆಯೇ ಮುಖ್ಯವಾಗಿದೆ.

ರಾಸುಗಳಿಗೆ ತಪ್ಪದೆ ಲಸಿಕೆ ಹಾಕಿಸಿ ಎಂದರು. ಈ ವೇಳೆ ಕಾಲು, ಬಾಯಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಮುಖಂಡರಾದ ಹುಡೇಂ ಬೋಸಯ್ಯ, ಸಿಬ್ಬಂದಿ ನಾಗೇಶ್, ಊರಿನ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು‌

You missed

error: Content is protected !!