ಕೊಂಡಕುರಿ ಅಭಯಾರಣ್ಯ ನಿಜಕ್ಕೂ ಪ್ರವಾಸಿತಾಣ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 28

ಜಗಳೂರು ಸುದ್ದಿ:ಪಟ್ಟಣದ ಕನ್ನಡ ಮತ್ತು ಸಂಸ್ಕೃತಿ ಭವನದಲ್ಲಿ ಪಟ್ಟಣ ಪಂಚಾಯಿತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಮತ್ತು ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಸಸಿ ನೆಡುವ ಮೂಲಕ ಶಾಸಕ ಬಿ.ದೆವೇಂದ್ರಪ್ಪ ಅವರು ಉದ್ಘಾಟಿಸಿ ನಂತರ ಮಾತನಾಡಿದ ಅವರು.

ಪಟ್ಟಣದ ಪ್ರತಿ ತಿಂಗಳಿಗೊಮ್ಮೆ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಒಂದೊಂದು ವಾರ್ಡ್ ನಂತೆ ಸ್ವಚ್ಛತೆಗೊಳಿಸಲಾಗುವುದು.ಅಲ್ಲದೆ ಪಟ್ಟಣದಲ್ಲಿನ ಸಾರ್ವಜನಿಕ ಸ್ವಚ್ಛತೆಗೆ ಆಧ್ಯತೆ ನೀಡಲಾಗುವುದು.ಇಡಿ ಪಟ್ಟಣವನ್ನು ಕೇವಲ ಬೆರಳೆಣಿಕೆ ಸಂಖ್ಯೆಯ ಪೌರಕಾರ್ಮಿಕರು ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಅವರ ಸೇವೆಯನ್ನು ಪರಿಗಣಿಸಿ ನೈತಿಕ ಬೆಂಬಲ ವ್ಯಕ್ತಪಡಿಸಬೇಕು.ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸಹಕರಿಸಿದರೆ ಪಟ್ಟಣವನ್ನು ಸುಂದರ ಸ್ವಚ್ಛ ನಗರವನ್ನಾಗಿಸಬಹುದು ಎಂದು ಹೇಳಿದರು.

ಮುಖ್ಯಾಧಿಕಾರಿ ಜವಾಬ್ದಾರಿಗೆ ಶ್ಲಾಘನೀಯ:ಪಟ್ಟಣದಲ್ಲಿ ನಾನು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರಿಗೆ ಸಾಕಷ್ಟು ತಾಕೀತು ಮಾಡಿರುವೆ ಅವರು ಚಾಚು ತಪ್ಪದೇ ಇಲಾಖೆಯ ಸಿಬ್ಬಂದಿಗಳ ಜೊತೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಇಂದಿನ ವಿಶ್ವಪ್ರವಾಸೋದ್ಯಮ ದಿನಾಚರಣೆ ಅರ್ಥಪೂರ್ಣವಾಗಿದೆ.ತಾಲ್ಲೂಕಿನಲ್ಲಿ ದೇಶದಲ್ಲಿಯೇ ಏಕೈಕ ಕೊಂಡಕುರಿ ಅಭಯಾರಣ್ಯವಾಗಿರುವ ತಾಲೂಕಿನ ರಂಗಯ್ಯನ ದುರ್ಗ ಅರಣ್ಯ ಪ್ರದೇಶವಿರುವುದು ಹೆಮ್ಮೆಯ ಸಂಗತಿಯಾಗಿದೆ.ಇದೀಗ ಸರಕಾರದ ಕಾಳಜಿಯಿಂದ ಪ್ರವಾಸಿ ತಾಣದಂತೆ ಕೈಬೀಸಿ ಕರೆಯುತ್ತಿದೆ.ನಾನು ಇದರ ಅಂಚಿನಲ್ಲಿರುವ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಜನಿಸಿ ಬಾಲ್ಯದಲ್ಲಿ ಹೊರಸಂಚಾರದೊಂದಿಗೆ ಕಾಡಿನಲ್ಲಿನ ಸ್ವಾಭಾವಿಕವಾಗಿ ಬೆಳೆದ ಕವಳೆ,ಬಿಕ್ಕೆ ಹಣ್ಣು,ಹಂಪಲು ಗಳನ್ನು ಸವಿದಿದ್ದೇನೆ ಎಂದು ಬಾಲ್ಯದ ನೆನಪು ಮೆಲುಕು ಹಾಕಿದರು.

ಭಾರತ ಸಂಸ್ಕೃತಿ ಮತ್ತು ಸಂಸ್ಕಾರವನ್ನು ವಿಶ್ವಕ್ಕೆ ಸಾರಿದೆ.ದೇಶದ ಜಲ ನೆಲ ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಇದಕ್ಕೆ ಶಿಕ್ಷಣ,ಇಚ್ಛಾಶಕ್ತಿ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪರಿಸರಅಧಿಕಾರಿ ಡಾ. ಲಕ್ಷ್ಮಿ ಕಾಂತ ಮಾತನಾಡಿ,ಪ್ರತಿಯೊಂದು ಮನೆಯಲ್ಲಿ ಸಕಾಲದಲ್ಲಿ ಕಸವನ್ನು ವಿಲೆವಾರಿಮಾಡಬೇಕು.ಅಲ್ಲದೆ ಪರಿಸರ ಹಾಗೂ ಜೀವಸಂಕುಲಕ್ಕೆ ಆಪತ್ತು ಉಂಟುಮಾಡುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.ಪರಿಸರದಲ್ಲಿ ಅತಿ ಹೆಚ್ಚಾಗಿ ಗಿಡಮರಗಳನ್ನು ಬೆಳೆಸಬೇಕು ಇದಕ್ಕೆ ಮಣ್ಣಿನ ಜೊತೆ ನೀರು ಅಗತ್ಯ ಎಂದು ತಿಳಿಸಿದರು.

ಜ್ಞಾತರಂಗಿಣಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಪಿ.ಎಸ್.ಅರವಿಂದನ್ ಮಾತನಾಡಿ,ಖಾಲಿ ನಿವೇಶನದಲ್ಲಿ ಕಸ ಘನ ತ್ಯಾಜ್ಯ ವಸ್ತುಗಳ ವಿಲೆವಾರಿಯಿಂದ ಜಲಮಾಲಿನ್ಯ,ವಾಯುಮಾಲಿನ್ಯ ಉಂಟಾಗುತ್ತವೆ.ತಮಿಳುನಾಡು ರಾಜ್ಯದ ಕುಲಿಪ್ಪಲ್ಲಿ ಮಾದರಿಯಲ್ಲಿ ಸಾರ್ವಜನಿಕ ಶೌಚಾಲಯಬಳಕೆ, ಕಸವಿಂಗಡನೆ,ಜೈವಿಕ ತ್ಯಾಜ್ಯ ವಸ್ತುಗಳ ಮರುಬಳಕೆ ನಿಯಮವನ್ನು ಕರ್ನಾಟಕದಲ್ಲಿ ಪಾಲಿಸಬೇಕು ಎಂದು ನಿದರ್ಶನ ನೀಡಿದರು.

ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ತಿಳಿಸಿದರು.

ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಸುಜಾತಮ್ಮ,ಪದಾಧಿಕಾರಿಗಳಾದ ಪ್ರಾಂಶುಪಾಲ ನಾಗಲಿಂಗಪ್ಪ,ಓಬಣ್ಣ,ಗೀತಾ,ಮಾರಪ್ಪ,ಎ.ಪಿ.ನಿಂಗಪ್ಪ,ಬಡಪ್ಪ,ಆದಂಅಲಿ,ಚೌಡಮ್ಮ,ಸುಮ,ಪ.ಪಂ ಸದಸ್ಯ ರಮೇಶ್ ರೆಡ್ಡಿ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ಪ.ಪಂ ಆರೋಗ್ಯ ನಿರೀಕ್ಷಕ ಖಿಫಾಯತ್, ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!