ನೇಣು ಬಿಗಿದುಕೊಂಡು ರೈಲ್ವೆ ಕೀಪರ್ ಆತ್ಮಹತ್ಯೆ.!
, ಗದಗ : ಗದಗ ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಪಾರ್ವತಿ ಬಾವಿ (28) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ. ಲವ್ ಫೇಲ್ಯೂರ್ ಶಂಕೆ ಹಿನ್ನೆಲೆಯಲ್ಲಿ ಯುವತಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.
ರೈಲ್ವೆ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಯುವಕನ ಪ್ರೀತಿ ಮಾಡ್ತಿದ್ದಳು. ಇನ್ನೂ ಪ್ರೇಮಿಗಳಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಜಗಳ ನಡೆದಿದೆ. ಇದೇ ಕಾರಣಕ್ಕೆ ಮನನೊಂದು ಯುವತಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.
ಸಾವಿಗೂ ಮೊದಲು ಯುವತಿ ಡೆತ್ ನೋಟ್ ಬರೆದಿಟ್ಟಿದ್ದು, ಅದನ್ನು ಪೊಲೀಸರು ಬಹಿರಂಗಪಡಿಸಿಲ್ಲ ಎಂದು ಸ್ಥಳಕ್ಕೆ ಗದಗ ಪೊಲೀಸ್ ಠಾಣೆ ಪೊಲೀಸ್ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.