ಜಗಳೂರು ಸುದ್ದಿ
ಪ್ರಪಂಚದಲ್ಲಿ ಯಾರು ಕದಿಯಲಾರದ ಆಸ್ತಿ ಶಿಕ್ಷಣ ವಿಧ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದ ಜೊತೆಗೆ ಜ್ಞಾನಾಭಿವೃದ್ಧಿಗಾಗಿ ಮಕ್ಕಳ ಗ್ರಂಥಾಲಯ ಅತ್ಯವಶ್ಯಕ ಎಂದು ಗುತ್ತಿಗೆದಾರರಾದ ಕಲೇಶ್ ಎಸ್ ಪಟೇಲ್ ಅಭಿಪ್ರಾಯಪಟ್ಟರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಮಾರ್ಚ್ 1
ತಾಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಾರದ ಪೂಜೆ ಅಂಗವಾಗಿ ನೂತನವಾಗಿ ಮಕ್ಕಳ ಗ್ರಂಥಾಲಯ ಉದ್ಗಾಟಿಸಿ ನಂತರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೇಕಾಗುವ 5ಸಾವಿರ ರೂಗಳ ಪುಸ್ತಕ ಕೊಡುಗೆಯಾಗಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ನಂತರ ಮಾತನಾಡಿದರು
ಮಕ್ಕಳು ತಮ್ಮ ಪಠ್ಯ ಚಟುವಟಿಕೆಗಳ ಜೊತೆಗೆ ವಿವಿಧ ಪುಸ್ತಕಗಳನ್ನು ಅಭ್ಯಾಸ ಮಾಡಿ ಉತ್ತಮ ವಿಧ್ಯಾರ್ಥಿಗಳಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಿ ಹೆಚ್ಚಿನ ಓದಿನ ಪರಿಶ್ರಮದಿಂದ ಉನ್ನತ ಸ್ಥಾನ ಗಳಿಸಲು ಸಾದ್ಯ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೇ ನೀಡಿ ಮುಂದಿನ ವರ್ಷದಲ್ಲಿ ಶಾಲೆಗೆ ಪ್ರಾಜೆಕ್ಟ್ ರ್ ಕೊಡುಗೆಯಾಗಿ ನೀಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. .
ಪತ್ರಕರ್ತ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಗ್ರಂಥಾಲಯ ಎಂಬ ಜ್ಞಾನದ ಭಂಡಾರದಿಂದ ದೇಶದ ಅಭಿವೃದ್ಧಿ ಅಡಗಿದೆ ಸರ್ವರು ಸಮನತೆಯಿಂದ ಬದಕಲು ಶಿಕ್ಷಣ ಒಂದೆ ಅಸ್ತ್ರ ಮಕ್ಕಳ ಗ್ರಂಥಾಲಯ ಸ್ಥಾಪನೆ ಮಾಡಲು 5000 ರೂಗಳಲ್ಲಿ ಪುಸ್ತಕ ಖರದಿಸಿ ನೀಡಿರುವ ನಮ್ಮೂರಿನ ಮಾಜಿ ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಪಿ ಎಸ್ ಸುರೇಶ್ ಗೌಡ್ರುರವರ ಪುತ್ರ ಕಲ್ಲೇಶ್ ಎಸ್ ಪಟೇಲ್ ರವರು ಇಂತ ಹಿಂದೂಳಿದ ಕುಗ್ರಾಮದ ಕನ್ನಡ ಶಾಲೆ ಉಳಿವಿಗೆ ಸಹಾಯಸ್ತ ಚಾಚಿರುವುದು ಶ್ಲಾಘನೀಯ ಎಂದರು
ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಶಶಿಕಲಾ. ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷ ಚೌಡೇಶಿ. ಅಥಿತಿ ಶಿಕ್ಷಕಿ ನಾಗವೇಣಿ. ಊರಿನ ಗ್ರಾಮಸ್ಥರಾದ ಬಾಬಣ್ಣ. ಪೂಜಾರ್ ರಾಜಪ್ಪ.ಬುಳಹಳ್ಳಿ ನಾಗರಾಜ್.ರತ್ನಕ್ಕ.ಶಾಲಾ ಅಡುಗೆ ಸಿಬ್ಬಂದಿ ರತ್ನಮ್ಮ.ಮುಂತಾದವರು ಹಾಜರಿದ್ದರು.