ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾತೃ ಪಿತೃ ಸ್ವರೂಪ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ :ಪೂರ್ಣಿಮಾ ಶ್ರೀನಿವಾಸ್

ಜಗಳೂರು ಸುದ್ದಿ:ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾತೃ ಪಿತೃ ಸ್ವರೂಪವಾಗಿದ್ದು.ದೇಶದ ಅಭಿವೃದ್ದಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ತರಬೇಕಿದೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ತಾಲೂಕಿನ ಚಿಕ್ಕಮನಹಟ್ಟಿ ಗ್ರಾಮದಲ್ಲಿ ಯಾದವ ಸಮಾಜ ಕುರಿತು ಡಾ.ಪ್ರಭಾಮಲ್ಲಿಕಾರ್ಜುನ್ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ದಶಕಗಳ ಬಿಜೆಪಿ ಆಡಳಿತಾವಧಿಯಲ್ಲಿ ಪೆಟ್ರೋಲ್,ಗ್ಯಾಸ್,ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿಸಿದೆ.ಲೋಕಸಭಾ ಚುನಾವಣೆ ಹಿನ್ನೆಲೆ ಪೆಟ್ರೋಲ್ ಬೆಲೆ ಕೇವಲ ₹200 ಇಳಿಕೆಮಾಡಿದೆ.ರೈಲ್ವೆ,ವಿಮಾನಯಾನ ಸೇರಿದಂತೆ ಸರ್ಕಾರಿ ಸ್ವಾಮ್ಯದಲ್ಲಿರುವ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ.ಅಂತೆಯೇ ವೈವಿದ್ಯತೆಯಲ್ಲಿ ಏಕತೆಸಾರುವ ದೇಶದಲ್ಲಿ ಹಿಂದುತ್ವ,ಧರ್ಮದ ಆಧಾರಿತವಾಗಿ ಒಡೆದಾಳುವ ಹುನ್ನಾರ ನಡೆಯುತ್ತಿದೆ’ಎಂದು ಆರೋಪಿಸಿದರು.

‘ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತ ಸರಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ‌ಜಾರಿಗೊಳಿಸಿ ಬಡಜನರ ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸಿದೆ.ಗ್ಯಾರಂಟಿ ಯೋಜನೆಗಳಿಂದ ದೇಶ ಯಾವಕಾರಣಕ್ಕೂ ದಿವಾಳಿಯಾಗುವುದಿಲ್ಲ.ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ಭಾಗ್ಯ ಲಕ್ಷ್ಮಿ ಯೋಜನೆಯಡಿ ₹100,000,ರೈತರ ಸಾಲಮನ್ನಾ,ಮನರೇಗಾ ಯೋಜನೆಯಡಿ ಪ್ರತಿ ಕಾರ್ಡ್ ಗೆ ₹400,ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುತ್ತದೆ’ ಎಂದು ಭರವಸೆ ನೀಡಿದರು.

ಮಾಜಿಪ್ರಧಾನಿ ಇಂದಿರಾಗಾಂಧಿ ಅವರ ಭೂಸುಧಾರಣೆ ಕಾಯ್ದೆ ಸೇರಿದಂತೆ ಜನಪರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದು ಹೇಳಿದರು.

ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾತನಾಡಿ,’ಬಿಜೆಪಿ ಸರಕಾರ ಸುಳ್ಳಿನಮೇಲೆ ರಾಜಕಾರಣ ಮಾಡುತ್ತಿದೆ.ಎಲ್ಲಾ ವರ್ಗದವರಿಗೆ ಸಾಮಾಜಿಕ ಭದ್ರತೆಗೆ ಕಾಂಗ್ರೆಸ್ ಅಗತ್ಯವಿದೆ.ಕಾಡುಗೊಲ್ಲರನ್ನು ಇಡಬ್ಲ್ಯೂ ಎಸ್ ನಡಿ ಇಟ್ಟಿರುವ ಕೇಂದ್ರ ಸರಕಾರದ ನಡೆ ಯಾದವ ಸಮಾಜದ ಮಕ್ಕಳ‌ಶಿಕ್ಷಣಕ್ಕೆ ಸರ್ವತೋಮುಖ ಅಭಿವೃದ್ದಿಗೆ ಮಾದಕವಾಗಿದೆ.ಸಂವಿಧಾನ ವಿರೋಧಿ ನೀತಿ‌ಜಾರಿಗೊಳಿಸಿ ಶೋಷಿತ ವರ್ಗವನ್ನು ಒಕ್ಕಲೆಬ್ಬಿಸುತ್ತಿದೆ ಯಾದವ ಸಮಾಜದವರು ಜಾಗೃತರಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು.ನಾನು ಕಾಂಗ್ರೆಸ್ ಪಕ್ಷದಿಂದ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಜೂನ್ 3 ರಂದು ಹೆಚ್ಚಿನ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು’ ಎಂದು ಕರೆ ನೀಡಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,’ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಶ್ರೀನಿವಾಸ್ ಅವರಿಗೆ ಕ್ಷೇತ್ರದಿಂದ ಸಂಪೂರ್ಣ ಬೆಂಬಲಿಸೋಣ.ಅವರ ಗೆಲುವು ನಿಶ್ಚಿತ ಗೆಲುವಿನ ನಂತರ 101 ಎತ್ತಿನಬಂಡಿ ಮೇಲೆ ಮೆರವಣಿಗೆ ಮಾಡೋಣ.ಹಾಗೂ ನನ್ನ ಸ್ವಗ್ರಾಮ ಚಿಕ್ಕಮ್ಮಮಹಟ್ಟಿಗೆ ₹5 ಕೋಟಿ ಅನುದಾನ ನೀಡಿರುವೆ.ದೇವಸ್ಥಾನ ಅಭಿವೃದ್ದಿ,ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿರುವೆ.ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಹೆಚ್ಚಿನ ಮತಚಲಾಯಿಸಬೇಕು’ ಎಂದು ಮನವಿಮಾಡಿದರು.

ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ತಿಪ್ಪೇಸ್ವಾಮಿ ಗೌಡ,ಪೂರ್ಣಿಮಾ ಪತಿ ಶ್ರೀನಿವಾಸ್,ಜೀವಣ್ಣ,ರಂಗಸ್ವಾಮಿ,ಚಿತ್ತಪ್ಪ,ಕಾಟಪ್ಪ,ಗ್ರಾ.ಪಂ‌ ಸದಸ್ಯ ಮಂಜಣ್ಣ,ವಾಸುದೇವ,ಮಹಮ್ಮದ್ ಅಲಿ,ಬಿ.ಮಹೇಶ್ವರಪ್ಪ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!