ಜಗಳೂರು ಸುದ್ದಿ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಮೇ 16

ಜಗಳೂರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊನ್ನೆ ಮಧ್ಯಾಹ್ನ ಸಮಸ್ಯಾತ್ಮಕ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದ್ದಾರೆ,ಪೋಷಕರು ವೈದ್ಯರುಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸುಮಾರು 4.6 ಕೆಜಿ ಮಗುವಿನ ತೂಕ ಹೊತ್ತ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ‌.ವೈದ್ಯರ ತಂಡ ಹರಸಾಹಸ ಸಾವು ಬದುಕಿನ ಮದ್ಯ ಹೋರಾಟ ನಡೆಸಿದ ಮಹಿಳೆ ಹೆಣ್ಣು ಮಗುವಿಗೆ
ಜನನವಾಗಿದ್ದು ಹೆರಿಗೆ ನಂತರ ಮಗು ಉಸಿರಾಟದ ತೊಂದರೆಯಿಂದ ಸಾವು ಬದುಕಿನ ಮದ್ಯ ಬಳಲುತ್ತಿರುವ ಮಗುವಿಗೆ ಎನ್.ಬಿ.ಎಸ್.ಯು ವೈದ್ಯರ ತಂಡ ತುರ್ತು ಚಿಕಿತ್ಸೆ ಕ್ರಮ ಕೈಗೊಳ್ಳುವ ಮೂಲಕ ಮಗುವಿನ ಪ್ರಾಣ ರಕ್ಷಣೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಬಿಳಿಚೋಡು ಗ್ರಾಮದ ಪೂಜಾ ನಾಗರಾಜ್ ಎಂಬ ಕೂಲಿ ಕಾರ್ಮಿಕ ಮಹಿಳೆ ನಾರ್ಮಲ್ ಹೆರಿಗೆ ಮೂಲಕ ಸುಮಾರು 4.6 ಕೆಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆ ಸಂದರ್ಭದಲ್ಲಿ ಮುಗು ಹುಟ್ಟಿದ ತಕ್ಷಣ ಅಳದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಮಯದಲ್ಲಿ ಸ್ತ್ರೀ ರೋಗ ತಜ್ಞ ಡಾ. ಸಂಜೆಯ , ಮಕ್ಕಳ ತಜ್ಞ ಡಾ. ಜಯಕುಮಾರ್ , ಇ.ಎನ್. ಟಿ ಸ್ಪಷಲಿಸ್ಟ್ ಡಾ. ಕಿರಣ್ ವೈದ್ಯರು ಹಾಗೂ ದಾದಿಯರಾದ ದೀಪಾ ತಂಡ ಮಗು ತುರ್ತು ಚಿಕಿತ್ಸೆ ಮೂಲಕ ಮಗುವನ್ನು ಜೀವನ್ ಮರಣದಿಂದ ರಕ್ಷಣೆ ಮಾಡುವ ಮೂಲಕ ಎಲ್ಲಾರ ಮೆಚ್ಚುಗೆ ಪಾತ್ರರಾಗಿದ್ದಾರೆ. ಇನ್ನೂ ತಾಯಿ ಮಗು ಆರೋಗ್ಯಕರವಾಗಿದ್ದು ಹೆಚ್ಚಿನ ಆರೋಗ್ಯ ಸುಧಾರಣೆಗಾಗಿ ನುರಿತ ವೈದ್ಯರ ಬಳಿ ತಾಯಿ ಮಗುವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾದಿಕಾರಿ ಷಣ್ಮುಖಪ್ಪ ತಿಳಿಸಿದ್ದಾರೆ.

ಅತಿ ಹೆಚ್ಚು ತೂಕವಿರುವ ಮಗುವನ್ನು ನಾರ್ಮಲ್ ಹೆರಿಗೆ ಮಾಡಿಸುವುದು ಕಷ್ಟಕರ ಆದರೆ ನಮ್ಮ ಸಿಬ್ಬಂದಿಗಳ ಸಹಕಾರದಿಂದ ಹಾಗೂ ಮಹಿಳೆ ಮತ್ತು ಪೋಷಕರ ತಾಳ್ಮೆಯಿಂದ ನಾವುಗಳು ಯಶಸ್ವಿ ಹೆರಿಗೆಗೆ ಸಾಕ್ಷಿಯಾಗಿದ್ದೆವೆ ಡಾ.ಸಂಜಯ್ ಹೆರಿಗೆ ತಜ್ಞರು

ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಜಯಕುಮಾರ್, ಶುಶ್ರೂಕೀಯರಾದ ದೀಪಾ , ಜೋತಿ , ಶೈಲಜಾ ಸೇರಿದಂತೆ ಇತರೆ ಸಿಬ್ಬಂದಿಗಳು ಹಾಜರಿದ್ದರು

Leave a Reply

Your email address will not be published. Required fields are marked *

You missed

error: Content is protected !!