Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on may 20

ಜಗಳೂರು ಸುದ್ದಿ:ಆಗ್ನೇಯ ಶಿಕ್ಷಕರ ಕ್ಷೇತ್ರದ ಹೊಸ ಮತದಾರರ ಸೇರ್ಪಡೆ ನೊಂದಣಿಯಿಂದ ವಂಚಿತರಾದ ಉಪನ್ಯಾಸಕರು ತಹಶೀಲ್ದಾರ್ ಕಛೇರಿ ಮುಂಬಾಗ ಜಮಾಯಿಸಿ ಚುನಾವಣಾ ಆಯೋಗಕ್ಕೆ ಕಾರಣ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಅತಿಥಿ ಉಪನ್ಯಾಸಕ ಬುಳ್ಳೇನಹಳ್ಳಿ ಮಹೇಶ್ ಮಾತನಾಡಿ,ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಚುನಾವಣಾ ಆಯೋಗದ ನಿರ್ದೇಶನದಂತೆ ಅನುದಾನಿತ ಮತ್ತು,ಅನುದಾನರಹಿತ,ಸರ್ಕಾರಿ ಪ್ರೌಢಶಾಲೆ,ಹಾಗೂ ಕಾಲೇಜುಗಳಲ್ಲಿ ಸೇವೆಗೈಯುತ್ತಿರಬೇಕು.ಅಗತ್ಯ ದಾಖಲೆಗಳೊಂದಿಗೆ ನೊಂದಣಿಗೆ ಅರ್ಜಿಸಲ್ಲಿಸಬೇಕು ಎಂಬ ಮಾನದಂಡಗಳಿಗೆ ಒಳಪಟ್ಟು ನಿಗದಿತ ಸಮಯದಲ್ಲಿ ನೂತನ ಸೇರ್ಪಡೆಗೆ ಪಟ್ಟಣದ ಹೋಚಿ ಬೋರಯ್ಯ ಹಾಗೂ ವಿವಿಧ ಕಾಲೇಜು ಪ್ರೌಢಶಾಲೆಗಳ ಉಪನ್ಯಾಸಕರು,ಶಿಕ್ಷಕರುಗಳು ದಾಖಲೆಸಮೇತ ಅರ್ಜಿ ಸಲ್ಲಿಸಿದ್ದರೂ ಯಾವುದೇ ಮಾಹಿತಿ ನೀಡದೆ ಚುನಾವಣೆ ಶಾಖೆಯ ನಿರ್ಲಕ್ಷ್ಯದಿಂದ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಮತದಾನದಿಂದ ವಂಚಿತರನ್ನಾಗಿ ಮಾಡಿರುವುದು ನಮ್ಮ ಹಕ್ಕುನ್ನು ಮೊಟುಕುಗೋಳಿಸಿದಂತಾಗಿದೆ ಎಂದು ಆಗ್ರಹಿಸಿದರು.

ಎ ಎಸ್ ಎಪ್ ಐ ವಿಧ್ಯಾರ್ಥಿ ಸಂಘಟನೆ ಮುಖಂಡ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಪುರುಷ 14679,ಮಹಿಳೆಯರು 8835 ಒಟ್ಟು 23514 ಮತದಾರರನ್ನೊಳಗೊಂಡಿದ್ದು.ಜಗಳೂರು ತಾಲೂಕಿನಲ್ಲಿ ಒಟ್ಟು 350 ಮತದಾರರಿದ್ದಾರೆ.ಪ್ರಸಕ್ತಸಾಲಿನಲ್ಲಿ 60 ಜನ ಮಾತ್ರ ಹೊಸ ಸೇರ್ಪಡೆಗೊಂಡಿದ್ದಾರೆ.ಸುಮಾರು 1500 ಕ್ಕೂ ಅಧಿಕ ಪ್ರೌಢಶಾಲೆ ಮತ್ತು ಉಪನ್ಯಾಸಕರುಗಳು ಸೇವೆಸಲ್ಲಿಸುತ್ತಿದ್ದಾರೆ ಆಗ್ನೇಯ ಶಿಕ್ಷಕರ ವಿಧಾನ ಪರಿಷತ್ತು ಚುನಾವಣೆಯಲ್ಲಿ ಪವಿತ್ರ ಮತದಾನದಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿ ಎಂದರು.

ಸಂದರ್ಭದಲ್ಲಿ ಉಪನ್ಯಾಸಕರಾದ ಅಶೋಕ ಕುಮಾರ್, ಮಂಜುನಾಥ್,ರಮೇಶ್,ಶಶಿಕುಮಾರ್ ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!