ಕುಟುಂಬ ನಿರ್ಲಕ್ಷ್ಯ ನಿರ್ಗತಿಕ ವೃದ್ಧನಿಗೆ ನೆರವು

ಜಗಳೂರು: ಎಸ್ಸಿ ಎಸ್ಟಿ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ನೆರವಿನಿಂದ ನಿರ್ಗತಿಕ ವೃದ್ಧನ ರಕ್ಷಣೆ ಮಾಡಲಾಯಿತು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಕುಟುಂಬದ ನಿರ್ಲಕ್ಷ್ಯಕ್ಕೊಳಗಾದ ವೃದ್ದನೊಬ್ಬ ಮೂರು ದಿನಗಳಿಂದ ಊಟವಿಲ್ಲದೆ ನರಳಾಡಿತ್ತಿದ್ದು, ತೀವ್ರವಾಗಿ ಅಸ್ವಸ್ಥನಾಗಿದ್ದ ಇದನ್ನು ಗಮನನಿಸಿದ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಎಸ್ಸಿ ಎಸ್ಟಿ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರ ಗಮನಕ್ಕೆ ತಂದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪತ್ರಕರ್ತರು ವೃದ್ಧನಿಗೆ ಹಣ್ಣಿನ ಜೂಸ್ ಕುಡಿಸಿ ವೃದ್ಧನ ರಕ್ಷಣೆ ಮಾಡಿದರು.

ಪತ್ರಕರ್ತರು ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ,ಸಿಡಿಪಿಓ ಇಲಾಖೆಯ ಅಧಿಕಾರಿಗಳಿಗೆ ಪೋನ್ ಕರೆ ಮೂಲಕ ಗಮನಕ್ಕೆ ತರಲಾಯಿತು. ಸ್ಥಳಕ್ಕೆ ದೌಡಯಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಮಂಜುನಾಥ, ಸಿಡಿಪಿಒ ಅಧಿಕಾರಿ ಬಿರೇಂದ್ರಕುಮಾರ್ ಪ.ಪಂ ಆರೋಗ್ಯ ನಿರೀಕ್ಷಕ ಪ್ರಶಾಂತ್ ನಿರ್ಗತಿಕ ವೃದ್ಧನಿಗೆ ನೆರವಾಗಿ ತಾಲೂಕು ಟಿ ಎಚ್ ಓ ಗಮನಕ್ಕೆ ತಂದು ಅಂಬ್ಯುಲೇನ್ಸ್ ಮೂಲಕ ಪ್ ಸರ್ಕಾರಿ ಆಸ್ಪತ್ರೆಗೆ ಕೊಂಡಯ್ಯದು, ಪ್ರಥಮ ಚಿಕಿತ್ಸೆ ಕೊಡಿಸಿದರು ನಂತರ ಸಮಾಜ ಕಲ್ಯಾಣ ಅಡಿಯಲ್ಲಿ ಬರುವ ನಿರ್ಗತಿಕ ಕೇಂದ್ರಕ್ಕೆ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಸಿ ಎಸ್ಟಿ ವರದಿಗಾರರ ಸಂಘದ ಗೌರವಾಧ್ಯಕ್ಷ ಬಸವರಾಜ್, ಅಧ್ಯಕ್ಷ ಎ‍ಚ್ ಆರ್ ಬಸವರಾಜ್, ಬಾಬು, ಬಸಣ್ಣ,ರವಿ, ಸಂದೀಪ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಪ್ರಶಾಂತ್ ಜೊತೆಗಿದ್ದರು.

Leave a Reply

Your email address will not be published. Required fields are marked *

You missed

error: Content is protected !!