ಪೌರಕಾರ್ಮಿಕರ ಸುರಕ್ಷಿತ ಕಿಟ್ ಧರಿಸಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಿ:ಶಾಸಕ.ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ:ಪೌರ ಕಾರ್ಮಿಕರು ಸ್ವಚ್ಛತಾ ಸುರಕ್ಷಿತ ಕಿಟ್ ಧರಿಸಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದಲ್ಲಿ 34 ಜನ ಪೌರಕಾರ್ಮಿಕರಿಗೆ ಸಮವಸ್ತ್ರ,ಜರ್ಕಿನ್,ಶೂ ವಿತರಿಸಿ ಮಾತನಾಡಿದರು.

‘ಪ್ರತಿನಿತ್ಯ ಬೆಳಿಗ್ಗೆ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆ ಕಾರ್ಯದಲ್ಲಿ ತೊಡಗುವಾಗ ಹಾನಿಕಾರಕ ವಸ್ತುಗಳಿಂದ ಎಚ್ಚರವಹಿಸಬೇಕು.ಇಲಾಖೆಯಿಂದ ನೀಡುವ ಸುರಕ್ಷತಾ ಕಿಟ್ ಗಳನ್ನು ಕಡ್ಡಾಯವಾಗಿ ಕೆಲಸ ನಿರ್ವಹಿಸುವಾಗ ಧರಿಸಬೇಕು‌’ ಎಂದು ಹೇಳಿದರು.

‘ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಸದಾ ಬದ್ದನಾಗಿರುವೆ.ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು’ ಎಂದರು.

ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,ಪಟ್ಟಣದ ಸ್ವಚ್ಛತೆ, ಸೌಂದರ್ಯೀಕರಣದಲ್ಲಿ ಪೌರಕಾರ್ಮಿಕರ ಪಾತ್ರ ಅತಿಮುಖ್ಯ.ಸಾರ್ವಜನಿಕರು ಪೌರಕಾರ್ಮಿಕರನ್ನು ನೋಡುವ ದೃಷ್ಠಿಕೋನ ಬದಲಾಗಿ ಸೇವೆಯನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ನಿವೃತ್ತ ಉಪನ್ಯಾಸಕರಾದ ರಾಜಣ್ಣ,ಸುಭಾಷ್ ಚಂದ್ರಬೋಸ್,ಮುಖಂಡರಾದ ಅರ್ಜುನಪ್ಪ,ಕುರಿ ಜಯ್ಯಣ್ಣ,ಎಂ.ಎಸ್.ಪಾಟೀಲ್, ಪ.ಪಂ ಆರೋಗ್ಯ ನಿರೀಕ್ಷಕ ಪ್ರಶಾಂತ ಕುಮಾರ್,ಇಂಜಿನಿಯರ್ ಶೃತಿ,ಸೇರಿದಂತೆ ಪೌರಕಾರ್ಮಿಕರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!