: ಈ ವರ್ಷ ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಕರ್ನಾಟಕ ಶಾಲಾ ಮಕ್ಕಳ ಬೇಸಿಗೆ ರಜೆ ವಿವರ.
Apr 1, 2023
-24 ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆಗಳು ಮುಗಿದಿದೆ. ಮಾರ್ಚ್ 31 ರಿಂದ SSLC ವಿದ್ಯರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಆರಂಭವಾಗಿದೆ. ಇನ್ನು ಶಾಲಾ ಮಕ್ಕಳಿಗೆ ಈ ಬಾರಿಯ ಬೇಸಿಗೆ ರಜೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ. ಶಾಲಾ ಮಕ್ಕಳಿಗೆ ಈ ಬಾರಿ ಎಷ್ಟು ದಿನಗಳ ಕಾಲ ರಜೆ ಇರುತ್ತದೆ
ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ
ಈ ವರ್ಷದ ಶಾಲಾ ವೇಳಾಪಟ್ಟಿಯನ್ನ ಪ್ರಕಟಿಸಲಾಗಿದೆ. ರಾಜ್ಯ ಪಠ್ಯಕ್ರಮದ, ಸರ್ಕಾರೀ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರಾಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
2023 -24 ಶಾಲಿನ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 10 ರಿಂದ ಶಾಲೆಗಳಿಗೆ ರಜೆ ನೀಡಲಾಗುತ್ತದೆ ಹಾಗೂ 29 ರಿಂದ ಶಾಲೆಗಳು ಪುನಃ ಆರಂಭವಾಗಲಿದೆ. ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿ ಸಿದ್ದಪಡಿಸಲಾಗಿದೆ.
ಈ ಮಾರ್ಗ ಸೂಚಿಯಲ್ಲಿ ಮಾಹೆವಾರು ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆ, ಪರೀಕ್ಷೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ, ಗುಣಮಟ್ಟದ ಶಿಕ್ಶಣಕ್ಕಾಗಿ ಪಲಿತಾಂಶಮುಖಿ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ ಸಿಸಿಇ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಶೈಕ್ಷಣಿಕ ಅವಧಿಗಳು, ರಜಾ ದಿನಗಳನ್ನು ಯೋಜಿಸಿ ಸಿದ್ದಪಡಿಸಲಾಗಿದೆ.
ಶಾಲಾ ರಜೆ ದಿನಗಳ ಪಟ್ಟಿ
ಇನ್ನು 2023 ರ ಮೇ 29 ರಿಂದ ಶಾಲೆ ಆರಂಭಗೊಂಡು, ಅಕ್ಟೊಬರ್ 7 ರತನಕ ಶಾಲೆಗಳು ನಡೆಯಲಿದೆ. ಹಾಗೆಯೆ ಅಕ್ಟೊಬರ್ ನಲ್ಲಿ ಶಾಲಾ ಮಕ್ಕಳಿಗೆ ಮಧ್ಯಂತರ ರಜೆ ನೀಡಲಾಗುತ್ತದೆ.
ಅಕ್ಟೊಬರ್ 8 ರಿಂದ ಅಕ್ಟೊಬರ್ 24 ರತನಕ ಶಾಲಾ ಮಕ್ಕಳಿಗೆ ಮಧ್ಯಂತರ ರಜೆ ಇರುತ್ತದೆ. ಹಾಗೆಯೆ ಮತ್ತೆ ಅಕ್ಟೊಬರ್ 25 ರಿಂದ 2024 ರ ಏಪ್ರಿಲ್ 10 ರ ತನಕ ಶಾಲೆಗಳು ನಡೆಯುತ್ತವೆ. ನಂತರ 2024 -25 ಸಾಲಿನ ಬೇಸಿಗೆ ರಜೆ 2024 ಏಪ್ರಿಲ್ 11 ರಿಂದ ಮೇ 28 ರವರೆಗೆ ಇರುತ್ತದೆ.ಎಂದು ತಿಳಿಸಲಾಗಿದೆ.