ಬೀದಿನಾಯಿಗಳ ಉಪಟಳ:ಸಾರ್ವಜನಿಕರಿಗೆ ತಳಮಳ!
ಜಗಳೂರು ಸುದ್ದಿ:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚೆಗೆ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು.ಸಾರ್ವಜನಿಕರು ಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.
‘ಪಟ್ಟಣದ ಜೆಸಿಆರ್ ಬಡಾವಣೆ,ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ರಸ್ತೆ,ಮಾಂಸದ ಅಂಗಡಿ ಬೀದಿ,ಭುವನೇಶ್ವರಿ ರಸ್ತೆ,ಕ್ಯಾಂಪ್,ತುಮಾಟಿ ಲೇಔಟ್,ಮುಸ್ಲಿಂ ಕಾಲೋನಿ ಸೇರಿದಂತೆ ಶ್ವಾನಗಳ ಸಂಖ್ಯೆ ಹೆಚ್ಚಾಗುವುದಲ್ಲದೆ ಗುಂಪುಗುಂಪಾಗಿ ಎಲ್ಲೆಂದರಲ್ಲಿ ಜನರ ಮೇಲೆ ಎರಗುತ್ತಿವೆ.ಬೀದಿಗಳಲ್ಲಿ ವಯೋವೃದ್ದರು,ಮಕ್ಕಳು,ಮಹಿಳೆಯರು ಓಡಾಡುವುದೇ ಕಷ್ಟವಾಗಿದೆ.ಒಬ್ಬೊಬ್ಬರೇ ಮಕ್ಕಳನ್ನು ಮನೆಯ ಹೊರಗಡೆ ಕಳುಹಿಸುವುದು ಆತಂಕದ ವಿಚಾರವಾಗಿದೆ’.
‘ನಾಯಿಗಳು ಫೀಡಿಂಗ್ ಮತ್ತು ಬ್ರೀಡಿಂಗ್ ಮಾಡುವಾಗ ಜನರ ಓಡಾಟದಿಂದ ಅವುಗಳಿಗೆ ತೊಂದರೆಯಾದರೆ ಮನುಷ್ಯರ ಮೇಲೆ ಎರಗುವುದು ಸಹಜವಾಗಿದೆ.ಪಟ್ಟಣ ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿವತಿಯಿಂದ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಮತ್ತು ಶಸ್ತ್ರ ಚಿಕಿತ್ಸೆ ಮಾಡಲು ಸುಪ್ರೀಂಕೋರ್ಟ್ ಆದೇಶವಿದ್ದರೂ ಯಾರೊಬ್ಬರೂ ಪಾಲನೆಮಾಡುತ್ತಿಲ್ಲ.ಅಲ್ಲದೇ ಪಶುವೈದ್ಯಾಧಿಕಾರಿಗಳು ಈ ಬಗ್ಗೆ ಪೂರ್ವಯೋಜಿತವಾಗಿ ಬೀದಿನಾಯಿಗಳ ಸಮೀಕ್ಷೆ ಶಸ್ತ್ರ ಚಿಕಿತ್ಸೆ ಕೈಗೊಳ್ಳದೆ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿಯೂ ನಿರ್ಲಕ್ಷ್ಯವಹಿಸಿದ್ದು.ಕೆಟಿಟಿಪಿ ಕಾಯ್ದೆ ತಾಲೂಕಿನಲ್ಲಿ ಉಲ್ಲಂಘನೆಯಾಗಿರುವುದು ಅಕ್ಷರಶಃ ಸತ್ಯ’.
ಎಲ್ಲೆಂದರಲ್ಲಿ ಚೆಲ್ಲಾಟ:ಮನೆಗಳಲ್ಲಿ ಉಳಿದ ಆಹಾರಪದಾರ್ಥಗಳ ತ್ಯಾಜ್ಯಗಳನ್ನು ರಾತ್ರಿವೇಳೆ ಬೀದಿನಾಯಿಗಳು ಎಲ್ಲೆಂದರಲ್ಲಿ ಚೆಲ್ಲಾಟವಾಡಿ ಎಸೆಯುತ್ತವೆ ಹಾಗೂ ಮನೆಯ ಬಾಗಿಲಮುಂದಿನ ಚಪ್ಪಲಿಗಳನ್ನು ಕಚ್ಚಿಕೊಂಡು ಬೇರೆಡೆಗೆ ಬಿಟ್ಟುಹೋಗುತ್ತವೆ.ಶ್ವಾನಗಳ ಸಮೂಹ ಮೆಟ್ಟಿಲುಗಳ ಮೂಲಕಮನೆಗಳ ಮೇಲೆ ಮಲಗಿಕೊಂಡು ಕಲುಷಿತಗೊಳಿಸಿ ಹೋಗುವುದು ಸಹಜವಾಗಿದೆ’.
ಬೈಕ್ ಸವಾರರಿಗೆ ಕಿರಿಕಿರಿ:’ಬೀದಿ ಶ್ವಾನದಳದ ಉಪಟಳದಿಂದ ಬೈಕ್ ಸವಾರರು ದಿಕ್ಕುತಪ್ಪುತ್ತಿದ್ದಾರೆ.ಏಕಾಏಕಿ ಬೈಕ್ ಗಳಿಗೆ ಅಡ್ಡಬಂದು ಬಿದ್ದು ಗಾಯಾಳುಗಳಾಗುತ್ತಾರೆ.ಸುಗಮ ರಸ್ತೆಗಳಿಲ್ಲದ ಕೆಲವೆಡೆ ಶ್ವಾನದಾಳಿಗೆ ಹೆದರಿ ಬಿದ್ದಿರುವುದು ಸರ್ವೆಸಾಮಾನ್ಯವಾಗಿವೆ.ನಾಯಿಬೊಗಳುವ ಶಬ್ದಕ್ಕೆ ನಿದ್ರೆಯಿಲ್ಲದೆ ಕಿರಿಕಿರಿ ಅನುಭವಿಸುತ್ತಿದ್ದಾರೆ’.
‘ತಾಲೂಕಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಯ ಸಂಪನ್ಮೂಲ ವೆಚ್ಚದಲ್ಲಿ ಎಬಿಸಿ ಮಾಡಿಸದ ಕಾರಣ ಇದುವರೆಗೂ ಎಷ್ಟು ಸಂಖ್ಯೆಯಲ್ಲಿ ಬೀದಿನಾಯಿಗಳಿವೆ ಎಂಬುದು ಖಚಿತಮಾಹಿತಿಯಿಲ್ಲ.ಕಡ್ಡಾಯವಾಗಿ ತಾಲೂಕಿನಲ್ಲಿ ಎಬಿಸಿ ಮಾಡಿಸಿದರೆ ಮಾತ್ರ ಅವುಗಳ ಹಾವಳಿಯನ್ನು ಮತ್ತು ರೇಬಿಸ್ ರೋಗ ತಡೆಗಟ್ಟಲು ಸಾಧ್ಯ ಎಂಬುದು ಕೆಲ ಪ್ರಾಣಿಶಾಸ್ತ್ರ (ಜೂಯಾಲಜಿ)ಅಧ್ಯಯನವಿಭಾಗದ ತಜ್ಞರ ಅಭಿಪ್ರಾಯವಾಗಿದೆ’.
‘ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದ್ದು.ಏಜೆನ್ಸಿಯಿದೆ ಅವರೊಂದಿಗೆ ಚರ್ಚಿಸಿ ಟೆಂಡರ್ ಪ್ರಕ್ರಿಯೆನಡೆಸಲಾಗುವುದು.ಪಶುಇಲಾಖೆಗೆ ಬೀದಿನಾಯಿಗಳ ಸಂಖ್ಯೆಯ ಬಗ್ಗೆ ಮಾಹಿತಿ ಹಾಗೂ ಶಸ್ತ್ರ ಚಿಕಿತ್ಸೆ ಕೈಗೊಳ್ಳಲು ತಿಳಿಸಲಾಗಿದೆ.ಶೀಘ್ರದಲ್ಲಿ ಬೀದಿ ಶ್ವಾನಗಳ ಉಪಟಳಕ್ಕೆ ಕಡಿವಾಣಹಾಕಲಾಗುವುದು’.
——- ಲೋಕ್ಯಾನಾಯ್ಕ.
ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
‘ಪ್ರತಿನಿತ್ಯ ಮಕ್ಕಳು ಶಾಲೆಗೆ ತೆರಳುವಾಗ ಸಂಜೆ ಮನೆಗಳಿಗೆ ಮರಳುವಾಗ ಬೀದಿನಾಯಿಗಳಿಗೆ ಭಯಪಡುವಂತಾಗಿದೆ.ಮನೆಯಲ್ಲಿನ ವಯೊವೃದ್ದರು,ಚಿಕ್ಕ ಮಕ್ಕಳು ನಿರ್ಭಯದಿಂದ ಓಡಾಡುವುದೇ ಕಷ್ಟವಾಗಿದೆ.ಮಕ್ಕಳ ಕೈಯಲ್ಲಿ ಆಹಾರ,ತಿಂಡಿ ಪದಾರ್ಥಗಳಿರುವುದೇ ನಾಯಿಗಳಿಗೆ ಟಾರ್ಗೆಟ್ ಆಗಿದ್ದು.ಕೂಡಲೇ ಬೀದಿನಾಯಿಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.
——–ಮಹಿಳಾ ಸಂಘದ ಪದಾಧಿಕಾರಿಗಳಾದ ರೂಪಾ .ನೀಲಮ್ಮ ಸಿ.ಕೊಟ್ರಮ್ಮ
ನಿವಾಸಿ,ಜೆಸಿಆರ್ ಬಡಾವಣೆ.