ಸಂವಿಧಾನದಿಂದ ಮನಸ್ಮೃತಿ ಸಂಕೋಲೆಗೆ ಮುಕ್ತಿ:ವಕೀಲ ಡಿ.ಶ್ರೀನಿವಾಸ್.
ಜಗಳೂರು ಸುದ್ದಿ:ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನದಿಂದ ಮನುಸ್ಮೃತಿ ಸಂಕೋಲೆಗೆ ಮುಕ್ತಿದೊರೆತಿದೆ ಎಂದು ವಕೀಲ ಡಿ.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ಮಾನವಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ‘ಬಸವಪಂಚಮಿ’ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲುವಿತರಿಸಿ ಮಾತನಾಡಿದರು.
‘ದೇಶದಲ್ಲಿ ಆಯಕಟ್ಟಿನ ಜಾಗಗಳನ್ನು ಮನುಸ್ಮೃತಿ ಮೂರು ಸಾವಿರ ವರ್ಷಗಳಕಾಲ ಆಕ್ರಮಿಸಿಕೊಂಡು ಮಹಿಳೆಯರನ್ನು ಮಕ್ಕಳನ್ನು ಹೇರುವ ಕಾರ್ಖಾನೆಗಳಿಗೆ ಸೀಮಿತಗೊಳಿಸಿದ್ದರು.ಅಂತೆಯೇತಳಸಮುದಾಯಗಳಮೇಲೆ ನಿರಂತರ ಶೋಷಣೆ ನಡೆದಿವೆ.ಸಂವಿಧಾನ ಜಾರಿಗೊಂಡ ನಂತರ ಸಮಾನತೆ ಸಿಕ್ಕಿದೆ.ಬುದ್ದ,ಬಸವ,ಅಂಬೇಡ್ಕರ್ ಅವರ ಆಶಯಗಳನ್ನು ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಾನವಬಂಧುತ್ವ ವೇದಿಕೆ ರಾಜ್ಯದಲ್ಲಿ ಈಡೇರಿಸುತ್ತಿರುವುದು ಶ್ಲಾಘನೀಯ’ಎಂದರು.
‘ಸಾಂಪ್ರದಾಯಿಕ ಹಬ್ಬಹರಿದಿನಗಳು ಸಂಭ್ರಮ ಹಾಗೂ ಕೌಟುಂಬಿಕ ಸಂಬಂಧಗಳನ್ನು ಬೆಸೆಯುವಂತಾಗಬೇಕು ಆದರೆ ಮೌಢ್ಯತೆಯ ಪ್ರತಿಬಿಂಬವಾಗಬಾರದು.ಈ ನಿಟ್ಟಿನಲ್ಲಿ ವಿದ್ಯಾರ್ಥಿದಿಸೆಯಿಂದಲೇ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ಆಧಾರದಮೇಲೆ ಪಠ್ಯವಸ್ತುಗಳು ಬದಲಾಗಬೇಕು.ದೇಶದ ಸಂಪತ್ತು ಶ್ರಮಿಕ ವರ್ಗಕ್ಕೆ ಸಮಾನ ಹಂಚಿಕೆಯಾಗಬೇಕು.ಜಾತಿವ್ಯವಸ್ಥೆ ಸಂಪೂರ್ಣ ನಿರ್ಮೂಲನೆಯಾಗಬೇಕು.ಕೆಲ ಮಾಧ್ಯಮಗಳು ಮೌಢ್ಯಗಳನ್ನು ವೈಭವೀಕರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಕಳವಳವ್ಯಕ್ತಪಡಿಸಿದರು.
ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹಾಗೂ ಮಾನವಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಮರೇನಹಳ್ಳಿ ಟಿ.ಬಸವರಾಜ್ ಮಾತನಾಡಿ,’ಸಾಮಾಜಿಕ ವ್ಯವಸ್ಥೆಯಲ್ಲಿ ಮೌಢ್ಯತೆ ಹಾಗೂ ಅಸಮಾನತೆಗಳನ್ನು ಹೋಗಲಾಡಿಸುವ ಮೂಲಕ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ.ಮಾನವ ಬಂಧುತ್ವ ವೇದಿಕೆ ರಾಜ್ಯವ್ಯಾಪಿ ಮೌಢ್ಯಮುಕ್ತ ಸಮಾಜಕ್ಕೆ ಸಂಕಲ್ಪಗೈದಿದೆ.ಶೋಷಿತ ವರ್ಗಗಳ ಮಕ್ಕಳಿಗೆ ಉಚಿತ ಸ್ಪರ್ಧಾತ್ಮಪರೀಕ್ಷೆಗಳಿಗೆ ತರಬೇತಿ ಶಿಬಿರ,ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಸ್ಮಶಾನ ವಾಸ್ತವ್ಯ,ಬಸವಪಂಚಮಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪ್ರಗತಿಪರ ಸಂಘಟನೆ ಮುಖಂಡ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,’ಸ್ವಾತಂತ್ರ್ಯ ಹಾಗೂ ಸಂವಿಧಾನ ಜಾರಿಯಾದ ದಶಕಗಳ ನಂತರ ಆಧುನಿಕ ತಂತ್ರಜ್ಞಾನ ಕಾಲಘಟ್ಟದಲ್ಲಿಯೂ ಅಸ್ಪೃಶ್ಯತೆ,ಮಹಿಳೆಯರ ಮೇಲಿನ ದೌರ್ಜನ್ಯಪ್ರಕರಣಗಳು,ಜೀವಂತವಾಗಿರುವುದು’ ಖೇದಕರ ಸಂಗತಿ ಎಂದರು.
ಸಂದರ್ಭದಲ್ಲಿ ವಕೀಲರಾದ ತಿಪ್ಪೇಸ್ವಾಮಿ,ಸಣ್ಣ ಓಬಯ್ಯ,ನಾಗೇಶ್,ಪ್ರಕಾಶ್,ಹಾಲಪ್ಪ,ಪ್ರಗತಿಪರ ಹೊರಾಟಗಾರರಾದ ಸತೀಶ್ ಮಲೆಮಾಚಿಕೆರೆ,ಮಾದಿಹಳ್ಳಿ ಮಂಜುನಾಥ್,ಭರಮಸಮುದ್ರ ಕುಮಾರ್,ನಜೀರ್ ಅಹಮ್ಮದ್,ಓಬಳೇಶ್,ರಮೇಶ್,ಮಂಜುನಾಥ್,ಮುಖ್ಯಶಿಕ್ಷಕ ಬಸವರಾಜ್,ಶಿಕ್ಷಕರಾದ ಮಂಜುನಾಥ್,ಸಾಯಿನಾಥ್,ಟಿ.ಅಖಿಲಾ,ಎಸ್.ಮಮತಾ,ಮಲ್ಲೇಶ್,ರಮೇಶ್,ಶರತ್,ಸೇರಿದಂತೆ ಇದ್ದರು.