ಜಗಳೂರು ಪಟ್ಟಣದ ಬಯಲು ರಂಗಮಂದಿರ ವೇದಿಕೆಯಲ್ಲಿ ಪತ್ರಕರ್ತರ ಬಳಗದಿಂದ 69 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪರವರಿಗೆ ಆತ್ಮೀಯವಾಗಿ ಶುಭಾ ಹಾರೈಸಿದ ಸಂದರ್ಭ
ಕನ್ನಡ ಕಲರ ನುಡಿ ಹಬ್ಬವೆಂದರೆ ಎಲ್ಲಾ ಹಬ್ಬಗಳ ಆಚರಣೆಗಿಂತ ವಿಭಿನ್ನ, ನಿತ್ಯವು ಕನ್ನಡ ನುಡಿ, ಶಬ್ದ,ಅಕ್ಷರಗಳ ಜೊತೆಯಾಗಿ ಒಡನಾಟವನ್ನು ಮಾಡುತ್ತೇವೆ, ವೃತ್ತಿ ಬದುಕು, ಬವಣೆಗಳೇ ಅಕ್ಷರಗಳಾಗಿರುತ್ತವೆ ಅಲ್ಲದೆ ಒಮ್ಮೆ ಒಮ್ಮೆ ಹೊಸ ಹೊಸ ಪದಗಳು ಸಹ ಹುಟ್ಟಿಸುವಷ್ಟು ಕನ್ನಡದಲ್ಲಿ ಬೆರೆತು ಹೋಗಿರುತ್ತೇವೆ…. ಹೀಗೆ ಪ್ರತಿ ವರ್ಷ ಕನ್ನಡರಾಜ್ಯೋತ್ಸವ ಎಂದರೆ ನಾವು ನಿತ್ಯವು ಒಡನಾಟ ಮಾಡುವ ಅಕ್ಷರಗಳ ಹಬ್ಬ ಎಂಬಂತೆ ಭಾಸವಾಗುತ್ತದೆ. ಅಲ್ಲದೆ ಹಲವು ಭಾಷೆಗಳ ವ್ಯಾಮೋಹ ಹಾಗೂ ಭಾಷೆಯ ಮಾಲೀನ್ಯದ ಆಧುನಿಕ ಯುಗದಲ್ಲಿ ಕನ್ನಡವನ್ನು ತಪ್ಪದೇ ಅನುದಿನವು ಬಳಸುವವರು,ಪ್ರೀತಿಸುವವರು ಪತ್ರಕರ್ತರು ಮಾತ್ರ,
ಇಂತಹ ಹಬ್ಬವನ್ನು ಆಚರಿಸುವುದಕ್ಕಾಗಲಿ, ಹಬ್ಬದಲ್ಲಿ ಪಾಲ್ಗೋಳುವುದಕ್ಕಾಗಲಿ ಪತ್ರಕರ್ತನಾಗಿ ಸದಾ ಉತ್ಸುಕನಾಗಿರುತ್ತೇನೆ… ಇಂದು ಸಹ ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಾಸಕ ಬಿ ದೇವೇಂದ್ರಪ್ಪನವರಿಗೆ ಕನ್ನಡರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಹೋದ್ಯೋಗಿಗಳಾದ ವರದಿಗಾರ ಸಂದೀಪ್ ಚಿಕ್ಕಮಲ್ಲನಹೊಳೆ ಶುಕ್ರದೆಸೆನ್ಯೂಸ್ ಪತ್ರಿಕೆ ಸಂಪಾದಕರು ಹಾಗೂ ಬಿಳಿಚೋಡು ಹೊಬಳಿ ಘಟಕದ ಅಧ್ಯಕ್ಷರು ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ, ಪತ್ರಕರ್ತ ಮಾದಿಹಳ್ಳಿ ಮಂಜಪ್ಪ ಜೊತೆಗಿದ್ದರು