filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಸುದ್ದಿ‌ ಜಗಳೂರು

ಶೈಕ್ಷಣಿಕ ಹಕ್ಕಿನ ಹೊರಾಟದ ಮೂಲಕ ಶೋಷಿತ ಸಮುದಾಯಗಳು ಅಸ್ಪೃಶ್ಯತೆಯಂತ ಅನಿಷ್ಠ ಪದ್ದತಿಗಳಿಗೆ ತಿಲಾಂಜಲಿ ಆಡಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು

ಜಗಳೂರು ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಸ್ಪೃಶ್ಯತೆ ನಿವಾರಣೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವೇದಿಕೆ ಸಮಾರಂಭದಲ್ಲಿ ಉದ್ದೆಶಿಸಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು ಅಂದು ಸಮಾಜದಲ್ಲಿ ತಾರತಮ್ಯಧೋರಣೆ ತೋಲಗಿಸಿ ಸಾಮಾಜಿಕ ಸಮಾನತೆಗಾಗಿ ಬುದ್ದ ಬಸವ ಅಂಬೇಡ್ಕರ್ ರಂತ ಮಹಾನಾಯಕರು ಅನೇಕ ಕ್ರಾಂತಿಕಾರಿ ಹೋರಾಟದ ಮೂಲಕ ಸಮನತೆಗಾಗಿ ಶ್ರಮಿಸಿದ್ದರು ಕೂಡ ಇಂದಿಗೂ ಅಸ್ಪೃಶ್ಯತೆ ಪಿಡುಗು ನಿವಾರಣೆಯಾಗಲು ಜಾಗತಿಕ ಜಗತ್ತಿನಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಿರುವುದು ವಿಪರ್ಯಾಸದ ಸಂಗಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಶೋಷಿತ ಸಮುದಾಯಗಳು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬದಲಾಗದೆ ಇಂತ ಅನಿಷ್ಠ ಪದ್ದತಿಗಳು ತೊಲಗುವುದಿಲ್ಲ ಅಧಿಕಾರಿಗಳು ಇಂತ ತಾರತಮ್ಯ ಧೊರಣೆ ಸಮಾಜದಲ್ಲಿ ಕಂಡುಬಂದಲ್ಲಿ ಅಸ್ಪೃಶ್ಯತೆ ಪ್ರತಿಬಂಧ ಕಾಯ್ದೆಡಿಯಲ್ಲಿ ಜಾಗೃತಿ ಮೂಡಿಸಿ ಮರುಕಳಿಸದಂತೆ ನಿಗಾವಹಿಸಬೇಕು ಎಂದರು

ವಕೀಲರಾದ ಪಂಪಣ್ಣ ಮಾತನಾಡಿ ಅಂಬೇಡ್ಕರ್ ರವರ ಸಂವಿಧಾನದಿಂದ ಸಮನತೆ ಸ್ವಾತಂತ್ರ್ಯದಿಂದ ಪ್ರತಿಯೊಬ್ಬ ನಾಗರೀಕರು ಕೂಡ ನೆಮ್ಮದಿ ಬದುಕಿಗೆ ದಾರಿದೀಪಾವೆಂದರು .
ಎಸ್ ಸಿ. ಎಸ್ ಟಿ .ದೌರ್ಜನ್ಯ ತಡೆ ಕಾಯ್ದೆಯಂತ ಕಾನೂನುಗಳ ಅಸ್ತ್ರಗಳಿಂದ ದಲಿತ ಸಮುದಾಯಗಳಿಗೆ ರಕ್ಷಣೆಯಿದ್ದರು ಸಹ ಈ ಆಧುನಿಕತೆಯಲ್ಲಿ ಇನ್ನು ದಲಿತರ ಮೇಲಿನ ದೌರ್ಜನ್ಯಗಳು ಜೀವಂತವಾಗಿ ಅಲ್ಲ ಅಲ್ಲಿ ಘಟನೆಗಳು ನಡೆಯುತ್ತಿವೆ .ಸಂಬಂಧಿಸಿದ ಪೊಲೀಸ್ ಇಲಾಖೆ ಎಸ್ ಸಿ ಎಸ್ ಟಿ ಕುಂದುಕೊರತೆ ಸಭೆ ಮಾಡುವ ಮೂಲಕ ದಲಿತ ಸಮುದಾಯಗಳ ನೆರವಿಗೆ ಧಾವಿಸುವಂತೆ ತಿಳಿಸಿದರು .

. ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿದರು ಸಮಾಜದಲ್ಲಿ ಪ್ರತಿಯೊಬ್ಬರು ಸಾಮರಸ್ಯದಿಂದ ಜೀವಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನ ಶ್ರೀರಕ್ಷೆಯಾಗಿದೆ ತಳಸಮುದಾಯದವರಾದ ನಾವು ಗೊಡ್ಡು ಸಂಪ್ರದಾಯಗಳಿಗೆ ಬಲಿಯಾಗದೆ ಸಂವಿಧಾನಿಕ ಹಕ್ಕುಗಳನ್ನು ಪಡೆದು ಸಮಾಜದಲ್ಲಿ ಇತರರಂತೆ ಜೀವಿಸಲು ಅತ್ಯಂತ ಸಹಕಾರಿಯಾಗಿದೆ ಎಂದರು ಪಪಂ‌ ಸದಸ್ಯ ನಿರ್ಮಲಕುಮಾರಿ ಹನುಮಂತಪ್ಪ ಮಾತನಾಡಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ದಲಿತ ಸಮುದಾಯದವರಿಗೆ ದೇವಾಸ್ಥಾನಗಳಲ್ಲಿ ಪ್ರವೇಶವಿರುವಿದಿಲ್ಲ ಹೆಸರಿಗೆ ಮಾತ್ರ ಇಂತ ಕಾರ್ಯಕ್ರಮಗಳು ಜರುಗುತ್ತವೆ ಪರಿಣಾಮಕಾರಿಗೆ ಬದಲಾಗಬೇಕಿದೆ.

ಈ ಸಂದರ್ಭದಲ್ಲಿ ತಹಶೀಲ್ದಾರ ಸೈಯದ್ ಖಲಿಂ ಉಲಾ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸರಾವ್ .ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ..ಸಿಡಿಪಿಓ ಇಲಾಖೆ ಅಧಿಕಾರಿ ಬೀರೆಂದ್ರಕುಮಾರ್. ಡಿ ಎಸ್ ಎಸ್ ಸಂಚಾಲಕರಾದ ಸೂರಗೂಂಡನಹಳ್ಳಿ ಕುಬೇರಪ್ಪ.ಸತೀಶ್ ಮಲೆಮಾಚಿಕೆರೆ ಬೀದಿನಾಟಕ ಕಲಾವಿದರಾದ ಗ್ಯಾಸ್ ಒಬಣ್ಣ. ಕಲಾವಿದರಾದ ರಾಜಣ್ಣ. ರೇಣುಕಮ್ಮ. ಲತಾ ಪಾಟೀಲ್ ಪಂಪಣ್ಣ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!